ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಪಘಾತ: ಕುರಿಗಾರ, 7 ಕುರಿ ಸಾವು

Lingaraj Badiger
Updated On : 27 Sept 2013, 11:00 am

ಗದಗ: ವೇಗವಾಗಿ ಚಲಿಸುತ್ತಿದ್ದ ಲಾರಿಗೆ ಸಿಲುಕಿ ರಸ್ತೆ ಬದಿ ತೆರಳುತಿದ್ದ 7 ಕುರಿ ಹಾಗೂ ಓರ್ವ ಕುರಿಗಾರ ಸಾವನ್ನಪ್ಪಿರುವ ಘಟನೆ ಗುರುವಾರ ರಾತ್ರಿ ತಾಲೂಕಿನ ಕೋಟುಮಚಗಿ ಗ್ರಾಮದ ಬಳಿ ಸಂಭವಿಸಿದೆ. ಘಟನೆಯಲ್ಲಿ ಈರಪ್ಪ ನೀಲಪ್ಪ ಹರಿಜನ (45) ಮೃತಪಟ್ಟಿದ್ದು, ವೇಗವಾಗಿ ಬಂದ ಲಾರಿಯು ಕುರಿಗಳ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ 7 ಕುರಿಗಳು ಮೃತಪಟ್ಟಿವೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 ನಾಳೆ ವಿದ್ಯುತ್ ವ್ಯತ್ಯಯ
ಗದಗ: 110 ಕೆವಿ ಬೆಟಗೇರಿ, ನರೇಗಲ್ಲ, ರೋಣ, ಹಿರೇಹಾಳ ಹಾಗೂ 33 ಕೆವಿ ವಿದ್ಯುತ್ ಕೇಂದ್ರ ಮುಶಿಗೇರಿ ಹಾಗೂ ಬೇಲೂರು ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಸೆ. 28ರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ 110 ಕೆವಿ ಬೆಟಗೇರಿ, ನರೇಗಲ್ಲ, ರೋಣ, ಹಿರೇಹಾಳ, 33 ಕೆವಿ ವಿದ್ಯುತ್ ಕೇಂದ್ರ ಮುಶಿಗೇರಿ, ಬೇಲೂರು ಕೇಂದ್ರಗಳಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಎಲ್ಲ ನಗರ, ಹಳ್ಳಿಗಳ 11 ಕೆವಿ ವಿತರಣೆ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿದ್ದು, ಸಾರ್ವಜನಿಕರು ಪ್ರಕಟಣೆ ಗಮನಿಸಿ ಸಹಕರಿಸುವಂತೆ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement