ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ಅರಸು ಜಯಂತಿ

Lingaraj Badiger
Updated On : 27 Sept 2013, 10:51 am

ಗದಗ: ಕಾಳಿದಾಸ ಶಿಕ್ಷಣ ಸಮಿತಿ, ದೇವರಾಜ ಅರಸು ವಸತಿ ನಿಲಯ ವತಿಯಿಂದ ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸುರವರ 98ನೇ ಜಯಂತಿ  ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಪಾರಿತೋಷಕ ವಿತರಣೆ ಸಮಾರಂಭವು ಸೆ. 27 ರ ಬೆಳಗ್ಗೆ 11 ಗಂಟೆಗೆ ಜಿಪಂ ಸಭಾಂಗಣದಲ್ಲಿ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಜಯಂತ್ಯುತ್ಸವ ಉದ್ಘಾಟಿಸುವರು. ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಫಕೀರಪ್ಪ ಹೆಬಸೂರು ಅಧ್ಯಕ್ಷತೆ ವಹಿಸುವರು. ಕೆ.ಬಿ. ತಳಗೇರಿ ಉಪನ್ಯಾಸ ನೀಡುವರು. ಡಿಸಿ ಎನ್.ಎಸ್. ಪ್ರಸನ್ನಕುಮಾರ, ಸಿಇಒ ವೀರಣ್ಣ ತುರಮರಿ, ಸಿ.ಆರ್. ಬಳ್ಳಾರಿ, ಎಸ್.ಎಚ್. ಅಂಗಡಿ, ಬನಶಂಕರಿ ಅಂಗಡಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ಇಂದು ರಸಗ್ರಹಣ ಕಾರ್ಯಕ್ರಮ
ಗದಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರ್ಕಾರಿ ಪಪೂ ಮಹಾವಿದ್ಯಾಲಯ ಚಿಂಚಲಿ ಇವರ ವತಿಯಿಂದ ರಸಗ್ರಹಣ ಕಾರ್ಯಕ್ರಮವನ್ನು ಸೆ. 27ರ ಬೆಳಗ್ಗೆ 11ಕ್ಕೆ ಚಿಂಚಲಿಯ ಸರ್ಕಾರಿ ಪಪೂ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ. ಪ್ರಾ. ಜಿ.ವಿ.ಚಿಕ್ಕಮಠ ಅಧ್ಯಕ್ಷತೆ ವಹಿಸುವರು. ಪ್ರಾ. ಚಂದ್ರಶೇಖರ ವಸ್ತ್ರದ ಉಪನ್ಯಾಸಕರಾಗಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.

ಇಬ್ಬರು ಮಕ್ಕಳೊಂದಿಗೆ ಮಹಿಳೆ ಕಾಣೆ: ದೂರು
ರಾಣಿಬೆನ್ನೂರು: ಚಿಕ್ಕ ವಯಸ್ಸಿನ ಇಬ್ಬರು ಮಕ್ಕಳನ್ನು ಕರೆದುಕೊಂಡು ತವರು ಮನೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಗೃಹಿಣಿ ಕಾಣೆಯಾಗಿರುವ ಘಟನೆ ತಾಲೂಕಿನ ಕೂನಬೇವು ಗ್ರಾಮದಲ್ಲಿ ನಡೆದಿದೆ. ಚಂದ್ರಶೇಖರ ಪಾಟೀಲ ಎಂಬುವರ ಪತ್ನಿ ಗೌರಮ್ಮ (25) ತನ್ನಿಬ್ಬರು ಮಕ್ಕಳಾದ ಅಮೋಘ (4) ಹಾಗೂ ವಿಕ್ರಮ (3) ಜತೆ ತನ್ನ ತವರು ಮನೆ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರಕ್ಕೆ ಎಂದು 20 ದಿನಗಳ ಹಿಂದೆಯೇ ಹೇಳಿ ಹೋಗಿದ್ದರು. ಆದರೆ, ತವರೂರಿಗೂ ಬಾರದೆ, ಗಂಡನ ಮನೆಗೂ ಮರಳದೆ ಕಾಣೆಯಾಗಿದ್ದಾರೆ. ತಮ್ಮ ಮಗಳು ಹಾಗೂ ಮೊಮ್ಮಗಳನ್ನು ಹುಡುಕಿ ಕೊಡುವಂತೆ ಗೌರಮ್ಮನ ತಾಯಿ ಮಾದೇವಿ ಹನುಮಂತಪ್ಪ ಹಂದಲಗಿ ಎಂಬುವರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement