ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಉತ್ತಮ ಜೀವನ ನಡೆಸಿ: ಚನ್ನಮಲ್ಲ ಶ್ರೀ

Lingaraj Badiger
Updated On : 27 Sept 2013, 11:00 am

ನರಗುಂದ: ಉತ್ತಮ ಜೀವನ ನಡೆಸಲು ಪ್ರತಿಯೊಬ್ಬರೂ ಗಮನ ನೀಡಿದಲ್ಲಿ ಸಮೃದ್ಧ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಕಿಲ್ಲಾ ತೊರಗಲ್ಲ ಗಚ್ಚಿನ ಹಿರೇಮಠದ ಚನ್ನಮಲ್ಲ ಶ್ರೀಗಳು ಹೇಳಿದರು.
ಅವರು ಈಚೆಗೆ ಪಟ್ಟಣದ ಪತ್ರೀವನ ಮಠದ ಗುರು ಶಂಭುಲಿಂಗ ಮಹಾಸ್ವಾಮಿಗಳ 88ನೇ ಹಾಗೂ 4ನೇ ಪೀಠಾಧಿಪತಿಗಳ 31ನೇ ವರ್ಧಂತ್ಯುತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಿದ್ಧವೀರ ಶ್ರೀಗಳ 31ನೇ ವರ್ಧಂತ್ಯುತ್ಸವ ನಿಮಿತ್ತ 198ನೇ ತುಲಭಾರ ನೆರವೇರಿಸಲಾಯಿತು. ಭೈರನಹಟ್ಟಿ ದೊರಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಚನ್ನಬಸವ ದೇಶಿಕೇಂದ್ರ ಶ್ರೀಗಳು, ಸೊರಟೂರ ಹಿರೇಮಠದ ಫಕೀರೇಶ್ವರ ಶ್ರೀಗಳು, ಬೆನಕೊಪ್ಪ ಶಿವಾನಂದ ಶ್ರೀಗಳು, ಬನಹಟ್ಟಿ ರುದ್ರೇಶ್ವರ ಮಠದ ಸೊಲಬಯ್ಯ ಶ್ರೀಗಳು, ಕಗಧಾಳ ಹನುಮಾರೂಢ ಮಠದ ವೀರಭದ್ರಯ್ಯ ಶ್ರೀಗಳು, ಹಂಚಿನಾಳ ಬಸವಂತ ಶಾಸ್ತ್ರಿಗಳು, ಭದ್ರಗೌಡ ಪಾಟೀಲ, ಗೂಳಪ್ಪ ಪೂಜಾರ ಇತರರು ಇದ್ದರು. ಬಿ.ಎನ್. ಬಿರನೂರ ಸ್ವಾಗತಿಸಿ, ಈಶ್ವರ ಮಠಪತಿ ನಿರೂಪಿಸಿದರು. ಶಿವಯೋಗಿ ಹಾರಗೇರಿಮಠ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement