ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕೆಲಸದಲ್ಲಿ ನಿಷ್ಠೆ ಇರಲಿ: ಪಾಟೀಲ್

Lingaraj Badiger
Updated On : 27 Sept 2013, 10:51 am

ಮುಂಡರಗಿ: ನಾವು ಮಾಡುವ ಕೆಲಸವನ್ನು ಶೃದ್ಧೆ ಹಾಗೂ ಪ್ರಾಮಾಣಿಕತೆಯಿಂದ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ ಹೇಳಿದರು. ಅವರು ಪಟ್ಟಣದ ಪುರಸಭೆ ಗಾಂಧಿಭವನದಲ್ಲಿ ಈಚೆಗೆ ಏರ್ಪಡಿಸಿದ್ದ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದವರು ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚಾರಣೆ ಉದ್ಘಾಟಿಸಿ ಮಾತನಾಡಿದರು. ನಗರದ ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ನೀಡುವುದೇ ನಮ್ಮ ಕರ್ತವ್ಯ ಎಂದು ತಿಳಿದು ನಿಷ್ಠೆಯಿಂದ ಕೆಲಸ ಮಾಡಬೇಕು. ಪ್ರತಿ ವಾರ್ಡಿನ ಸ್ವಚ್ಛತೆಯ ಬಗ್ಗೆ ತಾವುಗಳು ಗಮನ ಕೊಡಬೇಕು ಎಂದರು.  ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಬಸವರಾಜ ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಅಭಿಯಂತರ ಐ.ವಿ. ಕೊಂಗವಾಡ, ಸದಸ್ಯ ವೀರೇಶ ಸಜ್ಜನರ, ಸೋಮನಗೌಡ ಗೌಡ್ರ, ಎಸ್.ಬಿ. ಪಾಟೀಲ, ಬಸಮ್ಮ ಮಳ್ಳಸಿದ್ದಪ್ಪನವರ, ಎಸ್.ಪಿ. ಹ್ಯಾಡ್ಲಮಠ, ವಿ.ಬಿ. ಕುಂಬಾರ, ಗಣೇಶ ಶೇಡದ, ಎ.ಎಫ್.ದೊಡ್ಡಮನಿ, ಎಸ್.ಟಿ. ಹುಬ್ಬಳ್ಳಿ, ಉಪಾಧ್ಯಕ್ಷ ಮುದಕಪ್ಪ ಬಚ್ಚನಳ್ಳಿ, ಕಾರ್ಯದರ್ಶಿ ರವಿ ಕುಂಬಾರ, ಗೌರವ್ವ ಹರಿಜನ, ಲಕ್ಮವ್ವ ಹರಿಜನ, ಗಾಳೆವ್ವ ಹರಿಜನ, ಕೆಂಪಸಾಬಣ್ಣವರ, ನದಾಫ, ಹಾಲಿನವರ, ಅಯ್ಯಪ್ಪ ಸತ್ಯಮ್ಮನವರ ಇದ್ದರು. ಮೈಲಪ್ಪ ದೊಡ್ಡಮನಿ ಸ್ವಾಗತಿಸಿ, ವಂದಿಸಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement