ನೀರು ಪೂರೈಕೆ ಮಾಹಿತಿ
ಗದಗ: ನಗರದ ಹೊಳೆಯನ್ನವರ ಲೈನ್, ಲಿಂಬಯ್ಯಮಠ ಲೈನ್, ಗೌಡ್ರ ಲೈನ್, ದಂಡಿನ ಲೈನ್, ಕುಲಕರ್ಣಿ ಲೈನ್, ಮ್ಯಾನೇಜರ ಲೈನ್, ಬೇನಹಾಳ ಲೈನ್, ನಾಡಗೌಡ್ರ ಲೈನ್, ಇರಾಣಿ ಕಾಲೋನಿ, ಚಿಕ್ಕಮಠ ಲೈನ್, ಗವಿಮಠ ಲೈನ್, ನವೋದಯ ಲೈನ್, ನಾಗರಳ ಲೈನ್, ಹಿಟ್ಟಿನ ಗೀರಣಿ ಲೈನ್, ಹೊಳೆ ಲೈನ್, ಚಂಗೇಶಖಾನ್ ಲೈನ್, ಕರಿಯಮ್ಮದೇವಸ್ಥಾನ ಲೈನ್, ಆಸಂಗಿ ಲೈನ್, ಸಿದ್ಧಪ್ಪ ಲೈನ್, ಕರಿಯಮ್ಮಪಾದಗಟ್ಟಿ ಲೈನ್, ದಂಡುಶಿ ಲೈನ್, ರಾಘವೇಂದ್ರಮಠ ಲೈನ್, ಬಿಎಡ್ ಕಾಲೇಜ್‌ಲೈನ್, ಚರ್ಚ್ ಲೈನ್, ಬಳ್ಳಾರಿ ಲೈನ್, ಉಪ್ಪಿನ ಲೈನ್, ಕಟ್ಟಿಮನಿ ಲೈನ್, ಗುರಮಠ ಲೈನ್, ತಡಹಾಳ ಲೈನ್, ಕೋತಂಬ್ರಿ ಲೈನ್, ಪೆಂಡರಗಲ್ಲಿ ಲೈನ್, ನಂದರಗಿ ಲೈನ್, ಅಬ್ಬಿಗೇರಿ ಲೈನ್‌ದಿಂದ ಮುಳಗುಂದ ಲೈನ್‌ವರಗೆ, ಬೋರೆಗಾರ ಓಣಿ, ಧಾನಿ ಮಾಸ್ತರ್ ಲೈನ್, ಚಿಕ್ಕಣ ಲೈನ್, ಪಡಸಾಲಿ ಲೈನ್, ಕಬಾಡಿ ಲೈನ್, ಶಿರಹಟ್ಟಿ ಲೈನ್, ಮಜ್ಜಗಿ ಲೈನ್, ಗಾರ್ಗಿ ಮಾಸ್ತರ್ ಲೈನ್, ಪವಾರ ಲೈನ್, ಅಂಬೇಡ್ಕರ್ ನಗರ, ಸಿದ್ಲಿಂಗ ನಗರ, ಪಂಚಲಕ್ಷ್ಮೀ ಬಡಾವಣೆ ಲೈನ್, ಶಿವಾಜಿ ನಗರ ಈ ಪ್ರದೇಶಗಳಲ್ಲಿ ಶುಕ್ರವಾರ ನೀರು ಪೂರೈಕೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಸಚಿವ ಎಚ್.ಕೆ. ಪಾಟೀಲ ಪ್ರವಾಸ ಕಾರ್ಯಕ್ರಮ
ಗದಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ ಸೆ. 27ರಂದು ಗದುಗಿಗೆ ಆಗಮಿಸುವರು. ಬೆಳಗ್ಗೆ 10ಕ್ಕೆ ಕನಕಭವನದಲ್ಲಿ ಕಾಳಿದಾಸ ಶಿಕ್ಷಣ ಸಮಿತಿಯಿಂದ ಜರುಗುವ ಡಿ. ದೇವರಾಜ ಅರಸುರವರ 98ನೇ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಭಾಗವಹಿಸುವರು. ಮತ್ತು ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ಗದಗ: ಸಮಾರೋಪ ಸಮಾರಂಭ ಇಂದು
ಗದಗ: ನಗರದ ಮಹೇಂದ್ರಕರ್ ವೃತ್ತದ ಬಳಿಯಿರುವ ನ್ಯೂ ಎಕ್ಸ್‌ಲೆಂಟ್ ಸಿಇಟಿ ಕೋಚಿಂಗ್ ಸೆಂಟರ್‌ನಲ್ಲಿ ಸೆ. 27ರ ಬೆಳಗ್ಗೆ 11ಕ್ಕೆ ಕೂಗು ಜಾನಪದ ಜಾಗೃತಿ ಸಮಿತಿ ವತಿಯಿಂದ ಜಾನಪದ ಗೀತೆಗಳ ಬರೆಯುವ ಸ್ಪರ್ಧೆಯ ಸಮಾರೋಪ ಸಮಾರಂಭ ನಡೆಯಲಿದೆ. ರಂಗಭೂಮಿಯ ಹಿರಿಯ ಕಲಾವಿದ ವೈ.ಎನ್. ಗೌಡರ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ನ್ಯೂ ಎಕ್ಸ್‌ಲೆಂಟ್ ಕೋಚಿಂಗ್ ಸೆಂಟರ್‌ನ ನಿರ್ದೇಶಕ ಎಂ.ಎಸ್. ಹುಲ್ಲೂರ ವಹಿಸುವರು. ಸತೀಶ ಪಾಶಿ ಉಪನ್ಯಾಸ ನೀಡುವರು. ಅತಿಥಿಗಳಾಗಿ ಆರ್.ವಿ. ರಾಂಪುರ, ಎಂ.ಎಸ್. ನರೇಗಲ್ಲ, ನಗರಸಭೆ ಸದಸ್ಯ ಆರ್.ಬಿ. ಯಳವತ್ತಿ, ವಿ.ಆರ್. ಮಾಳೆಕೊಪ್ಪಮಠ, ಸುರೇಶ ಮೇದಾರ, ಎಂ.ಬಿ. ದೇಸಾಯಿ, ಎಂ.ಎಸ್. ಬಿಂಗಿ, ಗಣೇಶ ಹುಬ್ಬಳ್ಳಿ, ಎಂ.ಎಚ್. ಮುಳಗುಂದ ಮುಂತಾದವರು ಉಪಸ್ಥಿತರಿರುವರು ಎಂದು ಕೂಗು ಸಂಘಟನೆಯ ಅಧ್ಯಕ್ಷ ಗವಿಸಿದ್ದಯ್ಯ ಹಳ್ಳಿಕೇರಿಮಠ ತಿಳಿಸಿದ್ದಾರೆ.