ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರಸ್ತೆಗೆ ಡಾ. ರಾಜಕುಮಾರ್ ಹೆಸರಿಡಿ: ಮನವಿ

Lingaraj Badiger
Updated On : 27 Sept 2013, 11:00 am

ಗಜೇಂದ್ರಗಡ: ಸ್ಥಳೀಯ ದುರ್ಗಾ ವೃತ್ತದಿಂದ ಕಾಲಕಾಲೇಶ್ವರ ವೃತ್ತದವರೆಗಿನ ಮಧ್ಯೆದಲ್ಲಿನ ಜೋಡು ರಸ್ತೆಗೆ ವರನಟ ಡಾ. ರಾಜಕುಮಾರ್ ಜೋಡು ರಸ್ತೆ ಎಂದು ನಾಮಕರಣ ಮಾಡುವಂತೆ ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿಗಳ ಸಂಘ ಹಾಗೂ ಕರವೇ ಕಾರ್ಯಕರ್ತರು ಈಚೆಗೆ ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ ಅವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು.
ಡಾ. ರಾಜ್ ಅಭಿಮಾನಿ ಸಂಘದ ಅಧ್ಯಕ್ಷ ಸಂಗಪ್ಪ ಯಲಬುಣಚಿ ಮಾತನಾಡಿ, ನಾಡು ಕಂಡ ಹೆಮ್ಮೆಯ ನಟ ಡಾ. ರಾಜಕುಮಾರ್ ಕೇವಲ ಕನ್ನಡ ಚಿತ್ರರಂಗಕ್ಕೆ ಸೀಮಿತವಾಗದೆ ನಾಡು, ನುಡಿ, ನೆಲ, ಜಲ ಭಾಷೆಯ ಉಳುವಿಗಾಗಿ ನಾಡಿನ ಉದ್ದಗಲಕ್ಕೂ ಸಂಚರಿಸಿ ಕನ್ನಡ ಭಾಷಾಭಿಮಾನ ಮೆರೆದ ಮಹಾನ್ ನಟರಾಗಿದ್ದಾರೆ. ಕನ್ನಡ ಚಿತ್ರರಂಗ ಹೊರತುಪಡಿಸಿ ಬೆರೆ ಯಾವುದೇ ಭಾಷೆಗಳಲ್ಲಿ ನಟಿಸದೇ ನಾಡಿನ ಕೋಟ್ಯಾನುಕೋಟಿ ಅಭಿಮಾನಿಗಳ ಆರಾಧ್ಯ ದೈವ ಎನಿಸಿದ್ದಾರೆ. ಈ ನಿಟ್ಟಿನಲ್ಲಿ ಪುರಸಭೆ ಆಡಳಿತ ಪಟ್ಟಣದ ಪ್ರತಿಷ್ಠಿತ ಜೋಡು ರಸ್ತೆಗೆ ಡಾ. ರಾಜ್ ಜೋಡು ರಸ್ತೆ ಎಂದು ನಾಮಕರಣ ಮಾಡಿ ಮೇರುನಟನ ಹೆಸರು ಅಜರಾಮರವಾಗಿ ಉಳಿಸಿ ಎಂದರು.
ಮನವಿ ಸ್ವೀಕರಿಸಿದ ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ ಮಾತನಾಡಿ, ಈ ಕುರಿತು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರೊಂದಿಗೆ ಚರ್ಚಿಸಿ ನಿರ್ಧರಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ಅಕ್ಕಮ್ಮ ಜಾನಾಯಿ, ಕಳಕಪ್ಪ ಪೋತ, ಶಿವರಾಜ ಚಂಗಳಿ, ಶ್ರೀಕಾಂತ ಕಮ್ಮಾರ, ಕಳಕಪ್ಪ ಹಡಪದ, ಮುರ್ತುಜಾ ಒಂಟಿ, ನಾಗೇಶ ಪವಾರ, ಅಶೋಕ ವದೇಗೋಳ, ಅಶೋಕ ಮ್ಯಾಕಲ, ರವಿ ರಜಪೂತ, ಶೇಖಪ್ಪ ಮ್ಯಾಗೇರಿ, ಕಳಕೂಸಾ ಶಿಂಗ್ರಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement