ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಚನಗಳ ಕೊಡುಗೆ ಅಪಾರ: ಶ್ರೀ

Lingaraj Badiger
Updated On : 28 Sept 2013, 10:53 am

ರೋಣ: ಜನರಲ್ಲಿ ನೈತಿಕ ಮೌಲ್ಯ ತುಂಬುವಲ್ಲಿ ಹಾಗೂ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸುವಲ್ಲಿ ಶರಣರು, ಸಂತರು, ದಾರ್ಶನಿಕರು ರಚಿಸಿದ ವಚನಗಳು ಅಪಾರ ಕೊಡುಗೆ ನೀಡಿವೆ ಎಂದು ಬೀದರ್ ಜಿಲ್ಲೆಯ ಚಟ್ಟಿಹಳ್ಳಿಯ ಜಗದ್ಗುರು ಅಲ್ಲಮಪ್ರಭು ದೇವರಮಠದ ಸಿದ್ದೇಶ್ವರಾನಂದ ಶ್ರೀಗಳು ಹೇಳಿದರು.
ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ (ಬಿ.ಇಡಿ.) ಪ್ರಶಿಕ್ಷಣಾರ್ಥಿಗಳಿಗಾಗಿ ಶುಕ್ರವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳ ಜೀವನದಲ್ಲಿ ನೈತಿಕ ಮೌಲ್ಯಗಳು ಕುರಿತು ಜರುಗಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೈತಿಕ ಮೌಲ್ಯಗಳ ಕೊರತೆಯಿಂದ ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರದಂತ ಅಪರಾದ ಕೃತ್ಯಗಳ ಜರುಗುತ್ತಿವೆ. ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು, ಬದುಕನ್ನ ಸುಂದರಗೊಳಿಸಲು ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಆ ದಿಶೆಯಲ್ಲಿ ಶರಣ, ಸಂತರ ವಚನಗಳಲ್ಲಿನ ತತ್ವ, ಸಂದೇಶ, ನೀತಿಸಾರಗಳನ್ನು ತಿಳಿಯಬೇಕು ಎಂದರು.
ಪ್ರಾಚಾರ್ಯ ವೈ.ಎನ್. ಪಾಪನ್ನವರ ಮಾತನಾಡಿದರು. ಉಪನ್ಯಾಸಕ ಶರಣು ಗೋದಿ, ಎಚ್.ಆರ್. ದೊಡ್ಡಮನಿ, ಸಿದ್ದಪ್ಪ ಪಿ., ಜಿ.ಎನ್. ನಾಯಕ, ಎಚ್.ಎಂ. ಕಂದಗಲ್, ಮೌನೇಶ ಬಡಿಗೇರ, ವಿದ್ಯಾರ್ಥಿ ಪ್ರತಿನಿಧಿ ಮಹೇಶ ಅಚ್ಚನಗೌಡ್ರ ಮುಂತಾದವರು ಇದ್ದರು.
ಉಪನ್ಯಾಸಕ ಎಸ್.ಆರ್. ಐಹೊಳ್ಳಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement