ತರಬೇತಿಗಾಗಿ ಅರ್ಜಿ ಆಹ್ವಾನ
ಗದಗ: ಸರ್ಕಾರಿ ಕುಶಲಕರ್ಮಿ ತರಬೇತಿ ಸಂಸ್ಥೆ ಗದಗದಲ್ಲಿ ಎಲೆಕ್ಟ್ರಿಕಲ್ ತರಬೇತಿಗಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. 18 ರಿಂದ 35 ವರ್ಷದ ವಯೋವುತಿ ಒಳಗಿನ ಹಾಗೂ 10ನೇ ತರಗತಿ ಪಾಸಾಗಿರುವ ಗ್ರಾಮೀಣ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಆಸಕ್ತರು ನಗರದ ಸ್ಟೇಶನ್ ರಸ್ತೆಯಲ್ಲಿರುವ ಕುಶಲಕರ್ಮಿ ತರಬೇತಿ ಸಂಸ್ಥೆ ಜಿಪಂ ಗದಗ (ದೂರವಾಣಿ 08372-220506) ಇವರಿಂದ ಅರ್ಜಿಯನ್ನು ಪಡೆದು ಅ. 8ರ ಒಳಗಾಗಿ ಸಲ್ಲಿಸುವುದು. ವಿದ್ಯಾರ್ಹತೆಯ ನಕಲು ಪ್ರತಿ ವಯಸ್ಸಿನ ದಾಖಲೆ ಹಾಗೂ ಗ್ರಾಮೀಣ ನಿವಾಸಿಯಾಗಿರುವುದಕ್ಕೆ ಪಡಿತರ ಚೀಟಿ ಅಥವಾ ರಹವಾಸಿ ಪ್ರಮಾಣ ಪತ್ರ ಕಡ್ಡಾಯವಾಗಿ ಲಗತ್ತಿಸುವುದು ಹಾಗೂ ಅರ್ಜಿ ಸಲ್ಲಿಸಿದವರು ಅ. 10 ಬೆಳಗ್ಗೆ 11 ಕ್ಕೆ ತಮ್ಮ ಮೂಲ ದಾಖಲಾತಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕೆಂದು ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗ(ಖಾಗ್ರಾ)ದ ಉಪನಿರ್ದೇಶಕರು ತಿಳಿಸಿದ್ದಾರೆ.