ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜನರ ಸಹಕಾರದಿಂದ ಬ್ಯಾಂಕ್ ಅಭಿವೃದ್ಧಿ

Mainashree
Updated On : 30 Sept 2013, 11:14 am

ಹೊಳೆಆಲೂರ: ಗ್ರಾಮಗಳಲ್ಲಿ ಬ್ಯಾಂಕ್‌ಗಳು ಜನರ ಸೇವೆಗೆ ಅಗತ್ಯವಾಗಿದ್ದು, ಗ್ರಾಮಸ್ಥರು ಮತ್ತು ಬ್ಯಾಂಕಿನ ಸಿಬ್ಬಂದಿಗಳ ಸಹಕಾರ ಅತಿ ಮುಖ್ಯ. ಇಲ್ಲವಾದಲ್ಲಿ ಬ್ಯಾಂಕ್‌ಗಳ ಪ್ರಗತಿ ಅಸಾಧ್ಯ ಎಂದು ನಿವೃತ್ತ ಶಿಕ್ಷಕ ಎಲ್.ಐ. ದಿಂಡೂರ ಹೇಳಿದರು.
ಅವರು ಸಮೀಪದ ಅಸೂಟಿ ಗ್ರಾಮದಲ್ಲಿ ಕೆವಿಜಿ ಬ್ಯಾಂಕ್ ಅಸೂಟಿ ಶಾಖೆಯ ವತಿಯಿಂದ ಈಚೆಗೆ ನಡೆದ 2013-14ನೇ ಸಾಲಿನ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬ್ಯಾಂಕ್‌ನ ಅವಶ್ಯಕತೆ ಇಂದಿನ ದಿನಮಾನದಲ್ಲಿ ಅತ್ಯವಶ್ಯ. ಸಾಲ ಪಡೆದವರು ಸರಿಯಾದ ರೀತಿ ಪಾವತಿಸಬೇಕು. ಅಲ್ಲದೆ, ಸಿಬ್ಬಂದಿಗಳೊಂದಿಗೆ ಸಹಕಾರ ಮನೋಭಾವನೆ ಹೊಂದಬೇಕು. ನಮ್ಮದೇ ಬ್ಯಾಂಕ್ ಎನ್ನುವ ರೀತಿ ನಾವು ಪ್ರಾಮಾಣಿಕವಾಗಿ ವ್ಯವಹರಿಸಬೇಕು ಅಂದಾಗ ಮಾತ್ರ ಸಾರ್ವಜನಿಕರ ಹಾಗೂ ಬ್ಯಾಂಕ್ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಅಸೂಟಿ ಗ್ರಾಪಂ ಉಪಾಧ್ಯಕ್ಷ ಎಸ್.ಬಿ. ಮಮಟಗೇರಿ ಮಾತನಾಡಿದರು. ಬ್ಯಾಂಕ್‌ನ ವ್ಯವಸ್ಥಾಪಕ ಎಂ.ಎನ್. ಕಾರಕೂನರ ಬ್ಯಾಂಕಿನ ಸಾಧನೆ ಮತ್ತು ಸೌಲಭ್ಯಗಳ ಕುರಿತು ತಿಳಿಸಿದರು. ಬಿ.ವೈ. ಅಸೂಟಿ ಪ್ರಾರ್ಥಿಸಿದರು. ಟಿ.ಎಚ್. ನದಾಫ ಸ್ವಾಗತಿಸಿದರು. ಎಂ.ಎಸ್. ನುಚ್ಚಂಬ್ಲಿ ನಿರೂಪಿಸಿದರು. ಎಸ್.ವಿ. ಅಸೂಟಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement