ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಠೇವಣಿದಾರರಿಂದ ಬ್ಯಾಂಕ್ ಅಭಿವೃದ್ಧಿ

Mainashree
Updated On : 30 Sept 2013, 11:14 am

ರೋಣ:  ಬ್ಯಾಂಕ್‌ನಲ್ಲಿ ಗ್ರಾಹಕ ಬಂಧುಗಳು ಪ್ರೋತ್ಸಾಹ, ಹೆಚ್ಚಿನ ಪ್ರಮಾಣದಲ್ಲಿ ಠೇವಣಿ ಮಾಡುವುದು ಹಾಗೂ ಸಕಾಲಕ್ಕೆ ಸಾಲ ಮರ ಪಾವತಿಸುವುದರಿಂದ ಬ್ಯಾಂಕ್‌ಗಳು ಆರ್ಥಿಕ ಸಬಲತೆ ಮತ್ತು ಅಭಿವೃದ್ದಿಯತ್ತ ಸಾಗಲು ಕಾರಣವಾಗುತ್ತದೆ ಎಂದು ಸ್ಥಳೀಯ ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಸುರೇಶ ನಯ್ಯರ ಹೇಳಿದರು.
ಅವರು ಈಚೆಗೆ ಪಟ್ಟಣದ ಕೆನರಾ ಬ್ಯಾಂಕ್ ಆವರಣದಲ್ಲಿ ಜರುಗಿದ ಆರ್ಥಿಕ ಸಾಕ್ಷರತಾ ಕೇಂದ್ರದ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆರ್ಥಿಕ ಸಾಕ್ಷರತೆ ಕೇಂದ್ರದ ಅಧಿಕಾರಿಯಾದ ವ್ಹಿ.ಜಿ. ಅಯ್ಯನಗೌಡ್ರ ಮಾತನಾಡಿ, ದೇಶದ ಅರ್ಥಿಕ ಪ್ರಗತಿಯಲ್ಲಿ ಬ್ಯಾಂಕ್‌ಗಳ ಪಾತ್ರ ಪ್ರಮುಖವಾಗಿದ್ದು, ಆ ದಿಶೆಯಲ್ಲಿ ಗ್ರಾಹಕರು ಮತ್ತು ಬ್ಯಾಂಕ್ ಸಿಬ್ಬಂದಿ ಪಾತ್ರ ಪ್ರಮುಖವಾಗಿದೆ. ಗ್ರಾಹಕರು ಮತ್ತು ರೈತರಿಗೆ ಬ್ಯಾಂಕ್‌ನಲ್ಲಿನ ಸೌಲಭ್ಯಗಳ ಕುರಿತು ತಿಳಿವಳಿಕೆ ಮೂಡಿಸುವಲ್ಲಿ ಸಿಬ್ಬಂದಿ ಕಾರ್ಯಕ್ರಮ ಪ್ರಮುಖವಾಗಿದೆ ಎಂದರು. ದೀಪಾ ಗುಡಿ, ಕೋಮಲ್ ಕುಲಕರ್ಣಿ, ರಾಜು, ಕಳಸನ್ನವರ ಇದ್ದರು. ಮುತ್ತು ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement