ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಸ್ ಸೌಲಭ್ಯ ಕಲ್ಪಿಸಲು ಆಗ್ರಹ

Mainashree
Updated On : 30 Sept 2013, 11:14 am

ನರಗುಂದ: ಪಟ್ಟಣದ ವಿವಿಧ ಶಾಲಾ ಕಾಲೇಜುಗಳಿಗೆ ಬೇರೆ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬರುತ್ತಿದ್ದು, ಅವರಿಗೆ ಸೂಕ್ತವಾದ ಬಸ್ ಸೌಲಭ್ಯವಿಲ್ಲದೇ ತೊಂದರೆ ಅನುಭವಿಸುತ್ತಿದ್ದು ಕೂಡಲೇ ಹೆಚ್ಚಿನ ಬಸ್ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಈಚೆಗೆ ಡಿಪೋಗೆ ತೆರಳಿ ಮನವಿ ಸಲ್ಲಿಸಿದರು.  ಎಬಿವಿಪಿ ನಗರ ಕಾರ್ಯದರ್ಶಿ ಅಕ್ಷಯ ಜೋಶಿ ಮಾತನಾಡಿ, ಬಾದಮಿ, ರೋಣ, ನವಲಗುಂದ, ರಾಮದುರ್ಗ, ಸವದತ್ತಿ, ತಾಲೂಕುಗಳ ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ನರಗುಂದ ಪಟ್ಟಣಕ್ಕೆ ಬರುತ್ತಾರೆ. ಅವರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕೂಡಲೇ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಮಂಜುನಾಥ ಪಲ್ಲೇದ, ಪ್ರವೀಣ ಮೇಗಲಮನಿ, ಬಸಯ್ಯ ಬೆಟಗೇರಿ, ಸಂತೋಷ ಜಾಧವ, ಗಂಗಾಧರ ದೇಸಾಯಗೌಡ್ರ, ಶಶಿಧರ ಹಿರೇಗೌಡ್ರ, ಗೌಡಪ್ಪಗೌಡ ಹಿರೇಗೌಡ್ರ, ಪ್ರವೀಣ ದೇಸಾಯಗೌಡ್ರ, ಪ್ರೇಮಾ ಹೊಳೂಣ್ಣವರ, ರುಕ್ಮಿಣಿ ಶಿರೋಳ, ಗೀತಾಂಜಲಿ ಪಾಟೀಲ, ಶ್ವೇತಾ ಹಿರೇಮಠ, ಜ್ಯೋತಿ ಬಡಿಗೇರ ಹಾಜರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement