ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹಮ್ಮಿಗಿ ಜಿಪಂ ಉಪಚುನಾವಣೆ: ಶೇ. 71 ಮತದಾನ

Mainashree
Updated On : 30 Sept 2013, 11:13 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಸೆ. 29
ತಾಲೂಕಿನ ಹಮ್ಮಿಗಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಭಾನುವಾರ ಜರುಗಿದ ಜಿಪಂ ಉಪಚುನಾವಣೆಯಲ್ಲಿ ಶೇ. 71ರಷ್ಟು ಶಾಂತಿಯುತವಾಗಿ ಮತದಾನವಾಗಿದೆ.
ಬೆಳಗ್ಗೆ 7 ಗಂಟೆಗೆ ಪ್ರಾರಂಭವಾದ ಮತದಾನ ಹಮ್ಮಿಗಿ, ಕೊರ್ಲಹಳ್ಳಿ, ಬೆಣ್ಣಿಹಳ್ಳಿ, ಸಿಂಗಟಾಲೂರ, ಕಲಕೇರಿ ಗ್ರಾಮದಲ್ಲಿ ಪ್ರಾರಂಭದಿಂದಲೇ  ಬಿರುಸಿನಿಂದ ಕೂಡಿತ್ತು. ಮಧ್ಯಾಹ್ನ 2 ಗಂಟೆ ವೇಳೆಗೆ ಈ ಎಲ್ಲ ಗ್ರಾಮಗಳಲ್ಲಿಯೂ ಶೇ. 55ರಷ್ಟು ಮತದಾನವಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ರುದ್ರಗೌಡ ಪಾಟೀಲ ಅವರ ಸ್ವ-ಗ್ರಾಮ ಸಿಂಗಟಾಲೂರಿನಲ್ಲಿ ಬೆಳಗ್ಗೆ ಪ್ರಾರಂಭದಿಂದ ಮುಕ್ತಾಯದವರೆಗೂ ಮತದಾನ ಬಿರುಸಿನಿಂದಲೇ ನಡೆಯಿತು. ಬಿಜೆಪಿ ಅಭ್ಯರ್ಥಿ ಹೇಮಗಿರೀಶ ಹಾವಿನಾಳ ಅವರ ಸ್ವ-ಗ್ರಾಮ ಬಿದಿರಹಳ್ಳಿಯಲ್ಲಿಯೂ ಬೆಳಗ್ಗೆಯಿಂದಲೇ ಮತದಾನ ಚುರುಕಿನಿಂದ ಸಾಗಿತ್ತು. ಮಕ್ತುಂಪುರ, ಶೀರನಹಳ್ಳಿ, ಗಂಗಾಪುರ, ಕಕ್ಕೂರ, ಕಕ್ಕೂರ ತಾಂಡಾ, ಹೆಸರೂರ, ಗುಮ್ಮಗೋಳ ಗ್ರಾಮ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಬೆಳಗ್ಗೆಯಿಂದ ಮಂದಗತಿಯಲ್ಲಿ ಶುರುವಾದ ಮತದಾನ ನಂತರ ಬಿರುಸು ಪಡೆಯಿತು. ಮತದಾನ ನಡೆದಿರುವ 23 ಗ್ರಾಮಗಳಲ್ಲಿ ಯಾವುದೇ ಗ್ರಾಮದಲ್ಲಿ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.        
ಶಾಸಕರ ಭೇಟಿ: ಮತದಾನ ನಡೆದ 23 ಗ್ರಾಮಗಳಿಗೆ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಭೇಟಿ ನೀಡಿದರು. ಕೊರ್ಲಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಈ ಚುನಾವಣೆಗೆ ನಾವು ಉತ್ತಮ ಹಾಗೂ ಕ್ರಿಯಾಶೀಲ ಮತ್ತು ಜನಾನುರಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಗೌಡ ಪಾಟೀಲ, ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಕೊಟ್ರೇಶ ಅಂಗಡಿ, ಧ್ರುವಕುಮಾರ ಹೊಸಮನಿ, ಸೊಲಬಣ್ಣ ಜೋಬಾಳಿ, ಎಸ್.ಡಿ. ಮಕಾಂದಾರ, ರಾಮು ಕಲಾಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಎ.ಪಿ. ದಂಡೀನ, ಶರಣಪ್ಪ ಕುಬಸದ, ಸುರೇಶ ಮಾಗಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಾಜಿ ಶಾಸಕ ರಾಮಣ್ಣ ಲಮಾಣಿಯವರು ಬಿದಿರಹಳ್ಳಿ, ವಿಠ್ಠಲಾಪುರ, ಮುಂಡವಾಡ, ಮಲ್ಲಿಕಾರ್ಜುನಪುರ, ಹಮ್ಮಿಗಿ, ಗುಮ್ಮಗೋಳ, ಹೆಸರೂರ, ನಾಗರಹಳ್ಳಿ, ಕಕ್ಕೂರ, ಕಕ್ಕೂರತಾಂಡಾ, ಕಲಕೇರಿ, ಕೊರ್ಲಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದರು. ಹಮ್ಮಿಗಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ 5 ವರ್ಷದ ಅಧಿಕಾರದ ಅವಧಿಯಲ್ಲಿ ಈ ಭಾಗದಲ್ಲಿ ನಡೆದ ಅಭಿವೃದ್ಧಿ ಕೆಲಸಗಳನ್ನು ಮತದಾರರು ಮರೆಯುವುದಿಲ್ಲ. ತಮ್ಮ ಪಕ್ಷದ ಅಭ್ಯರ್ಥಿ ಹೇಮಗಿರೀಶ ಹಾವಿನಾಳ ಗೆಲವು ಖಚಿತ ಎಂದರು. ಕರಬಸಪ್ಪ ಹಂಚಿನಾಳ, ಸೀತಾರಾಮರಾಜು, ಆರ್.ಎಂ. ತಪ್ಪಡಿ, ಎಸ್.ವಿ. ಪಾಟೀಲ, ಕರಿಯಪ್ಪ ಹಡಗಲಿ, ಮಲ್ಲಿಕಾರ್ಜುನ ಬಹದ್ದೂರ ದೇಸಾಯಿ, ಮದರ್‌ಸಾಬ್ ಸಿಂಗನಮಲ್ಲಿ  ಅನೇಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement