ನಕಲಿ ಗೊಬ್ಬರ: ರೈತರಿಗೆ ಮನವಿ
ರೋಣ: ತಾಲೂಕಿನಲ್ಲಿ ಕೆಲ ಕಂಪನಿಗಳು ತಮ್ಮದೇ ಆದ ಬ್ರ್ಯಾಂಡ್ ಇಟ್ಟುಕೊಂಡು ಸಾವಯವ ಗೊಬ್ಬರ, ಭೂಸುಧಾರಕಗಳು ಎಂದು ರೈತರನ್ನು ದಾರಿ ತಪ್ಪಿಸಿ ಮೋಸ ಮಾಡುತ್ತಿರುವುದು ಇಲಾಖೆ ಗಮನಕ್ಕೆ ಬಂದಿದೆ. ಇಂಥ ಕಂಪನಿಗಳ ಮೋಸಕ್ಕೆ ರೈತರು ಬಲಿಯಾಗಬಾರದು. ಹಿಂಗಾರು ಮಳೆಯಾಗಿದ್ದು, ತೇವಾಂಶದ ಲಾಭ ಪಡೆಯಲು ರೈತರು ಉತ್ಸುಕರಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ರಸಗೊಬ್ಬರ ದರವು ಹೆಚ್ಚಾಗಿದೆ. ಅದರಿಂದಾಗಿ ರೈತರು ಸಾವಯವ ಕೃಷಿ ಬಗ್ಗೆ ಒಲವು ತೋರುತ್ತಿದ್ದಾರೆ ಎಂಬುವುದನ್ನು ಅರಿತ ಕೆಲ ಖಾಸಗಿ ಕಂಪನಿಗಳು ಅಗ್ಗದ ದರದಲ್ಲಿ ಸಾವಯವ ಗೊಬ್ಬರ ನೀಡುವುದಾಗಿ ವಂಚಿಸುತ್ತಿವೆ. ಈ ಬಗ್ಗೆ ರೈತರು ಜಾಗ್ರತರಾಗಿ. ರೈತ ಸಂಪರ್ಕ ಕೇಂದ್ರಗಳ ಮೂಲಕ ಎರೆಹುಳು ಗೊಬ್ಬರ, ಸಿಟಿಕಾಂಪೋಸ್ಟ್ ಜಿಪ್ಸಂ, ಲಘು ಪೋಷಕಾಂಶಗಳು, ಅಗ್ರಿಗೋಲ್ಡ್, ಬಯೋ ಎಜೆಂಟ್ಸ್ ಕೃಷಿ ಇಲಾಖೆಯಲ್ಲಿ ಲಭ್ಯವಿದೆ. ರೈತರು ನಕಲಿ ಗೊಬ್ಬರಗಳಿಗೆ ಮೋಸ ಹೋಗದಂತೆ ಎಚ್ಚರಿಕೆ ವಹಿಸುವಂತೆ ಕೃಷಿ ಇಲಾಖೆ ವಿನಂತಿಸಿದೆ. ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬೇಕು ಎಂದು ರೋಣ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಎ. ಸೂಡಿಶೆಟ್ಟರ್ ತಿಳಿಸಿದ್ದಾರೆ.