ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನರಗುಂದ ತಾಲೂಕಿನಲ್ಲಿ ಕಳಪೆ ಬಿತ್ತನೆ ಬೀಜ ವಿತರಣೆ: ಪರಿಹಾರಕ್ಕೆ ರೈತರ ಆಗ್ರಹ

Mainashree
Updated On : 1 Oct 2013, 10:42 am

ನರಗುಂದ: ತಾಲೂಕಿನ ಬೆಳ್ಳೇರಿ, ಲಖಮಾಪುರ, ವಾಸನ ಸೇರಿದಂತೆ ಮಲಪ್ರಭಾನದಿ ಪಕ್ಕದಲ್ಲಿರುವ ಜಮೀನುಗಳಲ್ಲಿನ ರೈತರು ಕಾವೇರಿ ಕಂಪನಿಯ ಗೋವಿನ ಜೋಳ ಬೀಜ ಬಿತ್ತಿದ ರೈತರ ಜಮೀನುಗಳಲ್ಲಿ ಗೋವಿನ ಜೋಳ ಬೆಳೆಯ ಒಂದು ದಂಟಿನಲ್ಲಿ 5 ರಿಂದ 8 ತೆನೆಗಳಾಗಿ ಅದರಲ್ಲಿ ಕಾಳು ಇಲ್ಲದೇ ಸಂಕಷ್ಟ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ ಸಂಬಂಧಪಟ್ಟ ಕಂಪನಿಯವರು ಪರಿಹಾರ ವಿತರಣೆ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.
ಉತ್ತರ ಕರ್ನಾಟಕ ಬರ ಮತ್ತು ಅತಿವೃಷ್ಟಿ ಸಂಘದ ಅಧ್ಯಕ್ಷ ರಮೇಶ ಇಳಗೇರಿ ಮಾತನಾಡಿ, ರಾಜ್ಯದಲ್ಲಿ ಸತತ 3 ವರ್ಷದಿಂದ ಭೀಕರವಾದ ಬರಗಾಲಕ್ಕೆ ರೈತ ಸಿಲುಕಿದ್ದಾನೆ. ಇಂಥ ಸಂದರ್ಭದಲ್ಲಿ ನಮ್ಮನ್ನಾಳುವ ಸರ್ಕಾರಗಳು ಬೇಕಾ ಬಿಟ್ಟಿಯಾಗಿ ಖಾಸಗಿ ಕಂಪನಿಗಳಿಗೆ ಬೀಜ ತಯಾರಿಕೆ ಪರವಾನಗಿ ಕೊಟ್ಟು ರೈತರನ್ನು ಬೀದಿಗೆ ತಂದು ನಿಲ್ಲಿಸುವಂತಹ ಪರಿಸ್ಥಿತಿಯನ್ನು ಸರ್ಕಾರ ತಂದಿದೆ. ಲಕ್ಷ್ಮಣ ಕುಂಬಾರ ಎಂಬ ರೈತ ತನ್ನ 2 ಎಕರೆ ಜಮೀನಿನಲ್ಲಿ ಕಾವೇರಿ ಕಂಪನಿಯ 2555ರ ಬೀಜಗಳನ್ನು ಬಿತ್ತನೆ ಮಾಡಿದ್ದು, ಇಂದು ಗೋವಿನಜೋಳ ಪೈರು ಸಾಕಷ್ಟು ಬೆಳದಿದೆ. ಆದರೆ ಅದರಲ್ಲಿ 1 ರಿಂದ 8 ತೆನೆಗಳಾಗಿ ಕಾಳು ಬಿಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಕಂಪನಿಯ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಕೂಡಲೇ ರೈತರಿಗೆ ಪರಿಹಾರ ನೀಡದೇ ಇದ್ದಲ್ಲಿ ಕಂಪನಿಯ ವಿರುದ್ಧ ದೂರು ದಾಖಲಿಸಿ ಕೋರ್ಟ್ ಮೆಟ್ಟಿಲು ಏರುತ್ತೇವೆ ಎಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement