ಸುದ್ದಿ ಸಂಕ್ಷೇಪ
ಇಂದು ಕ್ರೀಡಾಕೂಟ
ಗದಗ: ಅ. 1ರ ಬೆಳಗ್ಗೆ 10 ಗಂಟೆಗೆ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಅಥ್ಲೆಟಿಕ್ಸ್ ಕ್ರೀಡಾಕೂಟ ಜರುಗಲಿದೆ. ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ ಉದ್ಘಾಟಿಸುವರು. ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ ಧ್ವಜಾರೋಹಣ ನೆರವೇರಿಸುವರು. ಜಿಪಂ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ ಕ್ರೀಡಾ ಜ್ಯೋತಿ ನೆರವೇರಿಸುವರು. ಅತಿಥಿಗಳಾಗಿ ಡಿಡಿಪಿಐ ರಾಜೀವ ನಾಯಕ, ಹಾಗೂ ಜಿಲ್ಲೆಯ ಎಲ್ಲ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಗಮಿಸುವರು. ಎಲ್ಲ ತಾಲೂಕಿನಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದಂತಹ ಕ್ರೀಡಾಪಟುಗಳು ಭಾಗವಹಿಸಲು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಎಂ. ಕಲಹಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ವಾರ್ಷಿಕ ಸಭೆ
ಗದಗ: ಅ. 1ರಂದು ಸಂಜೆ 5.30ಕ್ಕೆ ಮುಳಗುಂದ ರಸ್ತೆಯಲ್ಲಿರುವ ಸ್ಕೌಟ್ ಗೈಡ್ಸ್ ಭವನದ ಸಭಾಭವನದಲ್ಲಿ ಅಪ್ನಾಸ್ಟಡಿ ಸರ್ಕಲ್‌ನ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಆಯೋಜಿಸಲಾಗಿದೆ. ಎಸ್.ಎನ್. ಖಾಜಿ ಅಧ್ಯಕ್ಷತೆ ವಹಿಸುವರು. ಇಲ್ಲಿಯವರೆಗೆ ಕೈಗೊಂಡ ಕಾರ್ಯಕ್ರಮಗಳ ವಿಮರ್ಶೆ ಹಾಗೂ ಬರುವ ವರ್ಷದಲ್ಲಿ ಶಿಕ್ಷಣ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಚಿಂತನ-ಮಂಥನ ನಡೆಯುವುದು. ಶೈಕ್ಷಣಿಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ, ಶಿಕ್ಷಣ ಗುಣಮಟ್ಟ ಹೆಚ್ಚಿಸುವುದು ಮುಂತಾದ ಮಹತ್ವದ ಸಂಗತಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಡಾ. ಬಸವರಾಜ ಧಾರವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.