ಮಠ, ಮಸೀದಿಗೆ ಸಲೀಂ ಅಹ್ಮದ್ ಭೇಟಿ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಏ. 1
ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಸಲೀಂ ಅಹ್ಮದ್ ಅವರು ಶಿರಹಟ್ಟಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚರಿಸಿ, ಹಲವು ಮಠ, ಮಂದಿರ, ಮಸೀದಿಗಳಿಗೆ ಭೇಟಿ ನೀಡಿ, ದರ್ಶನ ಪಡೆದರು.
ಭಾನುವಾರ ಬೆಳಗ್ಗೆ ಪಟ್ಟಣದ ಸೋಮೇಶ್ವರ ದೇವಸ್ಥಾನ, ಮುಕ್ತಿಮಂದಿರ ಧರ್ಮಕ್ಷೇತ್ರ, ದೂದಪೀರಾಂ ದರ್ಗಾ ಮುಂತಾದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಸಲೀಂ ಅಹ್ಮದ್, ಕಾಂಗ್ರೆಸ್ಗೆ ನೂರಾರ ವರ್ಷಗಳ ಇತಿಹಾಸವಿದೆ. ದೇಶ ನಿರ್ಮಾಣದಲ್ಲಿ ಪಕ್ಷ ವಿಶಿಷ್ಟ ಸೇವೆ ಸಲ್ಲಿಸಿದೆ. ಜಾತ್ಯತೀತ ವಾದದಲ್ಲಿ ನಂಬಿಕೆ ಇರಿಸಿಕೊಂಡಿರುವ ಕಾಂಗ್ರೆಸ್, ದೇಶದ ಎಲ್ಲ ವರ್ಗಗಳ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ. 10 ವರ್ಷಗಳಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸಾಕಷ್ಟು ಪ್ರಗತಿಪರ ಯೋಜನೆ ನೀಡಿದ್ದು, ಯುವಕರಿಗೆ ಆದ್ಯತೆ ನೀಡಿದೆ ಎಂದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಯುವಕರ ಕಣ್ಮಣಿಯಾಗಿರುವ ಸಲೀಂ ಅಹ್ಮದ ಅವರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಕನಸು ಹೊಂದಿದ್ದು, ಕ್ಷೇತ್ರಕ್ಕೆ ಹಲವಾರು ಯೋಜನೆಗಳು ಸಾಕಾರಗೊಳ್ಳಲು ಅವರನ್ನು ಬೆಂಬಲಿಸಿ ಎಂದರು. ಟಿ. ಈಶ್ವರ, ಪುರಸಭೆ ಮಾಜಿ ಅಧ್ಯಕ್ಷೆ ಜಯಕ್ಕ ಕಳ್ಳಿ, ವಿರೂಪಾಕ್ಷಪ್ಪ ಪಡಗೇರಿ, ತಾ.ಪಂ. ಸದಸ್ಯ ಚನ್ನಪ್ಪ ಜಗಲಿ, ಪುರಸಭೆ ಸದಸ್ಯ ರಾಜಣ್ಣ ಕುಂಬಿ, ಬಸವರಾಜ ಓದಾನವರ, ದಾದಾಪೀರ ಮುಚ್ಚಾಲೆ, ಲೆಂಕಪ್ಪ ಶೆರಸೂರಿ, ಗಂಗಾಧರ ಮ್ಯಾಗೇರಿ, ಶಿರಹಟ್ಟಿ ಪ.ಪಂ. ಮಾಜಿ ಅಧ್ಯಕ್ಷ ಹುಮಾಯೂನ್ ಮಾಗಡಿ, ಈರಣ್ಣ ಅಂಕಲಕೋಟಿ, ಮುತ್ತಣ್ಣ ಬಟ್ಟೂರ, ಮಂಜುನಾಥ ಸಾತಪೂತೆ, ತಿಪ್ಪಣ್ಣ ಸಂಶಿ, ಅನ್ವರಸಾಬ್ ಹವಾಲ್ದಾರ್, ಕಿರಣ ನವಲೆ, ಬಾಬು ಅಳವಂಡಿ, ಮುಕ್ತಾರ ಅಹ್ಮದ ಗದಗ, ನೀಲಪ್ಪ ಶೆರಸೂರಿ, ಸಾಹೇಬ್ಜಾನ್ ಹವಾಲ್ದಾರ, ಕುಮಾರ ವೀರೇಶಮಠ ಹಾಜರಿದ್ದರು. ಅನಂತರ ಶಿರಹಟ್ಟಿ, ಬಾಳೇಹೊಸೂರು ಶ್ರೀಗಳ ಆಶೀರ್ವಾದ ಪಡೆದರು.