ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

10 ತಿಂಗಳ ಸೇವೆಗೆ 'ಕೂಲಿ' ಕೊಡಿ

Mainashree
Updated On : 3 Apr 2014, 12:16 pm

ಕನ್ನಡಪ್ರಭ ವಾರ್ತೆ, ಮುಂಡರಗಿ, ಏ. 2
ರಾಜ್ಯದಲ್ಲಿ 10 ತಿಂಗಳ ಹಿಂದೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಅಂದಿನಿಂದ ನಾವು ನಿಮ್ಮ ಸೇವಕರಾಗಿ ಚಾಕರಿ ಮಾಡುತ್ತಿದ್ದೇವೆ. ಈಗ ನೀವು ನಮಗೆ ಚಾಕರಿಯ ಕೂಲಿಯನ್ನು ಲೋಕಸಭಾ ಅಭ್ಯರ್ಥಿಗೆ ಮತದ ರೂಪದಲ್ಲಿ ನೀಡಿ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದರು.
ಬುಧವಾರ ಪಟ್ಟಣದ ಕೊಪ್ಪಳ ರಸ್ತೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಪರ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮೂಲತಃ ಬಡತನವನ್ನು ಅನುಭವಿಸಿರುವ ಸಿದ್ದರಾಮಯ್ಯ ತಾವು ಸಿಎಂ ಆದ ಮೊದಲ ದಿನವೇ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ರು. 1ಗೆ ಕೆಜಿಯಂತೆ ಅಕ್ಕಿ ನೀಡುವ ಮೂಲಕ ಈ ರಾಜ್ಯದ ಎಲ್ಲ ವರ್ಗದ ಜನರೂ ನಿತ್ಯ ಹೊಟ್ಟೆ ತುಂಬ ಅನ್ನ ಊಟ ಮಾಡುವಂತೆ ಮಾಡಿದ್ದಾರೆ. ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು ಹಾಗೂ ಹಾಲು ಖರೀದಿಯಿಂದ ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದರು. ಹಿಂದುಳಿದವರ ಹಾಗೂ ದೀನದಲಿತರ ಏಳ್ಗೆಗಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಈ ಹಿಂದೆ ಅಧಿಕಾರದಲ್ಲಿದ್ದ ಬಳ್ಳಾರಿಯ ಗಣಿಧಣಿಗಳ ಮನೆಯಲ್ಲಿ ಕುಳಿತುಕೊಳ್ಳುವ ಕುರ್ಚಿಯಿಂದ ಹಿಡಿದು ಊಟ ಮಾಡುವ ತಾಟಿನವರೆಗೂ ಬಂಗಾರ ಬಳಸುತ್ತಿದ್ದರು. ನಾವು ಪಾದಯಾತ್ರೆ ಮಾಡಿದಾಗ ಎಲ್ಲವೂ ಹೊರಬಿದ್ದು ಜೈಲು ಸೇರಿದರು. ಜನತೆ ಮೋಸದ ರಾಜಕಾರಣಕ್ಕೆ ಮಾರುಹೋಗದೇ ಅಭಿವೃದ್ಧಿ ಪರ, ಬಡವರ ಪರವಾಗಿರುವ ಕಾಂಗ್ರೆಸ್ಗೆ ಮತ ನೀಡಿ ಎಂದರು. ಅಭ್ಯರ್ಥಿ ಸಲೀಂ ಅಹ್ಮದ್ ಮಾತನಾಡಿ, ಸುಭದ್ರ ಮತ್ತು ಜಾತ್ಯತೀತ ರಾಷ್ಟ್ರ ಕಟ್ಟುವುದು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ನಾಯಕರ ಹಾಗೂ ಕಾಂಗ್ರೆಸ್ನಿಂದ ಈ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಕೇಂದ್ರ ಯುಪಿಎ, ರಾಜ್ಯ ಕಾಂಗ್ರೆಸ್ಗಳ ಜನಪರ ಆಡಳಿತದಿಂದ ತಮ್ಮ ಜಯ ಖಚಿತ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement