ಚಿಕ್ಕೇರೂರಲ್ಲಿ ಉದಾಸಿ ಮತ ಯಾಚನೆ
ಹಿರೇಕೆರೂರು: ತಾಲೂಕಿನ ಚಿಕ್ಕೇರೂರ ಗ್ರಾಮದಲ್ಲಿ ಬುಧವಾರ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪಾದಯಾತ್ರೆಯ ಮೂಲಕ ಮನೆ ಮನೆಗೆ ತೆರಳಿ ಮತಯಾಚಿಸಿದರು. ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದರು. ದೇಶದ ಜನತೆ ಮೋದಿಯವರನ್ನು ಪ್ರಧಾನಿ ಮಾಡುವ ದೃಢ ಸಂಕಲ್ಪ ಹೊಂದಿದ್ದು, ಅವರು ಪ್ರಧಾನಿ ಯಾಗುವುದರಲ್ಲಿ ಯಾವುದೇ ಸಂಶಯ ಇಲ್ಲವೆಂದು ವಿಶ್ವಾಸ ವ್ಯಕ್ತಪಡಿಸಿದರು. ಶಾಸಕ ಯು.ಬಿ. ಬಣಕಾರ, ಬಿಜೆಪಿ ತಾಲೂಕು ಅಧ್ಯಕ್ಷ ಎಸ್.ಆರ್. ಅಂಗಡಿ, ಜಿಪಂ ಸದಸ್ಯ ಬಸಮ್ಮ ಅಬಲೂರ, ಮುಖಂಡರಾದ ಮಹೇಂದ್ರ ಬಡಳ್ಳಿ, ಮಹೇಶ ಗುಬ್ಬಿ, ನಿಂಗಪ್ಪ ಚಳಗೇರಿ, ಗಂಗಾಧರ ಮಲೇಬೆನ್ನೂರ, ಚಂದ್ರಪ್ಪ ಗಾಳಿ, ಪರಮೇಶಪ್ಪ ದೊಡ್ಡಮನಿ, ಉಳವೆಪ್ಪ ಹುಚ್ಚಗೊಂಡರ, ಲಿಂಗರಾಜ ಚಪ್ಪರದಹಳಿ ಶಿವರಾಜ ಹರಿಜನ, ಶಿವಾನಂದ ಯಲ್ಲಾಪುರ, ವೆಂಕಪ್ಪ ದೊದಿಹಳ್ಳಿ, ಅಶೋಕ ತಳವಾರ, ರಶೀದ ಮುಲ್ಲಾ, ಬಸವಣ್ಣೆಪ್ಪ ಹರಿಜನ, ಮೈಲಾರೆಪ್ಪ ಬಾರ್ಕಿ, ಶಿವು ತಿಪಶೆಟ್ಟಿ, ಚನ್ನಬಸಪ್ಪ ಬೋಗಾವಿ, ಚಂದ್ರು ಅಣಪ್ಪನವರ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.