ನಾನು ಮೌಢ್ಯ, ಕಂದಾಚಾರಗಳ ವಿರೋಧಿ
ಮುಂಡರಗಿ: ನಾನು ಮೂಢನಂಬಿಕೆ-ಕಂದಾಚಾರ ನಂಬುವುದಿಲ್ಲ. ನಾನೊಬ್ಬ ಮಾನವೀಯ ಮೌಲ್ಯ ಎತ್ತಿಹಿಡಿಯುವ ಮನುಷ್ಯ. ಮುಂಡರಗಿಗೆ ಬಂದರೆ ಅಧಿಕಾರ ಹೋಗುತ್ತದೆ ಎಂದು ಈ ಹಿಂದೆ ಅನೇಕ ಮುಖ್ಯಮಂತ್ರಿಗು ಇಲ್ಲಿಗೆ ಬಂದಿರಲಿಲ್ಲ. ಆದರೆ, ನಾನು ಬಂದಿದ್ದೇನೆ. ಅಧಿಕಾರದಲ್ಲಿಯೂ ಮುಂದುವರಿಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬುಧವಾರ ಮುಂಡರಗಿ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಚಾಮರಾಜನಗರಕ್ಕೆ ಹೋದರೂ ಅಧಿಕಾರ ಹೋಗುತ್ತದೆ ಎಂದಿದ್ದರು. ಅಲ್ಲಿಗೂ ಹೋಗಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಬಂದಿರುವೆ. ಇದೀಗ ಒಂದು ವರ್ಷ ಪೂರೈಸುತ್ತಿದ್ದೇನೆ. ಈ ಹಿಂದಿನ ಮುಖ್ಯಮಂತ್ರಿಗಳು ತಾವು ಮೂಢರಾಗುವ ಮೂಲಕ ಜನರನ್ನು ಮೂಢನಂಬಿಕೆಗೆ ತಳ್ಳಿದ್ದಾರೆ ಎಂದು ದೂರಿದರು. ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರದ ಕೊರತೆ ಇದೆ ಎನ್ನುವ ಮಾತು ಕೇಳಿಬರುತ್ತಿವೆ ಎಂದು ಕೇಳಿದ ಪ್ರಶ್ನೆಗೆ, ನಾವು ಆರಂಭಶೂರರಲ್ಲ. ರಾಜ್ಯಾದ್ಯಂತ ಬಿರುಸಿನ ಪ್ರಚಾರ ಪ್ರಾರಂಭವಾಗಿದೆ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಪರ ಸಚಿವ ಎಚ್.ಕೆ. ಪಾಟೀಲರ ನೇತೃತ್ವದಲ್ಲಿ ಪ್ರಚಾರ ನಡೆಯುತ್ತಿದೆ.