ಬಿಜೆಪಿ ಅಭ್ಯರ್ಥಿ ಗೆಲವು ನಿಶ್ಚಿತ
ಲಕ್ಷ್ಮೇಶ್ವರ: ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಇದು ಕಾಂಗ್ರೆಸ್ಗೆ ನಡುಕ ಹುಟ್ಟಿಸಿದೆ. ಜನರು ನರೇಂದ್ರ ಮೋದಿಯತ್ತ ಒಲವು ತೋರಿದ್ದು ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವಾಗಿದೆ ಎಂದು ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಹೇಳಿದರು.
ಅವರು ಸಮೀಪದ ಅಡರಕಟ್ಟಿ ಗ್ರಾಮದಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಶಿವಕುಮಾರ ಉದಾಸಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದರು. ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ ಮಾತನಾಡಿ, ನರೇಂದ್ರ ಮೋದಿಯವರ ಅಲೆಯ ಮುಂದೆ ಕಾಂಗ್ರೆಸ್ ಧೂಳಿಪಟವಾಗುವುದರಲ್ಲಿ ಎರಡು ಮಾತಿಲ್ಲ ಎಂದರು. ಡಾ. ವೈ.ಎಫ್. ಹಂಜಿ, ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ತಾಪಂ ಮಾಜಿ ಅಧ್ಯಕ್ಷ ಅಶೋಕ ಪಲ್ಲೇದ, ಚೆಂಬಣ್ಣ ಬಾಳಿಕಾಯಿ, ಶಿವಣ್ಣ ಮಹಾಂತಶೆಟ್ಟರ, ಈರಪ್ಪ ಹತ್ತಿಕಾಳ, ಸೋಮಣ್ಣ ಡಾಣಗಲ್, ಎಚ್.ಎಫ್. ತಳವಾರ, ಕೃಷ್ಣಾ ಬಿದರಳ್ಳಿ, ಅಡರಕಟ್ಟಿಯ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಗೌಡ ಪಾಟೀಲ, ಬಸವಣ್ಣೆಪ್ಪ ರೊಳ್ಳಿ, ಚನ್ನಪ್ಪ ಹಳೆಮನಿ, ಮಹಾಂತೇಶ ಹಳ್ಳೆಪ್ಪನವರ, ಜಾನು ಲಮಾಣಿ, ರುದ್ರಯ್ಯ ಪುರಾಣಿಕಮಠ, ಬಿಜೆಪಿ ಅಧ್ಯಕ್ಷ ನಾಗರಾಜ ಕುಲಕರ್ಣಿ, ಯಲ್ಲಪ್ಪ ಹವಳದ, ಶಂಕ್ರಣ್ಣ ಕಾಳೆ, ಶೋಭಾ ಲಮಾಣಿ, ನಿಂಗಪ್ಪ ಬನ್ನಿ, ಪರಸಣ್ಣ ಮುಳಗುಂದ, ತಿಪ್ಪಣ್ಣ ಕೊಂಚಿಗೇರಿ, ಬಸಲಿಂಗಪ್ಪ ಕಪ್ಪತ್ತನವರ, ವಿರೂಪಾಕ್ಷಪ್ಪ ಹೂಗಾರ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.