ಗದಗ: ಇಂದು ಆರೋಗ್ಯ ಉಚಿತ ಶಿಬಿರ
ಗದಗ: ನಗರದ ಜ.ತೋಂಟದಾರ್ಯ ಸಿದ್ಧಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಏ. 6ರಂದು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಜ.ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರಾ ಸಮಿತಿಯಿಂದ ಬೃಹತ್ ಆರೋಗ್ಯ ಉಚಿತ ತಪಾಸಣೆ-ಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9.30ಕ್ಕೆ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ಹಾಗೂ ಅನೇಕ ಖ್ಯಾತನಾಮ ವೈದ್ಯರ ಸಮ್ಮುಖದಲ್ಲಿ ಶಿಬಿರ ಉದ್ಘಾಟನೆಗೊಳ್ಳಲಿದೆ. ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ರೋಗಿಗಳಿಗೆ ಉಚಿತ ಎಕೋಕಾರ್ಡಿಯೋಗ್ರಾಫಿ ಮಾಡಿ ಸಲಹೆ ಸೂಚನೆ ನೀಡಲಾಗುವುದು. ಶಸ್ತ್ರಚಿಕಿತ್ಸೆ ಅವಶ್ಯವಿದ್ದಲ್ಲಿ ಅರ್ಹರಿಗೆ ಸಲಹೆ ಮಾರ್ಗದರ್ಶನ ಮಾಡಲಾಗುವುದು. ಗದಗ-ಬೆಟಗೇರಿ ಸೇರಿದಂತೆ ಜಿಲ್ಲೆ ಪರಜಿಲ್ಲೆಗಳ ತಜ್ಞ ವೈದ್ಯರು ಶಿಬಿರದಲ್ಲಿ ಪಾಲ್ಗೊಳ್ಳುವರು ಜಿಲ್ಲೆಯ ಸಾರ್ವಜನಿಕರು, ಗ್ರಾಮಾಂತರ ಭಾಗದ ಜನತೆ ಮಹಿಳೆಯರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.
ಇಂದು ಬಿಜೆಪಿ ಸಂಸ್ಥಾಪನಾ ದಿನಾಚರಣೆ
ಗದಗ: ಬಿಜೆಪಿ ಸಂಸ್ಥಾಪನಾ ದಿನಾಚರಣೆ ನಗರದ ವಾರ್ಡ್ ನಂ. 22ರ ಒಕ್ಕಲಗೇರಿ ಓಣಿಯಲ್ಲಿ ಏ. 6ರ ಬೆಳಗ್ಗೆ 8ಕ್ಕೆ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಧ್ವಜಾರೋಹಣ ಕಾರ್ಯಕ್ರಮ ಜರುಗಲಿದೆ. ನಂತರ ವಾರ್ಡಿನ ಮನೆ ಮನೆಗೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರವಾಗಿ ಮತ ಕೇಳಲಿದ್ದು, ಈ ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಎಂ. ಹಿರೇಮಠ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಟಿ. ಮೇಲಗಿರಿ, ನಗರಸಭೆ ಸದಸ್ಯ ಸಂತೋಷ ಮೇಲಗಿರಿ, ಶಹರ ಕಾರ್ಯದರ್ಶಿ ಬಸವರಾಜ ಹಡಪದ, ಮಕ್ತುಮಸಾಬ್ ನಾಗನೂರು, ಬಸವರಾಜ ಜಂತ್ಲಿ, ಗಂಗಾಧರ ಮೇಲಗಿರಿ, ಶಿವಕುಮಾರ ಹಿರೇಮಠ, ಶಿದ್ಲಿಂಗಪ್ಪ ಜಿನಗಾ, ಪಂಚಾಕ್ಷರಪ್ಪ ಹೊನ್ನಾಪುರ, ಎಂ.ಎ. ಸಂಗನಾಳ, ಶ್ರೀಕಾಂತ ದೊಡಮನಿ, ಗಣೇಶ ಸತ್ಯಪ್ಪನವರ, ಎಸ್.ಎಸ್. ಚಿಕ್ಕೊಪ್ಪ, ಗಂಗಣ್ಣ ಮಿಕ್ಕಿ, ಚನ್ನಪ್ಪ ಹಳ್ಳಿ, ಪ್ರೀತಮ್ ಹಿರೇಮಠ, ಪರಶುರಾಮ ಭಜಂತ್ರಿ, ಉಮಾದೇವಿ ಬಿರನೂರ, ಸುವರ್ಣಾ ನಾಲವಾಡ, ಉಮಾ ನರೇಗಲ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ.
ದೇವರ ದಾಸಿಮಯ್ಯ ಪ್ರಥಮ ವಚನಕಾರ
ಗದಗ: ದೇವರ ದಾಸಿಮಯ್ಯನವರು 10ನೇ ಶತಮಾನದಲ್ಲಿ ಜನಿಸಿದ ಅವರು ನೇಕಾರಿಕೆಯೊಂದಿಗೆ ಅಂದಿನ ಸಮಸ್ಯೆಗಳನ್ನು ಪ್ರಥಮವಾಗಿ ವಚನ ರೂಪಗಳಲ್ಲಿ ಬರೆದು ಸಮಾಜ ತಿದ್ದುವ ಕಾರ್ಯ ಮಾಡಿದರು ಎಂದು ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಹೇಳಿದರು. ಅವರು ಶುಕ್ರವಾರ ದೇವರ ದಾಸಿಮಯ್ಯನವರ ಜಯಂತಿ ಅಂಗವಾಗಿ ಬೆಟಗೇರಿ ಬಸ್ ನಿಲ್ದಾಣದ ಬಳಿ ಇರುವ ದೇವರ ದಾಸಿಮಯ್ಯ ಪುತ್ಥಳಿಗೆ ಹೂಮಾಲೆ ಹಾಕಿ ಮಾತನಾಡಿದರು. ಈಶಣ್ಣ ಮುನವಳ್ಳಿ, ಕಾಂತಿಲಾಲ ಬನ್ಸಾಲಿ, ಪ್ರೇಮನಾಥ ಬಣ್ಣದ, ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ, ಶ್ರೀನಿವಾಸ ಕರಿ, ನಾಗಲಿಂಗ ಐಲಿ, ಶ್ರೀನಿವಾಸ ಹುಬ್ಬಳ್ಳಿ, ಅರವಿಂದ ಹುಲ್ಲೂರ, ನಾಮದೇವ ಚಿಕ್ಕಣ್ಣವರ, ಶ್ರೀಕಾಂತ ಖಟವಟೆ, ದಶರಥ ಕೊಳ್ಳಿ, ಸಹದೇವ ಕಲಾಲ, ಪ್ರವೀಣ ಕುಷ್ಟಗಿ, ನಿಂಗಪ್ಪ ಹರಿಹರ, ಚಿನ್ನಪ್ಪ ನೆಗಳೂರು ಮುಂತಾದವರು ಇದ್ದರು.
ದೇವರ ದಾಸಿಮಯ್ಯ ಜಯಂತಿ
ಗದಗ: ಬೆಟಗೇರಿಯ ದೇವರ ದಾಸಿಮಯ್ಯನವರ ಪುತ್ಥಳಿಗೆ ಹೂ ಮಾಲೆ ಹಾಕುವ ಮೂಲಕ ದೇವಾಂಗ ಸಮಾಜ ಬಾಂಧವರು ಶುಕ್ರವಾರ ದೇವರ ದಾಸಿಮಯ್ಯ ಜಯಂತ್ಯುತ್ಸವ ಆಚರಿಸಿದರು. ಇದೇ ಸಂದರ್ಭ ಪ್ರಥಮ ವಚನಕಾರರಾದ ದೇವರ ದಾಸಿಮಯ್ಯನವರ ವಚನ ಸಂಗ್ರಹ ಪುಸ್ತಕ ಬಿಡುಗಡೆಗೊಳಿಸಲಾಯಿತು. ಗ್ರಂಥಕತೃ ಶಂಕ್ರಪ್ಪ ತೊಂಡಿಹಾಳ ಹಾಗೂ ಪ್ರಕಾಶಕರನ್ನು ಸನ್ಮಾನಿಸಲಾಯಿತು. ರಾಘವೇಂದ್ರ ಯಳವತ್ತಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ನಗರಸಭೆ ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ, ಎ.ಬಿ. ಬಣ್ಣದ ಮತ್ತಿತರರು ಪಾಲ್ಗೊಂಡಿದ್ದರು.
ಚುನಾವಣೆ: ಪೊಲೀಸರಿಂದ ಪಥ ಸಂಚಲನ
ರೋಣ: ಲೋಕಸಭೆ ಚುನಾವಣೆ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ, ಚುನಾವಣೆ ಸುವ್ಯವಸ್ಥಿತ, ಶಾಂತಿಯುತವಾಗಿ ನಡೆಯುವಂತೆ ಮುಂಜಾಗ್ರತೆ ಕೈಗೊಳ್ಳಲಾಗಿದೆ ಎಂದು ಪಟ್ಟಣದಲ್ಲಿ ಶನಿವಾರ ಪೊಲೀಸರಿಂದ ಪತ ಸಂಚಲನ ಜರುಗಿತು. ಸಿಪಿಐ ವೆಂಕಟಪ್ಪ ನಾಯಕ ಮಾರ್ಗದರ್ಶನದಲ್ಲಿ, ಪಿಎಸ್ಐ ಡಿ.ಬಿ. ಪಾಟೀಲ ನೇತೃತ್ವದಲ್ಲಿ ಪಟ್ಟಣದ ಪೊಲೀಸ್ ಠಾಣೆಯಿಂದ ಪ್ರಾರಂಭವಾದ ಪಥಸಂಚಲನ ಬಸ್ ನಿಲ್ದಾಣ, ಮುಲ್ಲಾನಬಾವಿ ವೃತ್ತ, ಸೂಡಿ ವೃತ್ತ, ಸಿದ್ಧಾರೂಢ ಮಠ, ಶಿವಾನಂದ ಮಠ, ಪೋತದಾರ ರಾಜನಕಟ್ಟೆ, ಅಂಬೇಡ್ಕರ್ನಗರ, ಹಳೇ ತಹಸೀಲ್ದಾರ್ ಕಚೇರಿ ಸೇರಿದಂತೆ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಚುನಾವಣೆ ಕುರಿತು ಜಾಗೃತಿ ಮೂಡಿಸಿತು. ಪಥ ಸಂಚಲನದಲ್ಲಿ 1 ಕೆಎಸ್ಆರ್ಪಿ ತುಕಡಿ, 1 ಜಿಲ್ಲಾ ಶಸ್ತ್ರ ಮಿಸಲು ಪಡೆ, ಗೃಹ ರಕ್ಷಕದಳ ಸೇರಿದಂತೆ 150ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದರು.
ಕಾಂಗ್ರೆಸ್ ಮುಕ್ತ ಭಾರತ ನಮ್ಮ ಗುರಿ: ಉದಾಸಿ
ಲಕ್ಷ್ಮೇಶ್ವರ: ಕಾಂಗ್ರೆಸ್ ಪಕ್ಷವು ಕಳೆದ 10 ವರ್ಷಗಳ ಆಡಳಿತದಲ್ಲಿ ಭಾರತ ದೇಶವನ್ನು ಅಧೋಗತಿಯತ್ತ ತಂದು ನಿಲ್ಲಿಸಿದೆ. ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣಕ್ಕಾಗಿ ನರೇಂದ್ರ ಮೋದಿಯನ್ನು ಈ ದೇಶದ ಪ್ರಧಾನಿಯನ್ನಾಗಿ ಮಾಡಲು ಬಿಜೆಪಿಗೆ ನಿಮ್ಮ ಮತ ನೀಡಬೇಕು ಎಂದು ಸಂಸದ ಶಿವಕುಮಾರ ಉದಾಸಿ ಮನವಿ ಮಾಡಿದರು. ಅವರು ಸಮೀಪದ ಸೂರಣಗಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದರು. ಮಾಜಿ ಶಾಸಕ ರಾಮಣ್ಣ ಲಮಾಣಿ, ಜಿಪಂ ಅಧ್ಯಕ್ಷೆ ಕಮಲವ್ವ ಸಜ್ಜನರ, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ, ತಾಪಂ ಸದಸ್ಯ ನಿಂಬಣ್ಣ ಮಡಿವಾಳರ, ಪಾಟೀಲ, ರಾಮಣ್ಣ ಲಮಾಣಿ, ವಿಶ್ವನಾಥ ಕಪ್ಪತ್ತನವರ, ವಿಜಯ ಹಳ್ಳಿ, ಸಣ್ಣೀರಪ್ಪ ಹಳ್ಳೆಪ್ಪನವರ, ಜಾನು ಲಮಾಣಿ, ಶಂಕ್ರಣ್ಣ ಶೀರನಹಳ್ಳಿ, ಬಸವರಾಜ ಇಟಗಿ, ಗಿರೀಶ ಬೆನಕನಹಳ್ಳಿ ಇದ್ದರು.
ಗಜೇಂದ್ರಗಡ: ಮತದಾನ ಜಾಗೃತಿ ಸೈಕಲ್ ಜಾಥಾ
ಗಜೇಂದ್ರಗಡ: ಸಮೀಪದ ಕೊಡಗಾನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಏ. 17ರಂದು ನಡೆಯುವ ಲೋಕಸಭಾ ಚುನಾವಣೆ ಪ್ರಯುಕ್ತ ಮತದಾನದ ಜಾಗೃತಿ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ಜಾಥಾದಲ್ಲಿ ಶಾಲೆಯ ವಿದ್ಯಾರ್ಥಿಗಳು ನಾಗರಿಕರಲ್ಲಿ ಚುನಾವಣೆಯ ಮಹತ್ವದ ಬಗ್ಗೆ ತಿಳಿಸುವ ಮೂಲಕ ಮತದಾನ ಮಾಡುವುದು ಎಲ್ಲರ ಆದ್ಯ ಕರ್ತವ್ಯ, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂಬ ಇತ್ಯಾದಿ ಘೋಷಣೆ ಕೂಗುವ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸೈಕಲ್ನಲ್ಲಿ ಸಂಚರಿಸಿ ಮತದಾರರಲ್ಲಿ ಜಾಗೃತಿಯನ್ನುಂಟು ಮಾಡಿದರು. ಶಾಲೆಯ 150ಕ್ಕೂ ಹೆಚ್ಚು ಮಕ್ಕಳು ಸೈಕಲ್ ಮೂಲಕ ನಾಗರಿಕರಿಗೆ ಮತದಾನದ ಬಗ್ಗೆ ವಿಶೇಷವಾಗಿ ಜಾಗೃತಿ ಮೂಡಿಸಲಾಯಿತು. ಆರ್.ನಾರಾಯಣರಾವ್, ಶಿಕ್ಷಕರು ಹಾಗೂ ಸಿಬ್ಬಂದಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಇದ್ದರು.
ಕುಮಾರಸ್ವಾಮಿ ಆಡಳಿತಕ್ಕೆ ಜನಮೆಚ್ಚುಗೆ
ಮುಂಡರಗಿ: ಎಚ್.ಡಿ. ಕುಮಾರಸ್ವಾಮಿ ಅವರು 20 ತಿಂಗಳ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಾಡಿದ ಆಡಳಿತ ಹಾಗೂ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮತದಾರರು ಮೆಚ್ಚಿದ್ದಾರೆ. ಆದ್ದರಿಂದ ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ರವಿ ಮೆಣಸಿನಕಾಯಿ ಗೆಲವು ಖಚಿತ ಎಂದು ಗದಗ ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಸವರಾಜ ದೇಸಾಯಿ ಹೇಳಿದರು. ಅವರು ಶನಿವಾರ ಪಟ್ಟಣದ ತೋಂಟದಾರ್ಯ ಮಠದಿಂದ ಹಾವೇರಿ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರವಿ ಮೆಣಸಿನಕಾಯಿ ಪರ ಮನೆ ಮನೆ ಪ್ರಚಾರ ಪ್ರಾರಂಭಿಸುವ ಪೂರ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಎಂ.ಜಿ. ವಡ್ಡಟ್ಟಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ ಮಾಡಲಗೇರಿ, ಉಮೇಶ ಹಿರೇಗೌಡ್ರ ಮಾತನಾಡಿದರು. ಕಾರ್ಯದರ್ಶಿ ದಾಕ್ಷಾಯಿಣಿ ರಾವ್, ಅರುಣಾ ಹಳಕಟ್ಟಿ, ಮಾರುತಿ ಕವಲೂರ, ಹೇಮಣ್ಣ ಹಾರೋಗೇರಿ, ಹಾಲಪ್ಪ ಹಡಪದ ಇದ್ದರು.
ಬಾಬು ಜಗಜೀವನರಾಂ ಆದರ್ಶಗಳು ಅನನ್ಯ
ರೋಣ: ಬಡವರ, ದೀನದಲಿತರ ಬದುಕಿಗೆ ಆಸರೆ ಮತ್ತು ಆಶಾಕಿರಣರಾಗಿದ್ದ ಹಸಿರು ಕ್ರಾಂತಿ ಹರಿಕಾರ ಡಾ. ಜಗಜೀವನರಾಂ ಅವರ ಆದರ್ಶ, ತತ್ವ, ಮೌಲ್ಯಗಳು ಎಂದಿಗೂ ಅನನ್ಯವಾಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಎ.ಜಿ. ಪಂಡಿತ ಹೇಳಿದರು. ಶನಿವಾರ ತಹಸೀಲ್ದಾರ್ ಕಚೇರಿಯ ಸಭಾಭವನದಲ್ಲಿ ಡಾ. ಬಾಬು ಜಗಜೀವನರಾಂ ಅವರ 107ನೇ ಜಯಂತಿ ನಿಮಿತ್ತ ಡಾ. ಬಾಬು ಜಗಜೀವನರಾಂ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಸಿಡಿಪಿಒ ಬಿ.ಎಸ್. ಮೋಕಾಶಿ, ಅಕ್ಷರ ದಾಸೋಹ ಅಧಿಕಾರಿ ಪಿ.ಬಿ. ಪಾಟೀಲ, ಸಮಾಜ ಕಲ್ಯಾಣ ಅಧಿಕಾರಿ ಎಲ್.ವಿ. ಮೇಸ್ತಾ, ಬಿಇಒ ಡಿ.ಐ. ಅಸುಂಡಿ, ತಾಪಂ ಇಒ ಎಸ್.ಎಂ. ಪಿಡಶೆಟ್ಟಿ, ನೌಕರ ಸಂಘದ ಅಧ್ಯಕ್ಷ ಶಿವಪುತ್ರಪ್ಪ ದೊಡ್ಡಮನಿ, ಎಸ್.ಎಂ. ಕೋತ, ವೆಂಕಟೇಶ ದ್ವಾಸಲಕೇರಿ, ಪಿ.ಎಚ್. ಕಡಿವಾಲ, ಪುರಸಭೆ ಮುಖ್ಯಾಧಿಕಾರಿ ಬಾಬುರಾವ್ ಕಮತರ, ಡಾ. ರಾಜಕುಮಾರ ಇದ್ದರು. ಉಪತಹಸೀಲ್ದಾರ್ ಎನ್.ಎಸ್. ಕೂಡಲ ವಂದಿಸಿದರು.
ತಂಗೋಡ: ಹುತಾತ್ಮ ಮೈಲಾರ
ಮಹಾದೇವಪ್ಪಗೆ ಗೌರವ ನಮನ
ಲಕ್ಷ್ಮೇಶ್ವರ: ಹುತಾತ್ಮ ಮೈಲಾರ ಮಹಾದೇವಪ್ಪನವರ ಪ್ರತಿಮೆಗೆ ಹಲವು ಜನರು ಸಮೀಪದ ತಂಗೋಡ ಗ್ರಾಮದಲ್ಲಿ ಗೌರವ ಸಲ್ಲಿಸಿದರು. ಮೈಲಾರ ಮಹಾದೇವಪ್ಪ, ತಿರುಕಪ್ಪ ಮಡಿವಾಳರ, ವೀರಯ್ಯ ಹಿರೇಮಠ ಅವರು 1943 ಏಪ್ರಿಲ್ 1ರಂದು ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ಬ್ರಿಟಿಷರ ಕಂದಾಯ ಇಲಾಖೆಗೆ ಸೇರಿದ ಕಚೇರಿಗೆ ಮುತ್ತಿಗೆ ಹಾಕಿ ಅಲ್ಲಿಂದ ವಸ್ತುಗಳನ್ನು ನಗ ನಾಣ್ಯಗಳನ್ನು ತರುತ್ತಿರುವ ಸಂದರ್ಭದಲ್ಲಿ ಬ್ರಿಟಿಷರ ಅಧಿಕಾರಿಗಳ ಗುಂಡಿಗೆ ಬಲಿಯಾಗುವ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಪ್ರಾಣವನ್ನು ತೆತ್ತು ಹುತಾತ್ಮರಾದರು. ಅಂದಿನಿಂದ ಪ್ರತಿವರ್ಷ ಹುತಾತ್ಮರ ದಿನವನ್ನು ಏಪ್ರಿಲ್ ಒಂದರಂದು ಆಚರಿಸಲಾಗುತ್ತಿದೆ. ಅದರಂತೆ ಮಂಗಳವಾರ ಶಿರಹಟ್ಟಿ ತಾಲೂಕಿನ ತಂಗೋಡ, ಕೊಂಚಿಗೇರಿಯಲ್ಲಿ ಹುತಾತ್ಮರ ಪ್ರತಿಮೆಗಳಿಗೆ ಗೌರವ ಸಲ್ಲಿಸುವ ಮೂಲಕ ಹುತಾತ್ಮರ ದಿನ ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷ ಮುದಕಪ್ಪ ಸೂರಣಗಿ, ವೀರಭದ್ರಪ್ಪ ಅರಿಷಿಣದ, ಮಲ್ಲವ್ವ ಆನೆಪ್ಪನವರ, ಸಿ.ಕೆ. ಬಡಿಗೇರ, ಎಚ್.ಎಫ್. ತಳವಾರ ಇದ್ದರು.
ಬಾಬು ಜಗಜೀವನರಾಂ ಜನ್ಮ ದಿನಾಚರಣೆ
ಗದಗ: ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಶನಿವಾರ ಡಾ. ಬಾಬು ಜಗಜೀವನರಾಂ ಅವರ 107ನೇ ಜನ್ಮದಿನ ಆಚರಿಸಲಾಯಿತು. ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಜಿಪಂ ಸಿಇಒ ವೀರಣ್ಣ ತುರಮರಿ, ಅಪರ ಜಿಲ್ಲಾಧಿಕಾರಿ ನಾಗರಾಜ, ಡಿವೈಎಸ್ಪಿ ವಿಜಯ ಡಂಬಳ ಅವರು ಜಗಜೀವನರಾಂ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮೂಲಕ ಗೌರವ ಅರ್ಪಿಸಿದರು. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಖಾಜಾ ಹುಸೇನ್ ಮುಧೋಳ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಿಬ್ಬಂದಿ ಸಮಾರಂಭದಲ್ಲಿ ಭಾಗವಹಿಸಿ ಜಗಜೀವನರಾಂ ಅವರಿಗೆ ಗೌರವ ಅರ್ಪಿಸಿದರು.
ಸಿಎಂ ಸಿದ್ದು ಮೋದಿ ಅಲೆಗೆ ಹೆದರುತ್ತಿದ್ದಾರೆ: ಕಿಶನ್
ಗದಗ: ರಾಜ್ಯದ ಸಿಎಂ ಮೋದಿ ಅಲೆಗೆ ಹೆದರುತ್ತಿದ್ದಾರೆ ಎಂದು ನಮೋ ಬ್ರಿಗೇಡ್ನ ಜಿಲ್ಲಾಧ್ಯಕ್ಷ ಕಿಶನ್ ಮೇರವಾಡೆ ಹೇಳಿದರು. ಗುರುವಾರ ನಗರದ ವಾರ್ಡ್ ನಂ. 29ರಲ್ಲಿ ನಮೋ ಬ್ರಿಗೇಡ್ನ ವತಿಯಿಂದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪರ ಪಾದಯಾತ್ರೆ ನಡೆಸಿ ಮಾತನಾಡಿದರು. ರಾಜ್ಯದಲ್ಲಿ ನರೇಂದ್ರ ಮೋದಿ ಹೆಸರನ್ನು ಪದೇ ಪದೇ ಸೇರಿಸುವಲ್ಲಿ ರಾಜ್ಯದ ಸಿಎಂ ಸಿದ್ದರಾಮಯ್ಯ ಮೊದಲಿಗರಾಗಿದ್ದು ವಿಚಿತ್ರವಾದರೂ ಸತ್ಯ. ಸಿದ್ದರಾಮಯ್ಯ ಅವರು ಮೋದಿ ಅಲೆಗೆ ಹೆದರಿರುವುದು ಸ್ಪಷ್ಟವಾಗಿದೆ ಎಂದರು. ಸಂಗಣ್ಣ ಬಂಗಾರಶೆಟ್ರ, ರಾಜು ಕುರುಡಗಿ, ಛಗನ ರಾಜಪುರೋಹಿತ, ಅಮರನಾಥ ಬೆಟಗೇರಿ, ವಿನಾಯಕ ಹಬೀಬ, ಯುವ ಮೋರ್ಚಾ ಕಾರ್ಯಕರ್ತರು, ನಮೋ ಬ್ರಿಗೇಡ್ ಸಂಚಾಲಕರು, ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಕಾಂಗ್ರೆಸ್ನಿಂದ ಮಾತ್ರ ಅಭಿವೃದ್ಧಿ: ಯಾವಗಲ್
ನರಗುಂದ: ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದ ಅಭಿವೃದ್ಧಿಗೆ ಹಗಲಿರಳು ಶ್ರಮಿಸಿದ ಪಕ್ಷ ಕಾಂಗ್ರೆಸ್. ಇಂತಹ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಜನತೆ ಕಾಂಗ್ರೆಸ್ಗೆ ಮತ ನೀಡಬೇಕೆಂದು ಶಾಸಕ ಬಿ.ಆರ್. ಯಾವಗಲ್ ಹೇಳಿದರು. ಅವರು ತಾಲೂಕಿನ ಮುದ್ಗಣಕಿ ಗ್ರಾಮದಲ್ಲಿ ಈಚೆಗೆ ಬಾಗಲಕೋಟೆ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಅಜಯಕುಮಾರ ಸರನಾಯಕ ಅವರಿಗೆ ಮತ ಯಾಚನೆ ಮಾಡಿ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ಗೆ ಈ ದೇಶದಲ್ಲಿ ದೊಡ್ಡ ಇತಿಹಾಸವಿದೆ, ಹಿಂದಿನ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಆಡಳಿತ ಮಾಡುತ್ತಾ ಬಂದಿದ್ದರಿಂದ ಇಂದು ಭಾರತ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಈ ಪಕ್ಷ ಸರ್ವ ಜನಾಂಗದವರಿಗೆ ಸಮಾನತೆ ಬಯಸುವ ಪಕ್ಷವಾಗಿದ್ದು, ಜನತೆ ಕಾಂಗ್ರೆಸ್ಗೆ ಬೆಂಬಲಿಸಿ ಮತ್ತೆ ದೇಶದ ಅಭಿವೃದ್ಧಿಗೆ ಶ್ರಮಿಸಿ ಎಂದರು. ಕಾಂಗ್ರೆಸ್ ಅಭ್ಯರ್ಥಿ ಅಜಯಕುಮಾರ ಸರನಾಯಕ ಮಾತನಾಡಿದರು. ಪುರಸಭೆ ಸದಸ್ಯ ಸಿ.ಬಿ. ಪಾಟೀಲ, ವಿಠಲ ಶಿಂಧೆ, ಎಫ್.ವೈ. ದೊಡಮನಿ, ಎಸ್.ಡಿ. ಕೊಳ್ಳಿ, ದ್ಯಾಮಣ್ಣ ಸವದತ್ತಿ, ಡಿ.ಎಸ್. ಪಾಟೀಲ, ಗುರು ದೊಡಮನಿ, ಗೋವಿಂದರಡ್ಡಿ ತಿಮ್ಮರಡ್ಡಿ, ಬಿ.ಸಿ. ಬ್ಯಾಳಿ, ಮುಂತಾದವರು ಇದ್ದರು.
ಗದಗ 32ನೇ ವಾರ್ಡಿನಲ್ಲಿ ಬಿಜೆಪಿ ಪ್ರಚಾರಕ್ಕೆ ಚಾಲನೆ
ಗದಗ: ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರವಾಗಿ ಗದಗ 35ನೇ ವಾರ್ಡಿನಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹಾಗೂ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಹಾಗೂ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ನೇತೃತ್ವದಲ್ಲಿ ಈಚೆಗೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಕರಿಗೌಡ ಮಳೆಗೌಡ್ರ, ಜಯಣ್ಣ ಶೆಟ್ಟರ್, ಎಸ್.ಎಸ್. ಗಡಗಿ, ಸಿ.ಎಸ್. ಹಿರೇಮಠ, ವಿ.ಎಂ.ಪಾಟೀಲ, ಸಾವಿತ್ರಿ ಪಾಟೀಲ, ವಿಕ್ರಮ್ ಬಿದರೂರ, ಮಂಜುನಾಥಸ್ವಾಮಿ ಹಿರೇಮಠ, ಶಿವಕುಮಾರ ಕರ್ಕಿಕಟ್ಟಿ, ಭರತ ಹೂಗಾರ, ಸೋಮಣ್ಣ ಹರ್ಲಾಪುರ, ವೀರಣ್ಣ ಕಡಗದ, ಮಲ್ಲಿಕಾರ್ಜುನ ಹೊಳೆಯಣ್ಣವರ, ಶಿವಾನಂದ ಪಟ್ಟಣಶೆಟ್ಟಿ, ಪುಲಕೇಶಿ ಗಾಳಿ, ಶ್ರೀಶೈಲಪ್ಪ ನವಲಗುಂದ, ಗೀತಾ, ಹಾಗೂ ಪ್ರಕಾಶ ಕೋಟಿ ಸೇರಿದಂತೆ ವಾರ್ಡಿನ ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದರು.
ಅಡವಿಸೋಮಾಪುರ: ಮೇ 1ರಂದು ಸಾಮೂಹಿಕ ವಿವಾಹ
ಗದಗ: ತಾಲೂಕಿನ ಅಡವಿ ಸೋಮಾಪುರ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ 7ನೇ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ವಿವಾಹಗಳು ಮೇ 1ರಂದು ಜರುಗಲಿವೆ. ಅಂದು ಬೆಳಗ್ಗೆ 6ಕ್ಕೆ ಬೀರಲಿಂಗೇಶ್ವರ ಮೂರ್ತಿಗೆ ಮಹಾಭಿಷೇಕ ಮತ್ತು ಪೂಜಾ ಕಾರ್ಯಕ್ರಮ ಜರುಗಲಿದೆ. ಮಧ್ಯಾಹ್ನ 12ಕ್ಕೆ ಬೀರಲಿಂಗೇಶ್ವರರ ಭಾವಚಿತ್ರ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವ ಕಾರ್ಯಕ್ರಮವು ಹೊಸಳ್ಳಿಯ ಬೂದೀಶ್ವರ ಸಂಸ್ಥಾನ ಮಠದ ಬೂದೀಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಜರುಗಲಿದೆ. ಸಾಮೂಹಿಕ ವಿವಾಹಗಳಲ್ಲಿ ವಿವಾಹವಾಗಲು ಇಚ್ಚಿಸುವವರು ಸರ್ಕಾರಿ ನಿಯಮಗಳನ್ವಯ ಏ. 22ರ ಒಳಗಾಗಿ ಹೆಸರು ನೋಂದಾಯಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 94485 63318, 81975 38321 ಸಂಪರ್ಕಿಸಬಹುದು.
ಗದಗ: ಇಂದು ಬಿಜೆಪಿ ಸಂಸ್ಥಾಪನಾ ದಿನಾಚರಣೆ
ಗದಗ: ಬಿಜೆಪಿ ಸಂಸ್ಥಾಪನಾ ದಿನಾಚರಣೆ ಏ. 6ರಂದು ಸಂಜೆ 5ಕ್ಕೆ ನಗರದ ಗದಗ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಳಕಪ್ಪ ಬಂಡಿ, ಮಾಜಿ ಸಚಿವ ಸಿ.ಸಿ. ಪಾಟೀಲ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಮಾಜಿ ಶಾಸಕ ರಾಮಣ್ಣ ಲಮಾಣಿ, ಎಂ.ಎಸ್. ಕರಿಗೌಡ್ರ, ಮಾಜಿ ಶಾಸಕ ಸಿ.ಎಸ್. ಮುತ್ತಿನಪೆಂಡಿಮಠ, ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ, ಚುನಾಯಿತ ಪ್ರತಿನಿಧಿಗಳು ಹಾಗೂ ಪಕ್ಷದ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಗದಗ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಎಂ. ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ನಿಂದ ಮಾತ್ರ ಸ್ಥಿರ ಸರ್ಕಾರ: ಸರನಾಯಕ
ನರಗುಂದ: ಕೇಂದ್ರದಲ್ಲಿ ಎಲ್ಲ ವರ್ಗದ ಜನತೆಯ ಅಭಿವೃದ್ದಿಗೆ ಶ್ರಮಿಸಲು ಕಾಂಗ್ರೆಸ್ ಯುಪಿಎ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಬಾಗಲಕೋಟೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಅಜಯಕುಮಾರ ಸರನಾಯಕ ಹೇಳಿದರು. ಅವರು ತಾಲೂಕಿನ ಚಿಕ್ಕನರಗುಂದ, ಜಗಪೂರ, ಹುಣಸಿಕಟ್ಟಿ, ಗುರ್ಲಕಟ್ಟಿ, ಸಂಕದಾಳ, ಕಣಕಿಕೊಪ್ಪ, ಬೆನಕಕೊಪ್ಪ ಗ್ರಾಮಗಳಿಗೆ ತೆರಳಿ ಕಾಂಗ್ರೆಸ್ಗೆ ಬೆಂಬಲಿಸಿ ಮತ ಯಾಚಿಸಿದರು. ಶಾಸಕ ಬಿ.ಆರ್. ಯಾವಗಲ್ ಮಾತನಾಡಿದರು. ವಿಠ್ಠಲ ಶಿಂಧೆ, ಎಂ.ಎಚ್. ತಿಮ್ಮರಡ್ಡಿ, ಎಸ್.ಡಿ. ಕೊಳ್ಳಿ, ಬಿ.ಸಿ. ಬ್ಯಾಳಿ, ಎಫ್.ವೈ. ದೊಡ್ಡಮನಿ, ಗೋವಿಂದರಡ್ಡಿ ತಿಮ್ಮರಡ್ಡಿ, ಡಿ.ಎಸ್. ಪಾಟೀಲ, ಗಿರೀಶ್ ಪಾಟೀಲ, ಪುರಸಭೆ ಸದಸ್ಯ ಸಿ.ಬಿ. ಪಾಟೀಲ, ಎಫ್.ಆರ್. ಪಾಟೀಲ ಮುಂತಾದವರು ಇದ್ದರು.
ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶ್ರಮ: ಮೇರವಾಡೆ
ಗದಗ: ಗುಜರಾತನಲ್ಲಿ ಅಲ್ಪ ಸಂಖ್ಯಾತರಾದ ಮುಸ್ಲಿಮರನ್ನು ಗೌರವದಿಂದ ಕಾಣಲಾಗುತ್ತಿದೆ. ಅಲ್ಲದೆ ಅವರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಕಾಂಗ್ರೆಸ್ ಮುಸಿಮರನ್ನು ಅಲ್ಪಸಂಖ್ಯಾತರೆಂದು ಬಿಂಬಿಸುತ್ತದೆ. ಆದರೆ ಬಿಜೆಪಿ ಮುಸ್ಲಿಂ ಬಾಂಧವರನ್ನು ಭಾರತೀಯರೆಂದು ಅಭಿಮಾನ ಪಡುತ್ತದೆ ಎಂದು ನಮೋ ಬ್ರಿಗೇಡನ ಸಂಚಾಲಕ ಕಿಶನ್ ಮೇರವಾಡೆ ಹೇಳಿದರು. ಶುಕ್ರವಾರ 12ನೇ ವಾರ್ಡಿನಲ್ಲಿ ನಮೋ ಬ್ರಿಗೇಡ್ ಹಾಗೂ ಯುವ ಮೋರ್ಚಾ ಸದಸ್ಯ ಬಳಗದೊಂದಿಗೆ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಮತಯಾಚಿಸಿ, ಮಾತನಾಡಿದರು. ಸಹದೇವ ಗಣಾಚಾರಿ, ಈಶಣ್ಣ ಬೇಲೇರಿ, ಶರಣು ಮುಧೋಳ, ಈರಣ್ಣ ಪವಾರ, ಪ್ರಕಾಶ ಲೋಣಿ, ಫಕೀರಗೌಡ ಪಾಟೀಲ, ಸುನೀಲ ಹೊಸೂರ, ಮಹಾಂತೇಶ ನಾಲ್ವಾಡ, ಬಸವರಾಜ ಜಾಲಿಹಾಳ, ಯುವಮೋರ್ಚಾ ಅಧ್ಯಕ್ಷ ಛಗನ್ ರಾಜಪುರೋಹಿತ, ಸಿದ್ರಾಮೇಶ ಹಿರೇಮಠ, ವಿನಾಯಕ ಹಬೀಬ, ಗಂಗಾಧರ ಹಬೀಬ, ಶ್ರೀಕಾಂತ ಕಿರೇಸೂರ, ಪ್ರೀತಂ ಹಿರೇಮಠ ಇದ್ದರು.
ಬಿಜೆಪಿ ಅಭ್ಯರ್ಥಿ ಶಿವಕುಮಾರ ಪರ ಪ್ರಚಾರ
ಗದಗ: ನಗರದ ವಾರ್ಡ್ ನಂ. 2ರಲ್ಲಿ ಹಾವೇರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರವಾಗಿ ಬಿಜೆಪಿ ಕಾರ್ಯಕರ್ತರು ವಾರ್ಡ್ನ ಮನೆ ಮನೆಗೆ ಭೇಟಿ ನೀಡಿ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಗದಗ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಎಂ.ಎಂ. ಹಿರೇಮಠ ಮಾತನಾಡಿ, ಈ ಬಾರಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗುವುದು ಖಚಿತ ಎಂದರು. ಶಹರ ಕಾರ್ಯದರ್ಶಿ ಬಸವರಾಜ ಹಡಪದ, ಎಂ.ಎ. ಸಂಗನಾಳ, ಆನಂದ ಶೇಟ, ಗಂಗಾಧರ ಮೇಲಗಿರಿ, ಚನ್ನಪ್ಪ ದ್ಯಾಂಪುರ, ಶಿದ್ಲಿಂಗಪ್ಪ ಜಿನಗಾ, ಅಂದಪ್ಪ ಕುಂಬಾರ, ಶಿವಕುಮಾರ ಹಿರೇಮಠ, ಮಕ್ತುಮಸಾಬ ನಾಗನೂರ, ಶಿವಾನಂದ ಹಡಪದ, ಪ್ರೀತಮ್ ಹಿರೇಮಠ, ಪ್ರವೀಣ ನಂದಿಕೋಲಮಠ, ಶಿವಣ್ಣ ಹನುಮನಾಳ, ಶೇಖರಯ್ಯ ಸತ್ತಪ್ಪಮಠ, ಅಜ್ಜಪ್ಪ ಕರಮುಡಿ, ವೀರಭದ್ರಯ್ಯ ಶಿವ್ಪನಮಠ, ಬಸವರಾಜ ಲಗಳಿ ಇದ್ದರು.