ಆರೋಗ್ಯ ಜಾಗೃತಿ ಅಗತ್ಯ: ಶ್ರೀ
ಕನ್ನಡಪ್ರಭ ವಾರ್ತೆ, ಗದಗ, ಏ. 6
ಇಂದಿನ ದಿನದಲ್ಲಿ ಮೌಢ್ಯ, ಮೂಢನಂಬಿಗಳಿಗೆ ಜೋತುಬೀಳದೇ ಸರಿಯಾದ ಆರೋಗ್ಯದ ಜಾಗೃತಿ ಅವಶ್ಯಕ ಎಂದು ತೋಂಟದ ಡಾ. ಸಿದ್ಧಲಿಂಗ ಶ್ರೀ ಹೇಳಿದರು.
ಅವರು ಭಾನುವಾರ ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಆಶ್ರಯದಲ್ಲಿ ಜಾತ್ರೆ ಅಂಗವಾಗಿ ನಗರದ ಜ. ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಜಾತ್ರಾ ಸಮಿತಿ, ಧಾರವಾಡದ ಎಸ್ಡಿಎಂ ನಾರಾಯಣ ಹೃದಯಾಲಯ, ಡಿಜಿಎಂ ಆಯುರ್ವೇದ ವೈದ್ಯಕೀಯ ಕಾಲೇಜು, ಐಎಂಎ ಸಹಯೋಗದಲ್ಲಿ ನಡೆದ ಆರೋಗ್ಯ ಉಚಿತ ತಪಾಸಣಾ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಡಾ. ಆದಿತ್ಯ ಪಾಂಡುರಂಗಿ, ಡಾ. ಅಶೋಕ ಪಾಟೀಲ, ಡಾ. ಗೋಜನೂರ, ಜೂಲಿ, ಮಾರ್ಗನ್, ಹಿರಿಯ ವೈದ್ಯ ಡಾ. ರೇಷ್ಮೆ, ಮಲ್ಲಮ್ಮ ಗೊಜನೂರ, ಪ್ರಕಾಶ ಕೊಲ್ಲೊಳಗಿ, ಧರಣಾ, ಪಲ್ಲೇದ, ಸಂಜೀವ ಜೋಶಿ, ಜಿ. ಬಿ.ಪಾಟೀಲ, ಅನುರಾಧಾ, ಸೂರಿ, ಮಾನ್ವಿ, ಗುರುರಾಜ ಜಮಾದಾರ, ಚಂದ್ರಶೇಖರ ಬಳ್ಳಾರಿಯವರನ್ನು ಶ್ರೀಗಳು ಸನ್ಮಾನಿಸಿದರು. ಗದಗ ಐಎಂಎ ಅಧ್ಯಕ್ಷ ಡಾ. ಆರ್.ಎನ್. ಪಾಟೀಲ, ಜಾತ್ರಾ ಸಮಿತಿ ಉಪಾಧ್ಯಕ್ಷರಾದ ಪ್ರೊ. ಕೆ.ಎಚ್. ಬೇಲೂರ, ದಾನಯ್ಯ ಗಣಾಚಾರಿ, ಶಿವಕುಮಾರ ಪಾಟೀಲ, ಶಿವಯೋಗಿ ತಡಸದ, ಪ್ರಕಾಶ ಉಗಲಾಟದ, ಸಂಗಣ್ಣ ಲಕ್ಕುಂಡಿ, ಶಿವನಗೌಡ ಗೌಡರ ಉಪಸ್ಥಿತರಿದ್ದರು. ಜಾತ್ರಾ ಸಮಿತಿ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳೊಳ್ಳಿ ಸ್ವಾಗತಿಸಿ, ಪ್ರಕಾಶ ಕರಿಸೋಮನಗೌಡ್ರ ಪರಿಚಯಿಸಿ, ಡಾ. ಸತೀಶ ಹೊಂಬಾಳಿ ನಿರೂಪಿಸಿ, ಎಂ. ಸಿ. ಐಲಿ ವಂದಿಸಿದರು.