ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಭೌಗೋಳಿಕ ಲಕ್ಷಣ, ಸಂಪನ್ಮೂಲ ಚರಿತ್ರೆಗೆ ಪೂರಕ: ಡಾ. ಅಕ್ಕಿ

Rashmi Kasaragodu
Updated On : 7 Apr 2014, 12:37 pm

ಗದಗ: ಧರ್ಮ, ಶಿಕ್ಷಣ, ಆರ್ಥಿಕ, ಕಲೆ, ವಾಸ್ತುಶಿಲ್ಪ ಕ್ಷೇತ್ರಗಳಿಗೆ ಅಭೂತಪೂರ್ವ ಕೊಡುಗೆ ನೀಡಿದ ಭಾರತ ಚರಿತ್ರೆಗೆ ಭೌಗೋಳಿಕ ಲಕ್ಷಣ, ಸಂಪನ್ಮೂಲಗಳು ಪೂರಕವಾಗಿದ್ದು, ಅದರಿಂದಲೇ ವಿದೇಶಿಗರನ್ನು ಆಕರ್ಷಿಸುತ್ತಿದೆ ಎಂದು ಅಳ್ನಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಸಹಪ್ರಾಧ್ಯಾಪಕ ಡಾ. ಬಸವರಾಜ ಅಕ್ಕಿ ಹೇಳಿದರು.
ಹುಲಕೋಟಿ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಂತರಿಕ ಗುಣಮಟ್ಟ ಭರವಸೆ ಕೋಶ (ಐ.ಕ್ಯು.ಎ.ಸಿ.) ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿದ ಅವರು, ಇತಿಹಾಸದ ಮೇಲೆ ಭೌಗೋಳಿಕ ಲಕ್ಷಣಗಳ ಪ್ರಭಾವ ಕುರಿತು ಉಪನ್ಯಾಸ ನೀಡಿದರು.
ಶಾಂತಿ ಮಂತ್ರ, ಸದ್ಭಾವನೆ ತತ್ವಗಳುಳ್ಳ ಬೌದ್ಧ ಧರ್ಮ ಏಷ್ಯಾ ಖಂಡದಲ್ಲಿ ಪ್ರಸಾರ ಹೊಂದಿ, ರಾಷ್ಟ್ರೀಯ ಧರ್ಮವಾಗಿ ಬೆಳೆದಿರುವುದು ಅದರ ತತ್ವಗಳ ಶಕ್ತಿ ಪ್ರದರ್ಶಿಸುತ್ತದೆ. ಶ್ರೀಮಂತ ಸಿಂಧೂ ಸಂಸ್ಕೃತಿ ಜಗತ್ತಿಗೆ ಮಾದರಿಯಾಗಿತ್ತು. ನಮ್ಮ ಶಿಕ್ಷಣ ಪದ್ಧತಿಯ ನಲಂದಾ ವಿಶ್ವವಿದ್ಯಾಲಯ ಶ್ರೇಷ್ಠತೆಯ ಪ್ರತೀಕವಾಗಿತ್ತು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಶಿವಪ್ಪ ಕುರಿ ಮಾತನಾಡಿ, ಭಾರತದ ಇತಿಹಾಸದಲ್ಲಿ ಸಿಂಧೂ ಕೊಳ್ಳದ ನಾಗರಿಕತೆ ವೈಶಿಷ್ಟಪೂರ್ಣವಾಗಿತ್ತು. ರಾಯಚೂರು ದೋ-ಅಬ್ ಪ್ರದೇಶ ಫಲವತ್ತತೆಯಿಂದ ಕೂಡಿದ್ದರಿಂದ ಆ ಭೂಮಿಗಾಗಿ ಬಿಜಾಪುರ ಸುಲ್ತಾನರು, ವಿಜಯನಗರದ ಅರಸರು ಕಾದಾಡಿದ್ದನ್ನು ನೋಡಿದರೆ ಇತಿಹಾಸದ ಮೇಲೆ ಭೌಗೋಳಿಕ ಲಕ್ಷಣಗಳ ಪ್ರಭಾವ ತಿಳಿಯುತ್ತವೆ ಎಂದರು.
ಇತಿಹಾಸ ಅಧ್ಯಾಪಕ ರಮಜಾನಸಾಬ ನದಾಫ್ ಉಪನ್ಯಾಸ ನೀಡಿದರು. ಪ್ರಾಧ್ಯಾಪಕ ಡಾ. ಉಮೇಶ ಅರಹುಣಸಿ, ಚಂದ್ರಪ್ಪ ಎಚ್.ಎಸ್., ನಾಗರಾಜ ಹಾವಿನಾಳ, ಎಫ್.ಬಿ. ಆನಿ, ಸವಿತಾ ಪಾಟೀಲ, ರಂಜನಾ ಭಂಡಾರೆ, ಡಾ. ಎಂ.ಕೆ. ಹೊನಕಾಂಬಳೆ, ಜಯಶ್ರೀ ಮುತಗಾರ, ಬಸವರಾಜ ಅಂಬಿಗೇರ, ಮುತ್ತಪ್ಪ ಬದ್ನಿಕಾಯಿ ಮುಂತಾದವರು ಇದ್ದರು. ಐ.ಕ್ಯು.ಎ.ಸಿ. ಸಂಯೋಜಕ ಗಂಗಾಧರ ಗುಮಗೋಳಮಠ ಸ್ವಾಗತಿಸಿದರು. ಅಣ್ಣಪ್ಪ ರೊಟ್ಟಿಗವಾಡ ನಿರೂಪಿಸಿದರು. ಡಿ.ಜಿ. ಲಮಾಣಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement