ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಯುವಶಕ್ತಿಯಿಂದ ಗೆಲ್ಲುವೆ: ಸಲೀಂ

Rashmi Kasaragodu
Updated On : 7 Apr 2014, 12:36 pm

ಹಾವೇರಿ:  ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಹಿರಿಯರ ಆಶೀರ್ವಾದ, ತಾಯಂದಿರ ಹಾರೈಕೆ, ಯುವಕರ ಶಕ್ತಿಯಿಂದ ಗೆಲ್ಲುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಲೋಕಸಭಾ ಕ್ಷೇತ್ರ, ಎಂಟು ವಿಧಾನಸಭಾ ಕ್ಷೇತ್ರಗಳ ಯುವ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ದಿ. ಪ್ರಧಾನಿ ರಾಜೀವ ಗಾಂಧಿಯವರು 18 ವರ್ಷದ ಯುವಕರು ಈ ದೇಶದ ಆಡಳಿತದಲ್ಲಿ ಭಾಗಿಯಾಗಲೆಂದು ಮತದಾನದ ಹಕ್ಕು ನೀಡಿದ್ದಾರೆ. ಇಂದಿನ ಟಿವಿ, ಕಂಪ್ಯೂಟರ್, ಮೊಬೈಲ್ ಶ್ರೀಸಾಮಾನ್ಯರ ಕೈಗೆ ದೊರಕಲು ರಾಜೀವ ಗಾಂಧಿ ಕನಸಿನ ಫಲವಾಗಿದೆ. ಶಕ್ತಿಶಾಲಿ ಭಾರತ ಕಟ್ಟಲು ದೇಶದ ಏಕತೆ, ಸಮಗ್ರತೆ, ಭಾರತದ ಸಾರ್ವಭೌಮತ್ವ ಎತ್ತಿಹಿಡಿಯಲು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋಲುವಂತಾಗಿದ್ದು, ಈ ಬಾರಿ ನನ್ನ ಗೆಲುವು ನಿಶ್ಚಿತ ಎಂದು ಹೇಳಿದರು. ಕೆಪಿಸಿಸಿ ವೀಕ್ಷಕ ಡಿ. ಬಸವರಾಜ್ ಮಾತನಾಡಿದರು. ಯುವ ಕಾಂಗ್ರೆಸ್ ಅಧ್ಯಕ್ಷ ನಾಸಿರ್ಖಾನ್ ಪಠಾಣ, ಪ್ರಕಾಶ ಕೋಳಿವಾಡ, ಹುಚ್ಚಪ್ಪ ಮಾಳಗಿ, ನಾಗರಾಜ ಮರಿಯಮ್ಮನವರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement