ಲೋಕಸಭಾ ಚುನಾವಣೆ: ದೂರು ದಾಖಲಿಸಲು ಸೂಚನೆ
ನರಗುಂದ: ಬಾಗಲಕೋಟೆ ಲೋಕಸಭಾ ಸಾರ್ವತ್ರಿಕ ಚುನಾವಣೆ 2014ರ ಪ್ರಯುಕ್ತ ತಹಸೀಲ್ದಾರ್ ಕಾರ್ಯಾಲಯ ನರಗುಂದದಲ್ಲಿ (ನಿಯಂತ್ರಣ ಕೊಠಡಿ) ಪ್ರಾರಂಭಿಸಿದೆ.
ಚುನಾವಣೆ ಅಕ್ರಮ ಅಥವಾ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಈ ಕೆಳಗೆ ಕಾಣಿಸಿದ ದೂ. 08377-241343 ಇಲ್ಲಿಗೆ ಕರೆ ಮಾಡಿ ದೂರುಗಳನ್ನು ಸಲ್ಲಿಸಬಹುದಾಗಿದೆ. ಈ ನಿಯಂತ್ರಣ ಕೊಠಡಿಯ ದಿನದ 24 ಗಂಟೆಯೂ ಸೇವೆಯಲ್ಲಿರುತ್ತದೆ ಎಂದು ಬಾಗಲಕೋಟೆ ಹಾಗೂ ನರಗುಂದ ವಿಧಾನಸಭಾ ಸಹಾಯಕ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.