ಸುರಕ್ಷಿತ ದೇಶ ನಿರ್ಮಾಣಕ್ಕೆ ಮೋದಿ ಬೆಂಬಲಿಸಿ
ಹಿರೇಕೆರೂರ: ಭ್ರಷ್ಟಾಚಾರ ಮುಕ್ತ ಹಾಗೂ ದೇಶ ಸುರಕ್ಷಿತವಾಗಿರಲು ಮತ್ತು ಭಾರತವನ್ನು ಜಗತ್ತಿನಲ್ಲಿ ಮಾದರಿ ರಾಷ್ಟ್ರವನ್ನಾಗಿಸಲು ಬಿಜೆಪಿ ಪ್ರಧಾನಿ ಬಿಂಬಿತ ಅಭ್ಯರ್ಥಿ ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ. ಕಾರಣ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಬೆಂಬಲ ಸೂಚಿಸಿ ಎಂದು ಎಬಿವಿಪಿ ಸಂಘಟನೆ ಮುಖಂಡ ವಿಜಯ ಮುದಿಗೌಡ್ರ ತಿಳಿಸಿದರು. ಪಟ್ಟಣದ ಎಲ್ಲ ವಾರ್ಡ್ಗಳಲ್ಲಿ ಬಿಜೆಪಿ ಪರವಾಗಿ ಮತ ಚಲಾಯಿಸುವಂತೆ ಭಾನುವಾರ ಎಬಿವಿಪಿ ಸಂಘಟನೆಯಿಂದ ಹಮ್ಮಿಕೊಳ್ಳಲಾಗಿದ್ದ ಮತ ಪ್ರಚಾರದ ರ್ಯಾಲಿಯಲ್ಲಿ ಅವರು ಮಾತನಾಡಿದರು. ಮುಖಂಡರಾದ ನಿಂಗಾಚಾರಿ ಮಾಯಾಚಾರಿ, ನೂತನ ಚಕ್ರಸಾಲಿ, ನವೀನ ಅಂಗಡಿ, ರಾಜೇಶ್ ಪಾಟೀಲ, ನವೀನ ಹಲವಾಗಿಲ, ಕೊಟ್ರೇಶ ಮಾಳಗಿ, ಬಿ.ಟಿ. ಚಿಂದಿ, ರಮೇಶ ಮಡಿವಾಳರ, ಕಿರಣ ಬೆಳಗುತ್ತಿ, ಸಿದ್ದನಗೌಡ ಪಾಟೀಲ, ಶ್ರೀಕಾಂತ ಎಚ್.ವೈ, ರವಿ ಎಂ.ಟಿ, ಮಲ್ಲಿಕ್ ಕಲ್ಯಾಣಿ, ಹರೀಶ ಮಳವಳ್ಳಿ ಹಾಗೂ ಇತರರಿದ್ದರು.