ಇಂದು ಮಹಾರಥೋತ್ಸವ
ಬ್ಯಾಡಗಿ: ಗುಬ್ಬಿ ನಂಜುಂಡೇಶ್ವರ ಶಿವಯೋಗಿಗಳ ಸ್ಮರಣಾರ್ಥ ರೇಣುಕಾಚಾರ್ಯ ಜಯಂತಿ ಹಾಗೂ ವೀರ ಭದ್ರಸ್ವಾಮಿ ಮಹಾರಥೋತ್ಸವ ಕಾರ್ಯಕ್ರಮಗಳು ತಾಲ್ಲೂಕಿನ ರಾಮಗೊಂಡನಹಳ್ಳಿ ಗ್ರಾಮದಲ್ಲಿ ಏ. 8 ಹಾಗೂ 9ರಂದು ನಡೆ ಯಲಿದೆ. ಮಂಗಳವಾರ ಮುಂಜಾನೆ ವೀರಭದ್ರಸ್ವಾಮಿಗೆ ಅಭಿಷೇಕ, ಬಿಲ್ವಾರ್ಚನೆ, ಮಧ್ಯಾಹ್ನ 2ಕ್ಕೆ ಪುಷ್ಪ ರಥೋತ್ಸವ ಜರುಗಲಿದೆ. ಬುಧವಾರ ಸಕಲ ವಾದ್ಯ ವೈಭವಗಳೊಂದಿಗೆ ದೊಡ್ಡ ರಥೋತ್ಸವ ನಡೆಯಲಿದ್ದು, ಬಳಿಕ ಅಗ್ನಿಕುಂಡ ಪ್ರವೇಶ ಹಾಗೂ ಅನ್ನಸಂತರ್ಪಣೆ ಜರುಗಲಿವೆ. ಸಂಜೆ 7ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಇಂದು ಜಾತ್ರಾ ಮಹೋತ್ಸವ
ಬ್ಯಾಡಗಿ: ಪಟ್ಟಣದ ಅಗಸನಹಳ್ಳಿಯಲ್ಲಿ ಏ. 8ರಂದು ಮಹಾದೇವರ ಗುಗ್ಗಳ ಹಾಗೂ ಜಾತ್ರಾ ಮಹೋತ್ಸವ ನಡೆಯಲಿದೆ. ಮಂಗಳವಾರ ಮುಂಜಾನೆ ವೀರಭದ್ರಸ್ವಾಮಿಗೆ ಅಭಿಷೇಕ, ಬಿಲ್ವಾರ್ಚನೆ, ಸಂಜೆ ವಾದ್ಯ ವೈಭವಗಳೊಂದಿಗೆ ರಥೋತ್ಸವ ನಡೆಯಲಿದೆ.
ಇಂದು ವಿದ್ಯುತ್ ವ್ಯತ್ಯಯ
ಹಾವೇರಿ: ಹಾವೇರಿಯ 110, 33 ಹಾಗೂ 11 ಕೆವಿ ಸ್ಟೇಷನ್ನಿಂದ ಹೊರಹೋಗುವ ಸುಭಾಸ್ ಸರ್ಕಲ್ ಫೀಡರ್ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಏ. 8ರಂದು ಈ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ನಗರದ ಮುನ್ಸಿಪಲ್ ಹೈಸ್ಕೂಲ್ ರೋಡ್, ತಹಸೀಲ್ದಾರ್ ಕಚೇರಿ, ರೇಲ್ವೆ ಸ್ಟೇಷನ್ ರೋಡ್, ಹುಕ್ಕೇರಿಮಠ ಹತ್ತಿರ ಹಾಗೂ ಈ ಫೀಡರ್ನಿಂದ ವಿದ್ಯುತ್ ಪೂರೈಕೆಯಾಗುವ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವುದು.
ಷಣ್ಮುಖಪ್ಪನವರ ನಿಧನ
ರಾಣಿಬೆನ್ನೂರು: ತಾಲೂಕಿನ ಕೋಟಿಹಾಳ ಗ್ರಾಮದ ಎಸ್. ಷಣ್ಮುಖಪ್ಪನವರ (90) ನಿಧನರಾದರು. ಇವರ ಅಂತ್ಯಕ್ರಿಯೆಯನ್ನು ಸ್ವಗ್ರಾಮದಲ್ಲಿ ನಡೆಸಲಾಯಿತು. ಅಂತ್ಯಕ್ರಿಯೆಯಲ್ಲಿ ರಾಜ್ಯ ವೀರಶೈವ ಪಂಚಮಸಾಲಿ ಹರಿಹರ ಚರಪೀಠಾಧೀಶ 2008 ಡಾ. ಸಿದ್ಧಲಿಂಗೇಶ್ವರ ಸ್ವಾಮಿಗಳು, ಮಾಜಿ ಶಾಸಕ ಜಿ. ಶಿವಣ್ಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ರಾಘವೇಂದ್ರ ಹುರಕಡ್ಲಿ ನಿಧನ
ಹಾನಗಲ್ಲ: ಪಟ್ಟಣದ ಯುವ ಧುರೀಣ ರಾಘವೇಂದ್ರ ಬಸವಣ್ಣೆಪ್ಪ ಹುರಕಡ್ಲಿ (35) ಇತ್ತೀಚೆಗೆ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ತಾಯಿ, ಇಬ್ಬರು ಸಹೋದರರು, 6 ಸಹೋದರಿಯರು ಸೇರಿದಂತೆ ಅಪಾರ ಬಂಧು-ಬಳಗ ಇದ್ದಾರೆ.
ಬಸಮ್ಮ ಅಕ್ಕಿವಳ್ಳಿ ನಿಧನ
ಹಾನಗಲ್ಲ: ಪಟ್ಟಣದ ಸರ್ವಿಕೇರಿಯ ಪ್ರಸಿದ್ಧ ರೈತ ಕುಟುಂಬದ ಹಿರಿಯ ಮಹಿಳೆ ಬಸಮ್ಮ ಶಂಕ್ರಪ್ಪ ಅಕ್ಕಿವಳ್ಳಿ ಸೋಮವಾರ ನಿಧನರಾದರು. ಮೃತರಿಗೆ ತಾಲೂಕಿನ ಎಪಿಎಂಸಿ ಅಧ್ಯಕ್ಷ ಬಿ.ಎಸ್.ಅಕ್ಕಿವಳ್ಳಿ ಸೇರಿದಂತೆ ಐವರು ಪುತ್ರರು, ಓರ್ವ ಪುತ್ರಿ ಇದ್ದಾರೆ.