ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ಸರನಾಯಕ ಪ್ರಚಾರ

Rashmi Kasaragodu
Updated On : 8 Apr 2014, 12:37 pm

ಗದಗ: ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಜಯಕುಮಾರ ಸರನಾಯಕ ರೋಣ ತಾಲೂಕಿನ ಗ್ರಾಮಗಳಲ್ಲಿ ಏ. 8ರಂದು ಪ್ರಚಾರ ಮಾಡಲಿದ್ದಾರೆ. ಅವರೊಂದಿಗೆ ನರಗುಂದ ಶಾಸಕ ಬಿ.ಆರ್. ಯಾವಗಲ್, ರೋಣ ಶಾಸಕ ಜಿ.ಎಸ್. ಪಾಟೀಲ ಹಾಗೂ ಜಿಲ್ಲಾ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಧುರೀಣರು ಪ್ರಚಾರ ಮಾಡಲಿದ್ದಾರೆ.
470 ವಿದ್ಯಾರ್ಥಿಗಳು ಗೈರು
ಗದಗ: ಎಸ್ಎಸ್ಎಲ್ಸಿಯ ಸಮಾ ಜ ವಿಜ್ಞಾನ ಪರೀಕ್ಷೆ ಸೋಮವಾರ ಜರುಗಿದ್ದು, ಗದಗ ಜಿಲ್ಲೆಯಲ್ಲಿನ 13913 ವಿದ್ಯಾರ್ಥಿಗಳ ಪೈಕಿ 13443 ಪರೀಕ್ಷೆಗೆ ಹಾಜರಾಗಿ 470 ವಿದ್ಯಾರ್ಥಿಗಳು ಗೈರಾಗಿದ್ದರು. ಪರೀಕ್ಷೆಯ ಸಂದರ್ಭದಲ್ಲಿ ಯಾವುದೇ ರೀತಿಯ ನಕಲು ಜರುಗದಂತೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಇಂದು ಮಾರುತಿ ದೇವರ ಜಾತ್ರಾ ಮಹೋತ್ಸವ
ಮುಂಡರಗಿ: ತಾಲೂಕಿನ ಜಂತ್ಲಿ ಶಿರೂರ ಗ್ರಾಮದ ಮಾರುತಿ ದೇವರ ಜಾತ್ರಾ ಮಹೋತ್ಸವವು ಏ. 8ರಂದು ಜರುಗಲಿದ್ದು, ಅಂದು ಬೆಳಗ್ಗೆ 6ರಿಂದ 9ರ ವರೆಗೆ ದೇವರಿಗೆ ರುದ್ರಾಭಿಷೇಕ, ಸಂಜೆ 5ಕ್ಕೆ ಪಲ್ಲಕ್ಕಿ ಉತ್ಸವ ನೆರವೇರುವುದು. ಸಂಜೆ 6ಕ್ಕೆ ಜರುಗುವ ರಥೋತ್ಸವಕ್ಕೆ ಬಳಗಾನೂರಿನ ಚಿಕೇನುಕೊಪ್ಪ ಚನ್ನವೀರ ಶರಣರ ಮಠದ ಶಿವಶಾಂತವೀರ ಶ್ರೀಗಳು ಚಾಲನೆ ನೀಡುವರು. ರಾತ್ರಿ 9ಕ್ಕೆ ಶ್ರೀರಾಮ ವಾಲ್ಮೀಕಿ ಯುವಕ ಮಂಡಳ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಏ. 9ರಂದು ಸಂಜೆ 7ಕ್ಕೆ ಗದಗದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರಿಂದ ಲಘು ರಥೋತ್ಸವ ಜರುಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement