ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಾಂಗ್ರೆಸ್ನಿಂದ ಆರ್ಥಿಕ ಸಂಕಷ್ಟ: ಬೇವಿನಮರದ

Rashmi Kasaragodu
Updated On : 8 Apr 2014, 12:35 pm

ಶಿಗ್ಗಾಂವಿ: ಭಾರತ ದೇಶ ಇಂದು ಆರ್ಥಿಕ ಸಂಕಷ್ಟದಲ್ಲಿ ಮುಳುಗಿ ದಿವಾಳಿಯ ಅಂಚಿಗೆ ಬಂದು ನಿಲ್ಲಲು ಕಾಂಗ್ರೆಸ್ ಕಾರಣ. ಸಂಪದ್ಭರಿತ ರಾಷ್ಟ್ರವನ್ನು ಸಾಲಗಾರ ರಾಷ್ಟ್ರ ಎಂಬ ಹಣೆಪಟ್ಟಿಯನ್ನು ತಂದಿಟ್ಟ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ವಿಧಾನಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಹೇಳಿದರು.
ಬಿಜೆಪಿ ಶಹರ ಘಟಕದ ನೇತೃತ್ವದಲ್ಲಿ ಸೋಮವಾರ ನೂರಾರು ಕಾರ್ಯಕರ್ತರೊಂದಿಗೆ ಪಟ್ಟಣದಲ್ಲಿ ಮನೆಮನೆಗೆ ತೆರಳಿ ಧಾರವಾಡ ಲೋಕಸಭಾ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪರ ಮತ ಯಾಚಿಸಿ ಮಾತನಾಡಿದರು.
ಶಹರ ಬಿಜೆಪಿ ಘಟಕದ ಅಧ್ಯಕ್ಷ, ಪುರಸಭಾ ಸದಸ್ಯ ಸುಭಾಷ್ ಚವ್ಹಾಣ, ಪುರಸಭಾ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಉಪಾಧ್ಯಕ್ಷೆ ಶಂಕ್ರಮ್ಮ ಅಂದಲಗಿ, ಪರಶುರಾಮ ಸೊನ್ನದ, ಶಿವಪ್ರಸಾದ ಸುರಗಿಮಠ, ಬಿ.ಎಸ್. ನವಲಗುಂದ, ಫಕ್ಕೀರೇಶ ಶಿಗ್ಗಾಂವಿ, ಸಂತೋಷ ಮೊರಬದ, ಕಟ್ಟಿಮನಿ ಮತ್ತಿತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement