ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಚುನಾವಣೆ ಸಿಬ್ಬಂದಿಗೆ ಅಂಚೆ ಮತದಾನ

Rashmi Kasaragodu
Updated On : 8 Apr 2014, 12:36 pm

ಕನ್ನಡಪ್ರಭ ವಾರ್ತೆ, ಗದಗ, ಏ. 7
ಚುನಾವಣೆ ಕರ್ತವ್ಯಕ್ಕಾಗಿ ನೇಮಿಸಿದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಚುನಾವಣೆ ಸಂಬಂಧಿತ ಇತರೆ ಕರ್ತವ್ಯದಲ್ಲಿ ತೊಡಗಿದ ಎಲ್ಲರೂ ಅಂಚೆ ಮೂಲಕ ತಪ್ಪದೇ ಮತದಾನ ಮಾಡಲು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಸೂಚಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಚುನಾವಣೆ ಕಾರ್ಯದಲ್ಲಿ ತೊಡಗಿದ ಅಧಿಕಾರಿಗಳು, ಸಿಬ್ಬಂದಿ, ಚುನಾವಣೆ ಸಂಬಂಧಿತ ಇತರೆ ಕರ್ತವ್ಯದಲ್ಲಿ ತೊಡಗಿದ ಎಲ್ಲರೂ ಅಂಚೆ ಮೂಲಕ ತಪ್ಪದೇ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಜಿಲ್ಲೆಯ ಶಿರಹಟ್ಟಿ, ಗದಗ, ರೋಣ ಹಾಗೂ ನರಗುಂದ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಗಳಲ್ಲಿ ಮತದಾನ ಸೌಲಭ್ಯ ಕೇಂದ್ರಗಳನ್ನು(ಋಛ್ಛ್ಝಟ್ಝಡಿಛಡ್ಝ್ಟಿಟಿ ಈಜಟಿಡ್ಠಿಜ) ತೆರೆದು ಅವರಿಗೆ ಅಂಚೆ ಮತಪತ್ರ ಪೂರೈಸಲು ವ್ಯವಸ್ಥೆ ಮಾಡಲಾಗಿದೆ.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನೇಮಿಸಿರುವ ನೋಡಲ್ ಅಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಇಡಿಸಿ ವಿತರಣೆ ಹಾಗೂ ಅಂಚೆ ಮತಪತ್ರದ ನಿರ್ವಹಣೆ ಕಾರ್ಯಗಳಿಗೆ ಸಂಪೂರ್ಣ ಜವಾಬ್ದಾರರಾಗಿದ್ದಾರೆ.
ಅಂಚೆ ಮತಪತ್ರ ಅಥವಾ ಇಡಿಸಿ ಪೂರೈಸುವ ಬಗ್ಗೆ ನೀಡಲಾಗಿರುವ ಸೂಚನೆ ಪಾಲಿಸಬೇಕು ಹಾಗೂ ನಿಗದಿತ ನಮೂನೆಗಳಲ್ಲಿ ಮತದಾರರ ಸೌಲಭ್ಯ ಕೇಂದ್ರದ ಪ್ರಗತಿ ಬಗ್ಗೆ ಪ್ರತಿ ದಿನ ಜಿಲ್ಲಾ ಚುನಾವಣಾಧಿಕಾರಿಗಳಿಗೆ ತಪ್ಪದೇ ವರದಿ ಸಲ್ಲಿಸಬೇಕು. ಅಂಚೆ ಮತದಾನವು ಗೌಪ್ಯವಾಗಿ ಜರುಗಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳಬೇಕು. ಮತದಾನ ಸೌಲಭ್ಯ ಕೇಂದ್ರಗಳನ್ನು ತೆರೆಯುವ ಬಗ್ಗೆ ನೋಂದಾಯಿತ ಎಲ್ಲ ರಾಜಕೀಯ ಪಕ್ಷಗಳಿಗೆ ಲಿಖಿತವಾಗಿ ಸ್ಥಳದ ವಿವರ ಹಾಗೂ ದಿನಾಂಕದ ವಿವರ ತಿಳಿಸಬೇಕು ಹಾಗೂ ಅವರ ಪ್ರತಿನಿಧಿಗಳಿಗೆ ಸ್ಥಳ ಕಲ್ಪಿಸಬೇಕು ಎಂದರು.
ಚುನಾವಣಾ ಕಾರ್ಯಕ್ಕೆ ನೇಮಕಗೊಂಡವರು ತಮ್ಮ ಹೆಸರು ಯಾವ ಮತದಾರ ಪಟ್ಟಿಯಲ್ಲಿ ಇರುವುದೋ, ಆಯಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣೆ ಕೇಂದ್ರಗಳಲ್ಲಿ ಏ. 7ರಿಂದ 13ರ ವರೆಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 3ರ ವರೆಗೆ ತೆರೆದಿರುವ ಮತದಾನ ಸೌಲಭ್ಯ ಕೇಂದ್ರಗಳಿಗೆ ಬಂದು ಚುನಾವಣಾ ಆದೇಶದ ಪ್ರತಿ, ಎಪಿಕ್ ಅಥವಾ ಯಾವುದಾದರೂ ಫೋಟೋ ಪ್ರತಿಯುಳ್ಳ ಅಧಿಕೃತ ದಾಖಲೆಯೊಂದಿಗೆ ತಮಗೆ ಅನ್ವಯವಾಗುವ ನಮೂನೆಯೊಂದಿಗೆ ಅಂಚೆ ಮತಪತ್ರ ಅಥವಾ ಚುನಾವಣಾ ಕರ್ತವ್ಯ ದೃಢೀಕರಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿ ಅಂಚೆ ಮತಪತ್ರ, ಇಡಿಸಿ ಪ್ರಮಾಣಪತ್ರ ಪಡೆದುಕೊಳ್ಳಬೇಕು. ಅಂಚೆ ಮತಪತ್ರ ಪಡೆದವರು, ಮತದಾನ ಸೌಲಭ್ಯ ಕೇಂದ್ರದಲ್ಲಿ ಮತ ಚಲಾಯಿಸಬೇಕು. ಚುನಾವಣಾ ಕರ್ತವ್ಯ ದೃಢೀಕರಣ ಪತ್ರ ಪಡೆದವರು ಏ. 17ರಂದು ನಿಯೋಜಿತ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯ ಪ್ರಮಾಣಪತ್ರ ನೀಡಿ ಮತವನ್ನು ಚಲಾಯಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement