ಬೈಕ್ ಏರಿ ಪ್ರಚಾರ
ಹಾವೇರಿ: ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರವಿ ಮೆಣಸಿನಕಾಯಿ ಅವರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸೋಮವಾರ ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಹಾಗೂ ಬೈಕ್ ಏರಿ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಿದರು. ಈ ವೇಳೆ ಮಾತನಾಡಿದ ರವಿ ಮೆಣಸಿನಕಾಯಿ, ಸಂಸದ ಶಿವಕುಮಾರ ಉದಾಸಿ ಕ್ಷೇತ್ರದ ಮತದಾರರ ಕೈಗೆ ಸಿಗದೆ ನಾಟ್ ರೀಚೆಬಲ್ ಎಂಪಿ ಆಗಿದ್ದಾರೆ. ಈಗ ಚುನಾವಣೆ ಇರುವುದರಿಂದ ಕ್ಷೇತ್ರದಲ್ಲಿ ಲಭ್ಯವಿದ್ದಾರೆ. ಮುಂದೆ ಅವರು ಮತ್ತೆ ಜನರ ಕೈಗೆ ಸಿಗುವುದಿಲ್ಲ. ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿ ಹೊರಗಿನವರಾಗಿದ್ದು, ಅವರೂ ಜನತೆಗೆ ಗಗನ ಕುಸುಮವಾಗಿದ್ದಾರೆ. ಹಾಗಾಗಿ ಯಾವಾಗಲೂ ಕ್ಷೇತ್ರದಲ್ಲಿ ಲಭ್ಯವಿರುವ ತಮ್ಮನ್ನು ಮತದಾರರು ಬೆಂಬಲಿಸಲಿದ್ದಾರೆ ಎಂದರು. ಮುಖಂಡರಾದ ಪರಮೇಶ್ವರಪ್ಪ ಮೆಗಳಮನಿ, ರಮೇಶ ಬಳ್ಳಾರಿ, ಶಿವಣ್ಣ ಹೂಗಾರ, ಸಿದ್ದಪ್ಪ ಹೂಗಾರ, ನಾಗರಾಜ ಸೊಂಟನವರ, ಶಿವಲಿಂಗಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಮತ್ತೆ ಯುಪಿಎ ಸರ್ಕಾರ ಖಚಿತ
ಗಜೇಂದ್ರಗಡ: ದೇಶದ ಏಕತೆ ಮತ್ತು ಸಮಾನತೆಯ ಪ್ರತಿಪಾದನೆ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಖಚಿತ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಸ್ಥಳೀಯ ಸಿಂಹಾಸನ ಪೇಟೆಯ ಹಟಗಾರ ದೇವರದಾಸಿಮಯ್ಯ (ದೇವಾಂಗ) ಸಮಾಜದ ಮುಖಂಡರನ್ನು ಕಾಂಗ್ರೆಸ್ಗೆ ಬರಮಾಡಿಕೊಂಡು ಮಾತನಾಡಿದರು. ಜಿಲ್ಲಾ ಮುಖಂಡ ಅಶೋಕ ಬಾಗಮಾರ, ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ವೀರಣ್ಣ ಸೋನ್ನದ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಟಗಾರ ಸಮಾಜದ ಅಧ್ಯಕ್ಷ ಶಿವಶಂಕರಪ್ಪ ಬಂಟನೂರ, ವೀರಣ್ಣ ಜುಚನಿ, ಮಲ್ಲೇಶಪ್ಪ ಜುಚನಿ, ಸಿದ್ದನಗೌಡ ಶಿನ್ನೂರ, ಬಸಪ್ಪ ಯಂಕಂಚಿ, ಸಂಗಪ್ಪ ಯಂಕಂಚಿ, ಮಲ್ಲಪ್ಪ ಸಿಂಹಾಸನದ, ರಾಮಣ್ಣ ಸಿಂಹಾಸನದ, ಕಳಕಪ್ಪ ಯಂಕಂಚಿ, ಚಿದಾನಂದಗೌಡ ಶಿನ್ನೂರ, ಸೋಮನಗೌಡ ಶಿನ್ನೂರ, ಹನುಮಂತಪ್ಪ ಬಡ್ಡೂರಿ, ಪಂಪನಗೌಡ ಶಿನ್ನೂರ, ಪ್ರಭುಲಿಂಗಗೌಡ ಶಿನ್ನೂರ, ಈರಣ್ಣ ಯಂಕಂಚಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಚಂಬಣ್ಣ ಚವಡಿ, ಮೋಹನಸಾ ರಾಯಬಾಗಿ, ಎನ್.ಎಸ್. ಬಸವಾ, ಬಸವರಾಜ ಕೊಟಗಿ, ಶ್ರೀಧರ ಗಂಜಿಗೌಡ್ರ, ಶ್ರೀಕಾಂತ ಅವಧೂತ, ಸುಭಾನಸಾಬ್ ಆರಗಿದ್ದಿ, ಮುರ್ತುಜಾ ಡಾಲಾಯತ್, ಮಹಾದೇವಪ್ಪ ಪವಾರ, ಮಾರುತೆಪ್ಪ ಕಲ್ಲೋಡ್ಡರ, ರವಿ ಗಡೇದವರ, ಉಮೇಶ್ ರಾಠೋಡ ಉಪಸ್ಥಿತರಿದ್ದರು.