ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಯೋಚಿಸಿ ಮತ ನೀಡಿ: ಪಾಟೀಲ

Rashmi Kasaragodu
Updated On : 8 Apr 2014, 12:29 pm

ನರಗುಂದ: ಕೇಂದ್ರದಲ್ಲಿ 57 ವರ್ಷಕ್ಕಿಂತಲೂ ಹೆಚ್ಚು ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಆಡಳಿತದಿಂದ ಜನತೆ ಬೇಸತ್ತಿದ್ದು, ಇಂದು ದೇಶದ ಅಭಿವೃದ್ದಿ ಮರೀಚಿಕೆಯಾಗಿದೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಹೇಳಿದರು. ಅವರು ಈಚೆಗೆ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಬಿಜೆಪಿ ಪರ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತಯಾಚಿಸಿ, ನಂತರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಜ್ಯೋತಿ ಪತ್ರಿ, ಉಪಾಧ್ಯಕ್ಷ ಕಿರಣ ಮುಧೋಳ, ಸದಸ್ಯ ಶಿವಾನಂದ ಮುತ್ತವಾಡ, ವಾಸು ಜೋಗಣ್ಣವರ, ಪ್ರಕಾಶ್ ಪಟ್ಟಣಶೆಟ್ಟಿ, ಚಂದ್ರಶೇಖರ ಕೋಟಿ, ಬಸಣ್ಣವ್ವ ಪಿಡ್ಡನಾಯ್ಕರ, ಸಾವಿತ್ರಿ ಹಟ್ಟಿ, ಜ್ಯೋತಿ ಪೂಜಾರ, ರೇಣವ್ವ ಕೋರಿ, ಎಸ್.ಆರ್. ಹಿರೇಮಠ, ಎಫ್.ಆರ್. ಪಾಟೀಲ, ಬಿ.ಬಿ. ಐನಾಪುರ, ಚಂದ್ರು ದಂಡಿನ, ಅಜ್ಜು ಪಾಟೀಲ, ಸಂಗಪ್ಪ ಪೂಜಾರ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement