ಶೇ. 40ರಷ್ಟು ಮುಸ್ಲಿಂ ಮೋದಿ ಪರ: ಖುರೇಷಿ
ಬ್ಯಾಡಗಿ: ಮೋದಿಯನ್ನು ಟಾರ್ಗೆಟ್ ಮಾಡಿ ಮಾತನಾಡುವ ಕಾಂಗ್ರೆಸ್ನ ಮುಸ್ಲಿಂ ನಾಯಕರಿಗೆ ಕೆಲಸವಿಲ್ಲ. ದೇಶದ ಶೇ. 40ರಷ್ಟು ಮುಸ್ಲಿಮರು ಮೋದಿ ಪರವಾಗಿದ್ದಾರೆ ಎಂದು ಅಲ್ಪಖ್ಯಾಂತ ಆಯೋಗದ ಮಾಜಿ ಅಧ್ಯಕ್ಷ ಖುಸ್ರೋ ಖುರೇಷಿ ಕಾಂಗ್ರೆಸ್ ವರಿಷ್ಠರಿಗೆ ಸವಾಲೆಸೆದರು.
ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ವಿರುದ್ಧ ಮಾತನಾಡುವ ಅಲ್ಪಸಂಖ್ಯಾತರು ಮುಜುಗರಕ್ಕಾಗಿ ಮಾತನಾಡುತ್ತಿದ್ದಾರೆ. ಗುಜರಾತ್ನಲ್ಲಿರುವ ವಾಸ್ತವ ಸಂಗತಿಯನ್ನರಿಯದ ವ್ಯಕ್ತಿಗಳು ಪೂರ್ವಾಗ್ರಹ ಪೀಡಿತರಂತೆ ವರ್ತಿಸುತ್ತಿದ್ದಾರೆ. ಹಿಂದೂ ಮುಸ್ಲಿಮರಲ್ಲಿ ಒಡಕು ಬೇಡ, ಎರಡು ಸಮಾಜಗಳನ್ನು ಹೊಡೆಯುವ ಕೆಲಸದಲ್ಲಿ ಕಾಂಗ್ರೆಸ್ ತೊಡಗಿದೆ. ಇದರಿಂದ ದೇಶದ ಏಕತೆಗೆ ಧಕ್ಕೆ ಬರಲಿದೆ. ಇಲ್ಲಿಂದ ಲೋಕಸಭೆಗೆ ಆಯ್ಕೆಯಾದ 12 ಮುಸ್ಲಿಂ ಸದಸ್ಯರು ಕ್ಷೇತ್ರಕ್ಕೆ ಅಥವಾ ಅಲ್ಪಸಂಖ್ಯಾತ ಸಮಾಜಕ್ಕೆ ಕೊಟ್ಟಿರುವ ಕೊಡುಗೆ ಏನು ಎಂದು ಪ್ರಶ್ನಿಸಿದರು. ಅಬ್ದುಲ್ ಕಲಾಂ ಅವರಂತ ಮುಸ್ಲಿಂ ಬುದ್ಧಿಜೀವಿಯೊಬ್ಬರನ್ನು ಗುರುತಿಸಿದ ಬಿಜೆಪಿ, ದೇಶದ ರಾಷ್ಟ್ರಪತಿಯನ್ನಾಗಿ ಮಾಡಿದ ಕೀರ್ತಿ ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ಸಲ್ಲುತ್ತದೆ. ಈ ಹಿನ್ನೆಲೆಯಲ್ಲಿ ವಿಶ್ವದಲ್ಲಿರುವ ಎಲ್ಲ ಮುಸ್ಲಿಮರು ಪಕ್ಷಾತೀತವಾಗಿ ಬಿಜೆಪಿಗೆ ಅಭಿನಂದನೆ ಸಲ್ಲಿಸಬೇಕು. ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಹಜ್ ಯಾತ್ರಿಗಳಿಗೆ ಸೌಲಭ್ಯ ಹೆಚ್ಚಿಸಲಾಯಿತು. ಇದೆಲ್ಲವನ್ನೂ ಮುಸ್ಲಿಂ ಮತದಾರರು ನೆನಪಿಟ್ಟುಕೊಳ್ಳುವಂತೆ ಮನವರಿಕೆ ಮಾಡಿದರು. ಎರಡು ದಿನಗಳಿಂದ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದೇನೆ, ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಯಾವುದೇ ಸಂದರ್ಭದಲ್ಲಿ ಗೆಲವು ಸಾಧಿಸಲಿದ್ದಾರೆ. ಮುಸ್ಲಿಂ ಬಾಂಧವರು ಉದಾಸಿಯವರನ್ನು ಬಹುಮತದಿಂದ ಆಯ್ಕೆ ಮಾಡುವಂತೆ ಅವರು ಮನವಿ ಮಾಡಿದರು. ಉಕ್ಕುಂದ, ಚಂದ್ರಣ್ಣ ಮುಚ್ಚಟ್ಟಿ, ಮುರಿಗೆಪ್ಪ ಶೆಟ್ಟರ್, ಬಾಬು ಮೋಮಿನ್ಗಾರ, ದಾದಾಪೀರ್, ಮಹ್ಮದ್ಲಿ ಜಿನ್ನಾ ಹಲಗೇರಿ, ಬಾಬು ಬಡಿಗೇರ, ಮುಕ್ತಿಯಾರ್ ಮುಲ್ಲಾ, ಬಸಣ್ಣ ಬೆಟಗೇರಿ, ಮಹ್ಮದ್ಲಿ ಮೆಡ್ಲೇರಿ, ನಜೀರ್ ಅಹ್ಮದ್ ನದಾಫ್, ಮೆಹಬೂಬ್ ಅಗನಸಹಳ್ಳಿ, ಅಲ್ಲಾಭಕ್ಷ ತಿಮ್ಮಾಪುರ, ಸಿಕಂದರ್ ಪಟೇಲ್, ದಾವಲಸಾಬ್ ಮಗದೂರ, ಉಮರ್ ರಜಾಕನವರ, ಮಕಬುಲ್ ನಾರಂಗಿ, ರಾಜಸಾಬ್ ಕನವಳ್ಳಿ, ಸಂತೋಷ್ ಮೂಲಿಮನಿ, ಗುತ್ತೆಪ್ಪ ಓಲೇಕಾರ ಹಾಗೂ ಇನ್ನಿತರರು ಇದ್ದರು.