ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಪರ ಪ್ರಚಾರ

Mainashree
Updated On : 9 Apr 2014, 10:21 am

ಗದಗ: ಸ್ಥಳೀಯ ನಗರಸಭೆ ಸದಸ್ಯೆ ಕಮಲಾ ಹಾದಿಮನಿ ಅವರು ಮತದಾರರ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲು ಮನವಿ ಮಾಡಿಕೊಂಡರು.
21ನೇ ವಾರ್ಡ್ನ ಸಂಜಯ ಗಾಂಧಿ ಲೆರ್ಪೋಸಿಸ್ ಕಾಲೋನಿ, ಕುಂಬೇಶ್ವರ ಕಾಲೋನಿ, ಅಬ್ಬಿಗೇರಿ ಕಾಲೋನಿಯ ಮನೆ ಮನೆಗೆ ಸೋಮವಾರ ಭೇಟಿ ನೀಡಿ ರಾಜ್ಯ ಸರ್ಕಾರದ 10 ತಿಂಗಳಲ್ಲಿ ಮಾಡಿದ ಆಹಾರ ಭಾಗ್ಯ ಯೋಜನೆ, ಕ್ಷೀರ ಭಾಗ್ಯ ಯೋಜನೆ, ದಲಿತ ಹಿಂದು, ಅಲ್ಪಸಂಖ್ಯಾತರಿಗೆ ಸಾಲಮನ್ನಾ ಯೋಜನೆ, ಬಡವರಿಗೆ ಆಶ್ರಯ ಮನೆ ಯೋಜನೆಯನ್ನು ಮಾಡಿದ ರಾಜ್ಯ ಸರ್ಕಾರದ ಸಾಧನೆಗಳನ್ನು ಹೇಳಿ ಹಾವೇರಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಪರವಾಗಿ ಮತ ಯಾಚಿಸಿದರು. ಮೆಹಬೂಬ್ಸಾಬ್ ಮುಳಗುಂದ, ಶಬ್ಬೀರ್ ಕಾಗದಗಾರ, ಯಲ್ಲವ್ವ ದಾಸರ, ಚಿನ್ನಮ್ಮ ವಡ್ಡರ, ಸುಬ್ಬಲಕ್ಷ್ಮಿ ಬಳ್ಳಾರಿ, ಲಕ್ಷ್ಮವ್ವ ಜಾಲಗಾರ, ಗುಂಡಮ್ಮ ಬಳ್ಳಾರಿ, ಗೀತಾ ಮರಾಠಿ, ಮಂಜಮ್ಮ ಕುಕನೂರ, ದುರ್ಗಪ್ಪ ಬಂಡಿವಡ್ಡರ, ಪ್ರಕಾಶ ಗುಜರಾತಿ, ನಾಗಪ್ಪ ಜಾಲಗಾರ, ಚಂದ್ರು ದಾಸರ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement