ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸರ್ಕಾರಿ ನೌಕರರಿಂದ ಮತ ಜಾಗೃತಿ ರ್ಯಾಲಿ

Mainashree
Updated On : 9 Apr 2014, 10:21 am

ಮುಂಡರಗಿ: ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಗ್ರಾಪಂ ಹಾಗೂ ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಕಮಿಟಿ ಆಶ್ರಯದಲ್ಲಿ ಮುಂಡರಗಿ ಪಟ್ಟಣದಲ್ಲಿ ಸೋಮವಾರ ಮತದಾರರ ಜಾಗೃತಿಯ ಬೃಹತ್ ರ್ಯಾಲಿ ಜರುಗಿಸಲಾಯಿತು.
ಜಿಲ್ಲಾ ಸ್ವೀಪ್ ಕಮಿಟಿ ಅಧ್ಯಕ್ಷ ವೀರಣ್ಣ ತುರಮರಿ ಪುರಸಭೆ ಆವರಣದಲ್ಲಿ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಎಂದರೆ ಮತದಾನ, ಮತದಾನ ಮೂಲಕ ವ್ಯಕ್ತಿ ಸ್ವಾತಂತ್ರ್ಯ ವ್ಯಕ್ತಪಡಿಸುವ ಸೂಕ್ತ ವ್ಯವಸ್ಥೆಯಾಗಿದ್ದು, ಇದರಿಂದ ಯಾರೂ ತಪ್ಪಿಸಿಕೊಳ್ಳಬಾರದು, ಒಂದೊಂದು ಮತಗಳೂ ಮಹತ್ವದ್ದಾಗಿರುತ್ತವೆ. ಆದ್ದರಿಂದ ಮತದಾನದ ದಿವಸ ನಿಗದಿತ ಸಮಯದಲ್ಲಿ ಎಲ್ಲರೂ ತಪ್ಪದೇ ಕಡ್ಡಾಯವಾಗಿ ಮತದಾನ ಮಾಡುವಂತೆ ರ್ಯಾಲಿ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಜಾಗೃತಿ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ರ್ಯಾಲಿ ನಂತರ ಬಸ್ ನಿಲ್ದಾಣ ಬಳಿ ಕೆಲ ಹೊತ್ತು ಮಾನವ ಸರಪಳಿ ನಿರ್ಮಿಸಿ ಮತದಾನ ನಮ್ಮ ಹಕ್ಕು, ಮತದಾನ ಕಡ್ಡಾಯ ಮಾಡಿ ಎಂದು ಘೋಷಣೆಗಳನ್ನು ಕೂಗಿ ಜನರನ್ನು ಜಾಗ್ರತಗೊಳಿಸಲಾಯಿತು.
ರ್ಯಾಲಿಯಲ್ಲಿ ಶಿರಹಟ್ಟಿ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಟಿ. ದಿನೇಶ, ತಾಲೂಕು ಸ್ವಿಪ್ ಕಮಿಟಿ ಅಧ್ಯಕ್ಷ ಡಿ. ಮೋಹನ್, ತಹಸೀಲ್ದಾರ್ ಐ.ಡಿ. ಹೆಗ್ಗೊಂಡ, ಬಿಇಒ ಎಂ.ಎ. ರಡ್ಡೇರ, ಸಮಾಜ ಕಲ್ಯಾಣಾಧಿಕಾರಿ ಎಸ್.ಬಿ. ಹರ್ತಿ, ಲೋಕೋಪಯೋಗಿ ಇಲಾಖೆಯ ಎಚ್.ಬಿ. ಲಿಂಗರೆಡ್ಡಿ, ಮುಖ್ಯಾಧಿಕಾರಿ ರಮೇಶ ಸುಣಗಾರ, ನೌಕರರ ಸಂಘದ ಅಧ್ಯಕ್ಷ ಎಂ.ಡಿ. ಭಾವಿಮನಿ, ಜೆ.ಕೆ. ಉಳ್ಳಟ್ಟಿ, ಸಿ.ಜಿ. ಧರ್ಮಾಧಿಕಾರಿ, ಸಿಡಿಪಿಒ ಶಾರದಾ ವಾರದ, ಎಚ್.ಡಿ. ಪೂಜಾರ, ಪಿಡಿಒಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement