ದಲಿತ ಮುಖಂಡರು ಕಾಂಗ್ರೆಸ್ ಸೇರ್ಪಡೆ
ಗಜೇಂದ್ರಗಡ: ಸಮೀಪದ ಕೊಡಗಾನೂರ ಗ್ರಾಮದ ದಲಿತ ಮುಖಂಡರು ಬಿಜೆಪಿ ತೊರೆದು ಶಾಸಕ ಜಿ.ಎಸ್. ಪಾಟೀಲ ಸಮ್ಮುಖದಲ್ಲಿ ಈಚೆಗೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ಈ ವೇಳೆ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಕಳೆದ ಬಾರಿ ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿಯ ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತದಿಂದ ಬೇಸತ್ತ ಜನತೆ ಕಾಂಗ್ರೆಸ್‌ನತ್ತ ವಾಲುತ್ತಿದ್ದಾರೆ. ಜಾತ್ಯತೀತ ತತ್ವದ ಆಧಾರದ ಮೇಲೆ ಸರ್ವಧರ್ಮೀಯರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಕಾಂಗ್ರೆಸ್ ಜನಸಾಮಾನ್ಯರ ಪಕ್ಷ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಹೊರತುಪಡಿಸಿ ಅನ್ಯಪಕ್ಷಗಳಿಂದ ದೇಶದ ಅಭಿವೃದ್ದಿ ಅಸಾಧ್ಯವೆಂಬುದು ಈಗಾಗಲೇ ಸಾಬೀತಾಗಿದೆ. ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಸಮರೋಪಾದಿಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.
ಇದೇ ಸಂದರ್ಭ ರೇಣಪ್ಪ ಹರಿಜನ, ಪರಸಪ್ಪ ಹರಿಜನ, ರೇಣವ್ವ ಹರಿಜನ, ಶರಣಪ್ಪ ಹರಿಜನ, ಪರಸಪ್ಪ ಪೂಜಾರ, ಮಂಜುನಾಥ ಹರಿಜನ, ಬಸವರಾಜ ಪೂಜಾರ, ಅಂದಪ್ಪ ಹರಿಜನ, ಪ್ರಕಾಶ ಹರಿಜನ, ಶಿವಪ್ಪ ಹರಿಜನ ಸೇರಿದಂತೆ ಇತರ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಅಶೋಕ್ ಬಾಗಮಾರ, ವೀರಣ್ಣ ಸೊನ್ನದ, ಚಂಬಣ್ಣ ಚವಡಿ, ವೀರಣ್ಣ ಶೆಟ್ಟರ್, ಸುಭಾನಸಾಬ್ ಆರಗಿದ್ದಿ, ಶಾರದಾ ರಾಠೋಡ್, ಪ್ರಶಾಂತ ರಾಠೋಡ್, ಮೋಹನಸಾ ರಾಯಬಾಗಿ, ಮಾರುತೆಪ್ಪ ಕಲ್ಲೋಡ್ಡರ, ಎಫ್.ಎಸ್. ಕರಿದುರ್ಗನವರ ಇದ್ದರು.