ಮೋದಿ ಸರ್ಕಾರ ಖಚಿತ
ಮುಂಡರಗಿ: 10 ವರ್ಷದ ಯುಪಿಎ ಸರ್ಕಾರದ ದುರಾಡಳಿತ ಹಾಗೂ ವಂಶಪಾರಂಪರಿಕ ರಾಜಕಾರಣದಿಂದ ಬೇಸತ್ತ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಏ. 17ರಂದು ಜರಗುವ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿಗೆ ಮತ ನೀಡುವ ಮೂಲಕ ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಡಳಿತಕ್ಕೆ ಬರುವುದು ಖಚಿತ ಎಂದು ಶಿರಹಟ್ಟಿ ಕ್ಷೇತ್ರದ ಮಾಜಿ ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಪಟ್ಟಣದಲ್ಲಿ ರೋಡ್ ಶೋ ಹಾಗೂ ಮನೆ ಮನೆಗೆ ಭೇಟಿ ನೀಡಿ ಅಭ್ಯರ್ಥಿ ಪರ ಮತ ಯಾಚಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಅನೇಕ ಹಗರಣಗಳು, ಗ್ಯಾಸ್, ಪೆಟ್ರೋಲ್ ಸೇರಿದಂತೆ ದಿನ ಬಳಕೆಯ ಅಗತ್ಯ ವಸ್ತುಗಳನ್ನು ಪ್ರತಿದಿನ ಏರಿಸುವ ಮೂಲಕ ಜನಸಾಮಾನ್ಯರಿಗೆ ಹೊರೆ ಮಾಡಿದ ಯುಪಿಎ ಸರ್ಕಾರದಿಂದ ಬೇಸತ್ತ ಮತದಾರರು ಅಭಿವೃದ್ಧಿ ಪರವಾಗಿರುವಂಥ ಬಿಜೆಪಿಗೆ ಆಶೀರ್ವದಿಸಲಿದ್ದಾರೆ ಎಂದರು.
ರೋಡ್ ಶೋದಲ್ಲಿ ಮುಖಂಡ ಕರಬಸಪ್ಪ ಹಂಚಿನಾಳ, ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ಸೀತಾರಾಮರಾಜು, ಆರ್.ಎಂ. ತಪ್ಪಡಿ, ಎಸ್.ವಿ. ಪಾಟೀಲ, ರಜನಿಕಾಂತ ದೇಸಾಯಿ, ಶಿವನಗೌಡ ಗೌಡ್ರ, ದೇವಪ್ಪ ಕಂಬಳಿ, ಮಂಜುನಾಥ ಇಟಗಿ, ಪ್ರಭು ಅಬ್ಬೀಗೇರಿ, ಶ್ರೀನಿವಾಸ ಅಬ್ಬೀಗೇರಿ, ಮೋಹನ್ ದೇಸಾಯಿ, ಶಂಕರಗೌಡ ಪಾಟೀಲ, ಪರಶುರಾಮ ಕರಡಿಕೊಳ್ಳ, ಸುರೇಶ ಮಾಳೆಕೊಪ್ಪ, ಅಂದಪ್ಪ ಉಳ್ಳಾಗಡ್ಡಿ, ಸುರೇಶ ಜೈನ್, ಶಿವು ನಾಡಗೌಡ್ರ, ಮಹಾದೇವಪ್ಪ ಬಳ್ಳಾರಿ, ಬಸವರಾಜ ಸಸಿಮಠ, ಚಿನ್ನಪ್ಪ ವಡ್ಡಟ್ಟಿ, ಬಿ.ಕೆ. ಪಾಟೀಲ ಎಸ್.ವಿ. ಕಣವಿಮಠ ಪಾಲ್ಗೊಂಡಿದ್ದರು.