ಮೋದಿಗೆ ಬಿಜೆಪಿಯಲ್ಲಿಯೇ ಸಹಮತವಿಲ್ಲ
ಗಜೇಂದ್ರಗಡ: ನರೇಂದ್ರ ಮೋದಿಯವರು ಪ್ರಧಾನಿಯಾಗಲು ಬಿಜೆಪಿ ಆಂತರಿಕ ವಲಯದಲ್ಲೇ ಸಹಮತವಿಲ್ಲ. ಹೀಗಾಗಿ ಮೋದಿ ಹವಾ ಮಾಧ್ಯಮಕ್ಕಷ್ಟೇ ಮೀಸಲು ಎಂದು ರಾಜ್ಯ ನೇಕಾರ ಒಕ್ಕೂಟ ಅಧ್ಯಕ್ಷ ಎಂ.ಡಿ. ಲಕ್ಮೀ ನಾರಾಯಣ ಹೇಳಿದರು.
ಪಟ್ಟಣದ ಭೂಮರಡ್ಡಿಯವರ ನಿವಾಸ ಆವರಣದಲ್ಲಿ ಗುರುವಾರ ಹಾವೇರಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಪರ ಮತ ಯಾಚನಾ ಸಭೆಯಲ್ಲಿ ಮಾತನಾಡಿದರು. ಬಿಜೆಪಿಯವರು ಮಾತೆತ್ತಿದರೆ ನಮಗೆ ಅವಕಾಶ ನೀಡಿ ದೇಶವನ್ನು ಗುಜರಾತ್ ಮಾದರಿ ಅಭಿವೃದ್ಧಿಗೊಳಿಸುತ್ತೇವೆ ಎಂದು ಹೇಳಿಕೊಳ್ಳುವ ಬಿಜೆಪಿ ಮುಖಂಡರು, ಗುಜರಾತ್ ರಾಜ್ಯದ ವಾಸ್ತವ ಸ್ಥಿತಿಯನ್ನು ಜನತೆಗೆ ಮನವರಿಕೆ ಮಾಡದೆ ದೇಶದ ಜನತೆಯ ದಿಕ್ಕು ತಪ್ಪಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.
ಮಾಜಿ ಶಾಸಕ ಡಿ.ಆರ್. ಪಾಟೀಲ, ಮಾಜಿ ಸಂಸದ ಆರ್.ಎಸ್. ಪಾಟೀಲ, ಜಿಲ್ಲಾ ನೇಕಾರ ಒಕ್ಕೂಟ ಅಧ್ಯಕ್ಷ ಅಶೋಕ ಬಣ್ಣದ ಮಾತನಾಡಿದರು. ಪುರಸಭೆ ಸದಸ್ಯ ಮಕ್ತುಂಭಿ ಹಣಗಿ, ಸುಜಾತಾ ಚುಂಚಾ, ಶಾರದಾ ರಾಠೋಡ, ಶಾರಮ್ಮ ತಳವಾರ, ಸವಿತಾ ಭಾಂಡಗೆ, ರಂಜಾನಭಿ ಡಾಲಾಯತ್, ಸುಮಂಗಲಾ ಇಟಗಿ, ಅಶೋಕ ಬಾಗಮಾರ, ವೀರಣ್ಣ ಸೊನ್ನದ, ಚಂಬಣ್ಣ ಚವಡಿ, ಸುಭಾನಸಾಬ್ ಆರಗಿದ್ದಿ, ದತ್ತುಸಾ ಬಾಕಳೆ, ಪ್ರಶಾಂತ ರಾಠೋಡ್, ಮೋಹನಸಾ ರಾಯಬಾಗಿ, ನಿಂಗನಗೌಡ ಗಂಜಿಗೌಡ್ರ, ಎನ್.ಎಚ್. ಬಸವಾ, ಶ್ರೀಧರ ಬಿದರಳ್ಳಿ, ಸಂಕಣ್ಣ ಕಡ್ಡಿ, ರವಿ ಗಡೇದವರ, ಶ್ರೀಧರ ಗಂಜಿಗೌಡ್ರ, ಎಫ್.ಎಸ್. ಕರಿದುರುಗನವರ, ಮಾರುತೆಪ್ಪ ಕಲ್ಲೋಡ್ಡರ ಮತ್ತಿತರರು ಇದ್ದರು.