ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸುಭದ್ರ ಸರ್ಕಾರ ಕಾಂಗ್ರೆಸ್ ಗುರಿ

Mainashree
Updated On : 11 Apr 2014, 10:37 am

ಲಕ್ಷ್ಮೇಶ್ವರ: ಕಾಂಗ್ರೆಸ್ ಭಾರತವನ್ನು ಬಲಿಷ್ಠ ದೇಶವನ್ನಾಗಿ ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಬಿಜೆಪಿ ಈ ದೇಶಕ್ಕೆ ಯಾವ ಕೊಡುಗೆ ನೀಡಿದೆ ಎಂಬುದನ್ನು ಜನತೆಗೆ ಹೇಳಬೇಕು ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಹೇಳಿದರು. ಅವರು ಪಟ್ಟಣದಲ್ಲಿ ಗುರುವಾರ ಪಂಪ ವೃತ್ತದಿಂದ ರೋಡ್ ಶೋ ಪ್ರಾರಂಭಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಹೊಸ ಬಸ್ ನಿಲ್ದಾಣದ ಹತ್ತಿರ ಜರುಗಿದ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಜಾತಿ ಜಾತಿಗಳ ಮಧ್ಯೆ ಒಡಕು ಉಂಟು ಮಾಡಿ ಒಡೆದು ಆಳುವ ನೀತಿಯಲ್ಲಿ ನಂಬಿಕೆ ಇಟ್ಟಿಲ್ಲ. ಧರ್ಮ ಧರ್ಮಗಳ ಮಧ್ಯೆ ಹುಳಿ ಹಿಂಡುವ ಕಾರ್ಯ ಕಾಂಗ್ರೆಸ್ ಮಾಡುತ್ತಿಲ್ಲ. ಹಿಂದುಳಿದವರ ಬಡವರ ಅಭಿವೃದ್ಧಿಗಾಗಿ ಹಗಲಿರುಳು ಚಿಂತನೆ ಮಾಡುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ. ಹಾವೇರಿ ಲೋಕಸಭಾ ಕ್ಷೇತ್ರದ ಸಂಸದ ಶಿವಕುಮಾರ ಉದಾಸಿಯವರು ಕಳೆದ 5 ವರ್ಷಗಳಲ್ಲಿ ಯಾವುದೇ ಜನಪರ ಕಾರ್ಯ ಮಾಡಿಲ್ಲ. ಬೃಹತ್ ಯೋಜನೆಗಳನ್ನು ಜಾರಿಗೆ ತರುವಲ್ಲಿ ಹಿಂದೇಟು ಹಾಕುವ ಮೂಲಕ ಜಿಲ್ಲೆಯನ್ನು ಹಿಂದುಳಿಯುವಂತೆ ಮಾಡಿದ್ದಾರೆ. ಹಾವೇರಿ ಲೋಕಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಕನಸು ಇಟ್ಟುಕೊಂಡು ಸ್ಪರ್ಧಿಸಿದ್ದು ಮತದಾರರ ಬಂಧುಗಳು ಇದೊಂದು ಬಾರಿ ನನಗೆ ಆಶೀರ್ವಾದ ಮಾಡುವ ಮೂಲಕ ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಶಾಸಕ ರಾಮಕೃಷ್ಣ ದೊಡ್ಡಮನಿ, ಕುಂದಗೋಳದ ಶಾಸಕ ಸಿ.ಎಸ್. ಶಿವಳ್ಳಿ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಹನುಮಂತಯ್ಯ ಹಾಗೂ ವೆಂಕಟೇಶ ಹೆಗಡೆ ಸಲೀಂ ಅಹ್ಮದ್ ಪರವಾಗಿ ಮತಯಾಚನೆ ಮಾಡಿ, ಮಾತನಾಡಿದರು. ರೋಡ ಶೋದಲ್ಲಿ ಮಾಜಿ ಶಾಸಕ ಎಸ್.ಎನ್. ಪಾಟೀಲ, ಟಿ. ಈಶ್ವರ, ತಾಪಂ ಸದಸ್ಯ ಚನ್ನಪ್ಪ ಜಗಲಿ, ಪುರಸಭೆ ಮಾಜಿ ಅಧ್ಯಕ್ಷ ಶಂಕ್ರಪ್ಪ ಮ್ಯಾಗೇರಿ, ಜಯಕ್ಕ ಕಳ್ಳಿ, ವಿ.ಜಿ. ಪಡಗೇರಿ, ಎನ್.ಜಿ. ಹೊಂಬಳ, ಸದಸ್ಯ ಗಂಗಾಧರ ಮ್ಯಾಗೇರಿ, ದಾದಾಪೀರ ಮುಚ್ಚಾಲೆ, ರಾಜು ಕುಂಬಿ, ಬಸವರಾಜ ಓದಾನವರ, ಲೆಂಕೆಪ್ಪ ಶೆರಸೂರಿ, ಗಂಗವ್ವ ಗದ್ದಿ, ಮರಿಯವ್ವ ಅಡಗಿಮನಿ, ದೀಪಕ ಲಮಾಣಿ, ಕಿರಣ ನವಲೆ, ಬಾಬು ಅಳವಂಡಿ, ಯು.ಎನ್. ಹೊಳಲಾಪುರ, ಈರಣ್ಣ ಅಂಗಡಿ, ಎಸ್.ಪಿ. ಪಾಟೀಲ, ಪರಮೇಶ ಲಮಾಣಿ, ಬಸಣ್ಣ ಬೆಟಗೇರಿ, ಸೋಮು ಬೆಟಗೇರಿ, ನಿಲೇಶ ಕಾಳೆ, ನಿಂಗನಗೌಡ ಪಾಟೀಲ, ಸಂತೋಷ ಬಹದ್ದೂರ ದೇಸಾಯಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement