ಕಾಂಗ್ರೆಸ್‌ನಿಂದ ಸ್ಥಿರ ಸರ್ಕಾರ: ಸಲೀಂ ಅಹ್ಮದ್
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಏ. 11
ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಮಾತ್ರ ಸ್ಥಿರ ಸರ್ಕಾರ ನೀಡಲು ಸಾಧ್ಯ. ಕಾರಣ ಸುಭದ್ರ ಸರ್ಕಾರಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡುವಂತೆ ಹಾವೇರಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಮನವಿ ಮಾಡಿದರು.
ಅವರು ಗುರುವಾರ ಸಂಜೆ ಪಟ್ಟಣದಲ್ಲಿ ರೋಡ್ ಶೋ ನಡೆಸಿ ಮತ ಯಾಚನೆ ಮಾಡಿ ನಂತರ ಮಾತನಾಡಿದರು. ಬಿಜೆಪಿ ಏಕತೆ, ಸಮಾನತೆ ತತ್ವ ಹೊಂದದೇ ದೇಶದ ಜನತೆಯ ಭಾವನೆಗಳೊಂದಿಗೆ ಚಲ್ಲಾಟವಾಡುತ್ತಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲ ಸಮಾಜದವರು ಒಂದಾಗಿ ಬಾಳಬೇಕು. ಅನ್ಯಾಯ, ಅತ್ಯಾಚಾರ ಸಹಿಸಿಕೊಳ್ಳದೇ ಮೆಟ್ಟಿ ನಿಲ್ಲುವ ಸಮಯ ಈಗ ಬಂದಿದ್ದು, ದುಷ್ಟ ಸಂಹಾರ ಮಾಡಲು ಸಜ್ಜಾಗಬೇಕು ಎಂದರು.
ಶಾಸಕ ರಾಮಕೃಷ್ಣ ದೊಡ್ಡಮನಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ, ಉಪಾಧ್ಯಕ್ಷ ವೈ.ಎಸ್. ಪಾಟೀಲ, ಮಾಜಿ ಶಾಸಕ ಎಸ್.ಎನ್. ಪಾಟೀಲ, ಡಾ. ಹನುಮಂತಯ್ಯ, ವೆಂಕಟೇಶ ಹೆಗಡೆ, ಮಹೇಂದ್ರ ಮುಂಡವಾಡ, ಸಿ.ಕೆ. ಮುಳಗುಂದ, ಹುಮಾಯೂನ ಮಾಗಡಿ, ಪರಮೇಶಿ ಪರಬ, ಸಂತೋಷ ಕುರಿ, ರವಿ ದಂಡಿನ, ಮಂಜು ಘಂಟಿ, ಸುಧೀರ ಜಮಖಂಡಿ, ಸೋಮನಗೌಡ ಮರಿಗೌಡ್ರ, ಮಹಾಂತೇಶ ದಶಮನಿ ಮುಂತಾದವರು ಉಪಸ್ಥಿತರಿದ್ದರು.