ಲಕ್ಷ್ಮೇಶ್ವರದಲ್ಲಿ ಕಾಂಗ್ರೆಸ್ ಪರ ಪ್ರಚಾರ
ಲಕ್ಷ್ಮೇಶ್ವರ: ಹಾವೇರಿ ಲೋಕಸಭಾ ಕ್ಷೇತ್ರದ ಸಮಗ್ರ, ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಬೇಕು. ಕಳೆದ ಅವಧಿಯಲ್ಲಿ ಯಾವುದೇ ಅಭಿವೃದ್ಧಿಪರವಾದ ಕಾರ್ಯಗಳು ನಡೆಯದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕಾಗಿದೆ ಎಂದು ಜಿಪಂ ಮಾಜಿ ಸದಸ್ಯ ದೀಪಕ್ ಲಮಾಣಿ ಹೇಳಿದರು.
ಅವರು ಈಚೆಗೆ ಸಮೀಪದ ಸುವರ್ಣಗಿರಿ ತಾಂಡಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ ಪರವಾಗಿ ಮನೆ ಮನೆಗೆ ಮತ ಯಾಚನೆ ಮಾಡಿದರು. ಗ್ರಾಮಾಂತರ ಪ್ರದೇಶಗಳ ದೀನ ದಲಿತರ, ಬಡವರಿಗೆ ಕಾಂಗ್ರೆಸ್ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದೆ. ಅವುಗಳನ್ನು ಸಮರ್ಪಕವಾಗಿ ಜಾರಿಗೆ ತರುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಜನಸಾಮಾನ್ಯರ ನೋವಿಗೆ ಸ್ಪಂದಿಸುವ ಗುಣವುಳ್ಳ ಸಲೀಂ ಅಹ್ಮದ ಅವರನ್ನು ಆಯ್ಕೆ ಮಾಡಬೇಕಿದೆ. ತನ್ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ತಮ್ಮ ಬೆಂಬಲ ನೀಡಬೇಕಾಗಿದೆ ಎಂದರು. ದೇವಪ್ಪ ಲಮಾಣಿ, ಚಂದ್ರು ಲಮಾಣಿ, ಗ್ರಾಪಂ ಮಾಜಿ ಸದಸ್ಯ ಸೋಮನಾಥ ಪೂಜಾರ, ವೆಂಕಟೇಶ ಲಮಾಣಿ, ಪಾರವ್ವ ಲಮಾಣಿ, ರಾಮವ್ವ ಲಮಾಣಿ, ಹಾಲಪ್ಪ ಕಾರಬಾರಿ, ರುದ್ರಪ್ಪ ನಾಯಕ, ತುಕಾರಾಮ ಲಮಾಣಿ ಇದ್ದರು.