ಕಾಂಗ್ರೆಸಿಗೇಕೆ ಮೋದಿ ಚಿಂತೆ: ಶಿವಕುಮಾರ
ಗದಗ: ಕಾಂಗ್ರೆಸ್ಸಿನ ಹಲವಾರು ಹಿರಿಯ ನಾಯಕರು, ಮೋದಿಯ ವೈಯಕ್ತಿಕ ಬದುಕಿನ ಬಗ್ಗೆ ಅಗೌರವವಾಗಿ ಮಾತನಾಡುತ್ತಿರುವ ಅವರ ಘನತೆ ತಕ್ಕದಲ್ಲ ಎಂದು ಹಾವೇರಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಹೇಳಿದರು.
ಅವರು ಶನಿವಾರ ಗದಗ ನಗರದ ಹಾತಲಗೇರಿ ನಾಕಾದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಅದರಲ್ಲಿಯೂ ಗದಗ ಭಾಗದ ಕಾಂಗ್ರೆಸ್ ನಾಯಕರ ಬಗ್ಗೆ ಅಪಾರವಾದ ಗೌರವವಿದೆ. ಅವರು ಒಬ್ಬ ರಾಷ್ಟ್ರೀಯ ನಾಯಕರ ವೈಯಕ್ತಿಕ ಬದುಕಿನ ಬಗ್ಗೆ ಇಷ್ಟೊಂದು ಕೀಳಾಗಿ ಮಾತನಾಡುವುದು ಸರಿಯಲ್ಲ. ಜನತೆಯ ವಿಶ್ವಾಸ ಕಳೆದುಕೊಂಡು ನಿಮ್ಮ ಘನತೆ ಕಡಿಮೆ ಮಾಡಿಕೊಳ್ಳಬೇಡಿ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರು ಶುಕ್ರವಾರ ಮೋದಿ ಬಗ್ಗೆ ಮಾಡಿದ್ದ ಟೀಕಿಗೆ ತಿರುಗೇಟು ನೀಡಿದರು. ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ದೇಶದ ಅಭ್ಯುದಯಕ್ಕಾಗಿ ಮೋದಿ ಅವರ ನಾಯಕತ್ವ ಬೇಕಿದೆ. ಮೋದಿ ಈಗಾಗಲೇ 12 ವರ್ಷಗಳ ಕಾಲ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಅನುಭವ ಹೊಂದಿದ್ದು, ಅವರ ಮುಂದೆ ಅನನುಭವಿ ರಾಹುಲ್ ಗಾಂಧಿ ಯಾವುದೇ ದೃಷ್ಟಿಯಿಂದ ಪ್ರತಿಸ್ಪರ್ಧಿಯಾಗಲಾರ ಎಂದರು. ಅನಿಲ ಮೆಣಸಿನಕಾಯಿ, ಕಾಂಗ್ರೆಸ್ಗೆ ತಕ್ಕಪಾಠ ಕಲಿಸಿ, ಬಿಜೆಪಿ ಬೆಂಬಲಿಸಿ ಎಂದರು. ಎಸ್.ಬಿ. ಸಂಕಣ್ಣವರ, ಎಂ.ಎಂ. ಹಿರೇಮಠ, ಜಯಶ್ರೀ ಉಗಲಾಟದ, ಈಶಣ್ಣ ಮುನವಳ್ಳಿ, ಶ್ರೀಪತಿ ಉಡುಪಿ, ಸಂತೋಷ ಮೇಲಗಿರಿ, ರಾಜು ಕುರುಡಗಿ, ಮಾಧವ ಗಣಾಚಾರಿ, ಛಗನ್ ರಾಜಪುರೋಹಿತ, ಮುತ್ತು ಮುಲ್ಕಿಪಾಟೀಲ, ಮಹೇಶ ಕರಿಬಿಷ್ಠಿ ಇದ್ದರು.