ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ದೇಶಕ್ಕೆ ನರೇಂದ್ರ ಮೋದಿ ನಾಯಕತ್ವ ಅವಶ್ಯ

Lingaraj Badiger
Updated On : 13 Apr 2014, 10:17 am

ಮುಂಡರಗಿ: ಭ್ರಷ್ಟಾಚಾರ ಕಿತ್ತೆಸೆದು ಸುಭದ್ರ ಆಡಳಿತ ನೀಡುವ ಹಾಗೂ ಭಾರತವನ್ನು ಯಶಸ್ವಿ ರಾಷ್ಟ್ರವನ್ನಾಗಿಸುವಲ್ಲಿ ಈ ದೇಶ ಕಂಡ ಅಪರೂಪದ ರಾಜಕಾರಣಿ ನರೇಂದ್ರ ಮೋದಿಯವರ ನಾಯಕತ್ವ ಅವಶ್ಯವಾಗಿದೆ ಎಂದು ಹಾವೇರಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಹೇಳಿದರು.
ಅವರು ಶುಕ್ರವಾರ ರಾತ್ರಿ ಮುಂಡರಗಿ ಪಟ್ಟಣದ ಗಣೇಶ ದೇವಸ್ಥಾನದ ರಸ್ತೆಯಿಂದ ರೋಡ್ ಶೋ ನಡೆಸಿಕೊಂಡು ಪಟ್ಟಣದ ಗಾಂಧಿ ವೃತ್ತದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಮಣ್ಣ ಲಮಾಣಿ, ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ಬಿಜೆಪಿ ಮುಖಂಡ ಕರಬಸಪ್ಪ ಹಂಚಿನಾಳ, ಸೀತಾರಾಮರಾಜು, ಶಹರ ಬಿಜೆಪಿ ಅಧ್ಯಕ್ಷ ಶ್ರೀನಿವಾಸ ಅಬ್ಬೀಗೇರಿ, ಆರ್.ಎಂ. ತಪ್ಪಡಿ, ಎಸ್.ವಿ. ಪಾಟೀಲ, ರಜನೀಕಾಂತ ದೇಸಾಯಿ, ದೇವಪ್ಪ ಕಂಬಳಿ, ವೀರೇಂದ್ರ ಪಾಟೀಲ, ಶಿವನಗೌಡ ಗೌಡ್ರ, ಜ್ಯೋತಿ ಹಾನಗಲ್, ಪುರಸಭೆ ಸದಸ್ಯರಾದ ಕೊಟ್ರಮ್ಮ ಇಟಗಿ, ಪ್ರಭು ಅಬ್ಬೀಗೇರಿ, ಹೇಮಾವತಿ ಅಬ್ಬೀಗೇರಿ, ರೇಖಾ ದೇಸಾಯಿ, ಶಂಕರಗೌಡ ಪಾಟೀಲ, ಸುರೇಶ ಮಾಳೆಕೊಪ್ಪ, ದೇವಪ್ಪ ಇಟಗಿ, ಅಂದಪ್ಪ ಉಳ್ಳಾಗಡ್ಡಿ, ಸುರೇಶ ಜೈನ್, ಎಚ್. ವಿರೂಪಾಕ್ಷಗೌಡ, ಮಂಜುನಾಥ ಇಟಗಿ, ಶಿವು ನಾಡಗೌಡ್ರ, ಮಹಾದೇವಪ್ಪ ಬಳ್ಳಾರಿ, ಬಸವರಾಜ ಸಸಿಮಠ, ಜಯಶ್ರೀ ತಿಳುವಳ್ಳಿ, ಬಸವರಾಜ ಬಿಳಿಮಗ್ಗದ, ಚಿನ್ನಪ್ಪ ವಡ್ಡಟ್ಟಿ, ಬಿ.ಕೆ. ಪಾಟೀಲ, ಎಸ್.ವಿ. ಕಣವಿಮಠ ಇದ್ದರು.
ಗಣೇಶ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಪಟ್ಟಣದ ಬಸ್ ಸ್ಟ್ಯಾಂಡ್, ಭಜಾರ, ಗಾಂಧಿ ವೃತ್ತ, ಜಾಗ್ರತ ವೃತ್ತ, ಕೋಟೆಭಾಗ, ಕೊಪ್ಪಳ ವೃತ್ತದ ಮೂಲಕ ಬೃಂದಾವನ ವೃತ್ತಕ್ಕೆ ಆಗಮಿಸಿ ಮೆರವಣಿಗೆ ಮುಕ್ತಾಯಗೊಳಿಸಲಾಯಿತು.
--
ಮಟ್ಕಾ: ಗಡಿಪಾರಿಗೆ ಆದೇಶ
ಗಜೇಂದ್ರಗಡ: ಪಟ್ಟಣದಲ್ಲಿ ಮಟ್ಕಾ, ಜೂಜಾಟ ಅಪರಾಧ ಕೃತ್ಯಗಳ ಆರೋಪಿ ಚಂದ್ರುಸಾ ಸೋಮನಾಥಸಾ ರಾಯಬಾಗಿಯನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಗಡಿಪಾರು ಮಾಡಲಾಗಿದೆ ಎಂದು ಪಿಎಸ್‌ಐ ಎಚ್.ಆರ್. ನಡುಗಡ್ಡಿ ಹೇಳಿದರು. ಅವರು ಶನಿವಾರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣದಲ್ಲಿ 2000ರ ಸಾಲಿನಿಂದ ಇಲ್ಲಿಯವರೆಗೂ ಹಲವಾರು ಪ್ರಕರಣಗಳು ಈ ಆರೋಪಿ ಮೇಲೆ ದಾಖಲಾಗಿವೆ. ಅಪರಾಧ ಚಟುವಟಿಕೆಯಿಂದ ದೂರ ಇರಲು ಸಾಕಷ್ಟು ಬಾರಿ ಪೊಲೀಸರು ಎಚ್ಚರಿಕೆ ನೀಡಿದರೂ ಸಹಿತ ಸಮಾಜಘಾತುಕ ಚಟುವಟಿಕೆಯಲ್ಲಿ ಆರೋಪಿ ನಿರತನಾಗಿದ್ದನು. ಹಾಗಾಗಿ, ಜಿಲ್ಲಾ ಎಸ್‌ಪಿ ಕೆ.ಟಿ. ಬಾಲಕೃಷ್ಣ, ಡಿಎಸ್‌ಪಿ ವಿಜಯ ಡಂಬಳ, ರೋಣ ಸಿಪಿಐ ವೆಂಕಟಪ್ಪ ನಾಯಕ ಶಿಫಾರಸ್ಸಿನಂತೆ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿರುವ ಚಂದ್ರುಸಾ ಸೋಮನಾಥಸಾನನ್ನು ಗಡಿಪಾರು ಮಾಡಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement