ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮ

Lingaraj Badiger
Updated On : 13 Apr 2014, 10:17 am

ಗದಗ: ಮಾನವನ ಶರೀರದಲ್ಲಿ ಹಲವಾರು ಜೀವಕೋಶಗಳಿಂದ ಅಂಗಾಂಗಗಳು, ಕೋಶಗಳು, ನರಗಳು ಕಾರ್ಯನಿರ್ವಹಿಸುತ್ತವೆ ಎಂದು ಗದುಗಿನ ನಿವೃತ್ತ ವೈದ್ಯಾಧಿಕಾರಿ, ಸಾಹಿತಿ ಡಾ. ಪಿ.ಆರ್. ಮಾಳೆಕೊಪ್ಪಮಠ ಹೇಳಿದರು.
ಅವರು ಜಿಲ್ಲಾ ಕಸಾಪ ವತಿಯಿಂದ ನಗರದ ತಾಪಂ ಆವರಣದಲ್ಲಿ ಹಮ್ಮಿಕೊಂಡಿದ್ದ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಅವರು ಶರೀರ ವಿಜ್ಞಾನ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿದರು. ಶಿಕ್ಷಕ ಎಂ.ಎಂ. ಜೋಗಿನ ಸ್ವರಚಿತ ಕವನ ವಾಚಿಸಿದರು. ಪ್ರಾ. ಕೆ.ಎಚ್. ಬೇಲೂರ, ಶಕುಂತಲಾ ಸಿಂಧೂರ, ರೇಣುಕಾ ಬಣಕಾರ, ಜಯಶ್ರೀ ಅಂಗಡಿ, ರಾಜಶೇಖರ ಕರಡಿ, ಗುಲಾಬಸಿಂಗ್ ದಢೇಕರ, ಅ.ದ. ಕಟ್ಟಿಮನಿ, ಕನಕರಾಯ ಜಿಗಳೂರ, ಭಾಗ್ಯಶ್ರೀ ಘಳಗಿ, ಶೋಭಾ ಶಲವಡಿ, ರಾಜಶೇಖರ ಕಾಲವಾಡಮಠ, ಬಸವರಾಜ ವಾರಿ, ಶರಣಪ್ಪ ಬಾಲಣ್ಣವರ, ಮಲ್ಲಿಕಾರ್ಜುನ ಪೂಜಾರ, ಎಂ.ಪಿ. ರಮೇಶ ಉಪಸ್ಥಿತರಿದ್ದರು. ವಾಸು ಟಿಕಾನದಾರ ಪ್ರಾರ್ಥಿಸಿದರು. ಶಶಿಕಾಂತ ಕೊರ್ಲಹಳ್ಳಿ, ಸ್ವಾಗತಿಸಿದರು. ಕಿಶೋರಬಾಬು ನಾಗರಕಟ್ಟಿ ನಿರೂಪಿಸಿದರು. ಡಾ. ರಶ್ಮಿ ಸುರೇಶ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement