ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹಲ್ಲುಗಳ ಸಂರಕ್ಷಣೆ ಅತ್ಯವಶ್ಯ: ಶಂಕರ್

Lingaraj Badiger
Updated On : 13 Apr 2014, 10:17 am

ಗಜೇಂದ್ರಗಡ: ಮಾನವನ ಅಂಗಗಳಲ್ಲಿ ಅತ್ಯಂತ ಮಹತ್ವ ಪಡೆದ ದಂತ, ಆಹಾರ ಜೀರ್ಣಕ್ರಿಯೆ ಜೊತೆ ಮುಖದ ಸೌಂದರ್ಯಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಹಲ್ಲುಗಳನ್ನು ಸದೃಡವಾಗಿ ಮತ್ತು ಆರೋಗ್ಯಪೂರ್ಣವಾಗಿ ಸಂರಕ್ಷಿಸಿಕೊಳ್ಳುವುದು ಅವಶ್ಯ ಎಂದು ದಂತವೈದ್ಯ, ರೋಟರಿ ಅಧ್ಯಕ್ಷ ಟಿ.ಎಚ್. ಶಂಕರ್    ಹೇಳಿದರು.
ಅವರು ಸ್ಥಳೀಯ ಬನಶಂಕರಿ ನೇಕಾರರ ಸಹಕಾರಿ ಸಂಘದ ವತಿಯಿಂದ ಈಚೆಗೆ ನೇಕಾರರಿಗೆ ರೋಟರಿ ಸಂಸ್ಥೆ ವತಿಯಿಂದ ಉಚಿತ ದಂತ ತಪಾಸಣೆ ಶಿಬಿರದಲ್ಲಿ ಮಾತನಾಡಿದರು. ಬಾಲ್ಯದಿಂದ ಯೌವ್ವನದವರೆಗೂ ನಿತ್ಯ ಎಚ್ಚರಿಕೆಯಿಂದ ಹಲ್ಲುಗಳನ್ನು ಜೋಪಾನ ಮಾಡಿಕೊಳ್ಳಬೇಕಾದುದು ಎಲ್ಲರ ಹೊಣೆ ಎಂದರು.
ಪುರಸಭೆ ಮಾಜಿ ಸದಸ್ಯ ತಿಮ್ಮಣ್ಣ ವನ್ನಾಲ ಉದ್ಘಾಟಿಸಿದರು. ಸೊಸೈಟಿ ಅಧ್ಯಕ್ಷ ಬಾಬಣಸಾ ರಾಯಬಾಗಿ, ಕಾರ್ಯದರ್ಶಿ ಎಂ.ಎಂ. ಕುಲಕರ್ಣಿ, ಬಾಬು ಕಾತರಕಿ, ಶೇಖರ ಅಂಗಡಿ, ಮಲ್ಲಿಕಾರ್ಜುನ ಹಿರೇಮನಿ, ರಮೇಶ ಮಾರನಬಸರಿ, ಶಶಿಧರ ಕೆಂಚಿ, ಜಗದೀಶ ಕನಕೇರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement