ಅಂಬೇಡ್ಕರ್ ವಿಚಾರಧಾರೆ ಕಾಂಗ್ರೆಸ್ ಜಾರಿಗೆ ತಂದಿದೆ
ಮುಂಡರಗಿ: ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಕಾಂಗ್ರೆಸ್ ಚಾಚೂ ತಪ್ಪದೇ ಜಾರಿಗೆ ತಂದಿದೆ ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಸೋಮವಾರ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೊಟ್ರೇಶ ಅಂಗಡಿ, ಚಂದ್ರಹಾಸ ಉಳ್ಳಾಗಡ್ಡಿ, ರವೀಂದ್ರ ಉಪ್ಪಿನಬೆಟಗೇರಿ, ಧ್ರುವಕುಮಾರ ಹೊಸಮನಿ, ಎಂ.ಜಿ. ವಡ್ಡಟ್ಟಿ, ರಾಮು ಕಲಾಲ್, ಎಸ್.ಡಿ. ಮಕಾಂದಾರ, ಸೊಲಬಣ್ಣ ಜೋಬಾಳಿ, ರಾಮಣ್ಣ ಬಳ್ಳಾರಿ, ಫಕ್ರುದ್ದೀನ ಹಾರೋಗೇರಿ, ಚಂದ್ರಶೇಖರ ಬಡಿಗೇರಿ, ಬಸವರಾಜ ರಾಮೇನಹಳ್ಳಿ, ರಾಮು ಭಜಂತ್ರಿ, ಪಾಲಾ ಕ್ಷಿ ಗಣದಿನ್ನಿ, ರಾಘವೇಂದ್ರ ಕುರಿಯವರ, ವೀರೇಶ ಸಜ್ಜನರ, ಲಿಂಗರಾಜಗೌಡ ಪಾಟೀಲ, ಅಬ್ದುಲ್ ಖುರೇಶಿ, ಸೋಮನಗೌಡ ಗೌಡ್ರ, ಬಸವರಾಜ ನರೇಗಲ್, ಶೇಖರಾಜ ಹೊಸಮನಿ, ಡಿ.ಡಿ. ಮೋರನಾಳ, ಗ್ಯಾಣಪ್ಪ ಶೀರಿ, ಅಶೋಕ ಹುಬ್ಬಳ್ಳಿ, ಸೇರಿದಂತೆ ಅನೇಕರು ಇದ್ದರು.
ಬಿಜೆಪಿ: ಶಿರಹಟ್ಟಿ ವಿಧಾನಸಭೆ ಕ್ಷೇತ್ರದ ಬಿಜೆಪಿ ನೇತೃತ್ವದಲ್ಲಿ ಮುಂಡರಗಿ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಯಿತು. ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ಮಂಜುನಾಥ ಇಟಗಿ ಮಾತನಾಡಿದರು. ಬಿಜೆಪಿ ಮುಖಂಡ ಕರಬಸಪ್ಪ ಹಂಚಿನಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮಾಜಿ ಅಧ್ಯಕ್ಷ ಗೌರಮ್ಮ ಹಿರೇಮನಿ, ಮಹಾದೇವಪ್ಪ ತಾಂಬ್ರಗುಂಡಿ, ನಿಂಗಪ್ಪ ಮಾಯಮ್ಮನವರ, ಪುರಸಭೆ ಸದಸ್ಯ ಪರಶುರಾಮ ಕರಡಿಕೊಳ್ಳ, ರಜನೀಕಾಂತ ದೇಸಾಯಿ, ಎಸ್.ವಿ. ಪಾಟೀಲ, ಆರ್.ಎಂ. ತಪ್ಪಡಿ, ದೇವಪ್ಪ ಕಂಬಳಿ, ಪ್ರಭು ಅಬ್ಬಿಗೇರಿ, ಸುರೇಶ ಮಾಳೆಕೊಪ್ಪ, ಶಂಕರಗೌಡ ಪಾಟೀಲ, ಮೋಹನ್ ದೇಸಾಯಿ, ಮಹಾದೇವಪ್ಪ ಬಳ್ಳಾರಿ, ಶ್ರೀನಿವಾಸ ಅಬ್ಬಿಗೇರಿ, ದೇವಪ್ಪ ಇಟಗಿ, ಅಂದಪ್ಪ ಉಳ್ಳಾಗಡ್ಡಿ, ಟಿ.ಬಿ. ದಂಡಿನ ಇದ್ದರು.
ತಾಲೂಕು ಆಡಳಿತ: ಮುಂಡರಗಿ ತಾಲೂಕು ಆಡಳಿತದ ಪರವಾಗಿ ಮುಂಡರಗಿಯ ತಹಸೀಲ್ದಾರ್ ಕಚೇರಿಯ ಸಭಾ ಭವನದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು. ತಹಸೀಲ್ದಾರ್ ಡಿ.ಐ. ಹೆಗ್ಗೊಂಡ ಪೂಜೆ ಸಲ್ಲಿಸಿದರು. ತಾಪಂ ಇಒ ಡಾ. ಡಿ.ಮೋಹನ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಸ್.ಬಿ. ಹರ್ತಿ, ಲೋಕೋಪಯೋಗಿ ಇಲಾಖೆಯ ಎಚ್.ಬಿ. ಲಿಂಗರಡ್ಡಿ ಹಾಗೂ ಸಿಬ್ಬಂದಿ ಇದ್ದರು.
ರಾಮೇನಹಳ್ಳಿ: ಮುಂಡರಗಿ ಪುರಸಭೆ ವ್ಯಾಪ್ತಿಯ ರಾಮೇನಹಳ್ಳಿ ಗ್ರಾಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಶ್ರೀನಿವಾಸ ಅಬ್ಬಿ ಗೇರಿ, ನಿಂಗಪ್ಪ ಪೂಜಾರ, ಪರಶುರಾಮ ರಾಮೇನಹಳ್ಳಿ, ತಿಪ್ಪಣ್ಣ ವಾಲಿಕಾರ, ಯಲ್ಲಪ್ಪ ಅಬ್ಬಿಗೇರಿ, ಸಣ್ಣೆಲ್ಲಪ್ಪ ಜಮ್ಮಗಿ, ನೀಲಪ್ಪ ಆಲೂರ, ಸಹದೇವಪ್ಪ ಡಂಬಳ, ಕೋಟೆಪ್ಪ ಕಡೇಮನಿ, ಶಿವಾನಂದ ಮಾಳಮ್ಮನವರ, ಹಾಲಪ್ಪ ಪೂಜಾರ, ಮರಿಯಪ್ಪ ದೊಡ್ಡಮನಿ, ಕೃಷ್ಣಾ ಪೂಜಾರ ಇದ್ದರು.