ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇದು ಸೌಹಾರ್ದದ ತೇರು ನೋಡಣ್ಣ...

Lingaraj Badiger
Updated On : 16 Apr 2014, 1:42 am

ಗದಗ: ದೇಶದಲ್ಲಿಯೇ ಕೋಮು ಸೌಹಾರ್ದತೆಗೆ ಖ್ಯಾತಿ ಪಡೆದ ಗದಗ ನಗರದ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ರಥೋತ್ಸವ ಮಂಗಳವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
ಗದಗ-ಬೆಟಗೇರಿ ಅವಳಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆ ಭಕ್ತರು ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಮಹಾರಥೋತ್ಸವದಲ್ಲಿ ಬೆಂಗಳೂರಿನ ನಿಡುಮಾಮುಡಿ ಸಂಸ್ಥಾನ ಮಠದ ವೀರಭದ್ರ ಚೆನ್ನಮಲ್ಲ ಶ್ರೀಗಳು, ಹರಿಹರ ಪೀಠದ ಲಿಂಗಾಯತ ಪಂಚಮಸಾಲಿ ಪೀಠದ ಜ. ಸಿದ್ಧಲಿಂಗ ಶ್ರೀಗಳು, ಕಲಬುರ್ಗಿಯ ಸುಲಫಲಮಠದ ಡಾ. ಮಹಾಂತ ಶಿವಾಚಾರ್ಯರು, ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಶ್ರೀ, ಮೈಸೂರಿನ ಉರಿಲಿಗ ಪೆದ್ದಿಮಠದ ಜ್ಞಾನಪ್ರಕಾಶ ಶ್ರೀ, ಸೊನ್ನ ದಾಸೋಹ ಮಠದ ಡಾ. ಶಿವಾನಂದ ಶ್ರೀ ಸೇರಿದಂತೆ ಕ್ಷೇತ್ರಗಳ ಹರ-ಗುರು-ಚರ ಮೂರ್ತಿಗಳು ಉಪಸ್ಥಿತರಿದ್ದರು. ದೆಹಲಿಯ ಕರೋಲ್ ಭಾಗದ ಜಾಟವಾ ಜನಾಂಗದ ಭಕ್ತರು, ಕರಡಿ ಮಜಲು, ಜಾಂಜ್ ಮೇಳ, ಚಂಡಿ ಮದ್ದಳೆ, ಉಜಿರೆಯ ಓಲಗದ ಮೇಳ, ತಟ್ಟೆರಾಯನ ಕೀಲು ಕುದುರೆ ಕುಣಿತದ ತಂಡ, ಬೆಟಗೇರಿಯ ವೀರಭದ್ರೇಶ್ವರ ವೀರಗಾಸೆ ಮೇಳ, ಗದುಗಿನ ನಂದಿಕೋಲ ಸಮ್ಮಾಳ ಮೇಳ, ಅಣ್ಣಿಗೇರಿಯ ಬಸವೇಶ್ವರ ಕರಡಿ ಮಜಲು, ಗದುಗಿನ ಕೆ.ಕೆ. ಬ್ಯಾಂಜೋ ಮೇಳ, ಡೋಣಿ ಹಾಗೂ ನಾಗಾವಿ ತಾಂಡಾದ ಗಂಗಾಳ ಭಜನೆ, ಸಂದಿಗವಾಡ ಮತ್ತು ಇಂಗಳಹಳ್ಳಿ ಗ್ರಾಮಗಳ ಭಜನಾ ಮೇಳ, ದುರ್ಗಾದೇವಿ ಹೆಜ್ಜೆ ಮೇಳ, ಚಿಕ್ಕಪಡಸಲಗಿಯ ಕರಡಿ ಮಜಲು, ಕೋಲು ಕುಣಿತ, ಕಂಸಾಳೆ ನೃತ್ಯ ಕಲಾತಂಡಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದವು.
ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಜನತೆಯ ಹರ್ಷೋದ್ಗಾರದ ನಡುವೆ ಮಹಾರಥೋತ್ಸವ ಸಾಗಿ ಬಂತು. ಹರ ಹರ ಮಹಾದೇವ, ಶ್ರೀ ಗುರುಬಸವಲಿಂಗಾಯ ನಮಃ, ಸಿದ್ಧಲಿಂಗಾಯ ನಮಃ, ಸಾಂಬಶಿವ ಸಿದ್ಧಲಿಂಗ ಎಂದು ಭಕ್ತರು ಜಯಘೋಷ ಮೊಳಗಿಸಿದರು. ರಥೋತ್ಸವದ ಮುನ್ನ ಪರಂಪರೆಯಂತೆ ವೀರನಾರಾಯಣ ರಸ್ತೆಯ ಎಸ್.ಎಸ್. ಕಳಸಾಪುರಶೆಟ್ರ ನಿವಾಸದಲ್ಲಿ ಶ್ರೀಗಳ ಪೂಜೆ, ಪ್ರಸಾದ ನಡೆಯಿತು. ಅನಂತರ ಅಲಂಕೃತ ತೆರೆದ ವಾಹನದಲ್ಲಿ ಶ್ರೀಗಳ ಮೆರವಣಿಗೆ ಸಾಗಿ ಬಂದಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement