ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕೋಮುವಾದಿ ಬಿಜೆಪಿಗೆ ಮತ ನೀಡಬೇಡಿ

Lingaraj Badiger
Updated On : 16 Apr 2014, 1:48 am

ಶಿರಹಟ್ಟಿ: ರಾಷ್ಟ್ರದ ಹಿತದೃಷ್ಟಿಯಿಂದ ಕಾಂಗ್ರೆಸ್‌ಗೆ ಮತ ನೀಡಿ. ಕೋಮುವಾದಿ ಬಿಜೆಪಿಯನ್ನು ದೂರವಿಡಿ. ರಾಷ್ಟ್ರದಲ್ಲಿ ಏಕತೆ ಮೂಡಿಸುವವರು ಬೇಕು. ಭೇದ ಉಂಟು ಮಾಡುವವರು ಬೇಡ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೋಟೆಪ್ಪ ವರ್ದಿ ಹೇಳಿದರು.
ಅವರು ಸೋಮವಾರ ತಾಲೂಕಿನ ಜಲ್ಲಿಗೇರಿ, ಕಡಕೋಳ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಪರ ಮತ ಯಾಚನೆ ಮಾಡಿ ನಂತರ ಮಾತನಾಡಿದರು. ದಲಿತ ಮತ್ತು ಹಿಂದುಳಿದವರ ಏಳ್ಗೆಗೆ ಕಾಂಗ್ರೆಸ್ ಪಕ್ಷ ಶ್ರಮಿಸಿದೆ ಎಂದರು. ಮಾದಿಗ ಸಮಾಜದ ಅಧ್ಯಕ್ಷ ನಾಗರಾಜ ಪೋತರಾಜ, ಫಕೀರೇಶ ಮ್ಯಾಟಣ್ಣವರ ಮಾತನಾಡಿದರು. ಶಿರಹಟ್ಟಿ ವ್ಯಾಪ್ತಿಯ ಎಸ್ಸಿ ಘಟಕದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಹುಯಿಲಗೋಳ, ನಾಗರಾಜ ಕೆ. ದೊಡ್ಡಮನಿ, ಸೋಮೇಶ ಗಾಜಿ, ಡಿ.ಎಚ್. ದೊಡ್ಡಮನಿ, ಹೆಗ್ಗಪ್ಪ ಪೂಜಾರ, ಪರಶುರಾಮ ಅಡಗಿಮನಿ, ಹೊನ್ನಪ್ಪ ಬಾಲೇಹೊಸೂರ, ಮಂಜುನಾಥ ಹರಿಜನ, ಬಸವರಾಜ ಪೂಜಾರ, ಶರಣಪ್ಪ ಪೂಜಾರ, ಮಲ್ಲೇಶ ಹುಯಿಲಗೋಳ, ಭರಮಪ್ಪ ಪೂಜಾರ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement