ಸರ್ವತೋಮುಖ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸಿ
ಗದಗ: ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ವರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಹಾವೇರಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಅವರನ್ನು ಬಹುಮತದಿಂದ ಆರಿಸಿ ಕಳುಹಿಸುವಂತೆ ಕೆಪಿಸಿಸಿ ಪರಿಶಿಷ್ಟ ಪಂಗಡಗಳ ವಿಭಾಗದ ರಾಜ್ಯಾಧ್ಯಕ್ಷ ಟಿ. ಈಶ್ವರ ಹೇಳಿದರು.
ಅವರು ಸೋಮವಾರ ನಗರದ 12ನೇ ವಾರ್ಡಿನ ವಿವೇಕಾನಂದ ರಸ್ತೆ ಹಾಗೂ ವಿವೇಕಾನಂದ ಕೊಳಚೆ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಪರ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು.
ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯದಂತಹ ಕಾರ್ಯಕ್ರಮಗಳು ಬಡವರ ಹಿಂದುಳಿದವರ, ಅಲ್ಪಸಂಖ್ಯಾತರ ಜೀವನದಲ್ಲಿ ಗುಣಾತ್ಮಕ ಬದಲಾವಣೆ ತರುವ ಕಾರ್ಯಕ್ರಮಗಳಾಗಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಇಂತಹ ಜನಪರ ಕಾರ್ಯಕ್ರಮಗಳು ಮುಂದುವರಿಯಲು ಪ್ರತಿಯೊಬ್ಬರೂ ಕಾಂಗ್ರೆಸಿಗೆ ಮತ ನೀಡಬೇಕು ಎಂದರು. ನಗರಸಭೆ ಸದಸ್ಯ ಶ್ರೀನಿವಾಸ ಹುಯಿಲಗೋಳ ಮಾತನಾಡಿದರು.
ಮಸ್ತಾನಪ್ಪ ಗುಂತಕಲ್ಲ, ನರಸಿಂಹಪ್ಪ ರಾವುದೊಡ್ಡಿ, ಪರಶುರಾಮ, ರಾಜಗೋಪಾಲಾಚಾರ ಮಳಗಿ, ಲಿಂಗರಾಜ, ಪೀರಸಾಬ್ ಹೊಂಬಳ, ಮೆಹಬೂಬ ಹುಬ್ಬಳ್ಳಿ, ಮಾರುತಿ ರಾಲದೊಡ್ಡಿ, ಗುರುನಾಥ ಹೂಲಿ, ಪರಶುರಾಮ ದೊಡ್ಡಮನಿ, ಮನ್ಸೂರ ಇಟಗಿ, ಈರಣ್ಣ ಚಲವಾದಿ, ಸುಧೀರ ಶಿವಪುರ, ಸುಬ್ರಹ್ಮಣ್ಯ ಬೂದಿಷ್ಠ, ಚಂದ್ರು ಇಟಗಿ, ಕಲ್ಲಪ್ಪ ಹೊಂಬಾಳಿ ಮುಂತಾದವರು ಇದ್ದರು.