ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮತದಾನಕ್ಕೆ ಗದಗ ಜಿಲ್ಲಾಡಳಿತ ಸಜ್ಜು

Vishwanath S
Updated On : 17 Apr 2014, 10:21 am

ಗದಗ: ಹಾವೇರಿ ಹಾಗೂ ಬಾಗಲಕೋಟೆ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿರುವ ಗದಗ ಜಿಲ್ಲೆಯಲ್ಲಿ ಏ. 17ರಂದು ಮತದಾನ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಪೂರ್ಣಗೊಳಿಸಿ, ಮತದಾನಕ್ಕೆ ಅಣಿಯಾಗಿದೆ. ಗದಗ ಜಿಲ್ಲೆಯ ಒಟ್ಟಾರೆ ಜನಸಂಖ್ಯೆಯು 10,64,570 ಇದರ ಶೇ. 73.50ರಷ್ಟು ಅಂದರೆ 3,97,597 ಜನ ಪುರುಷ, 3,84,025 ಮಹಿಳೆಯರು ಹಾಗೂ 40 ಇತರರು. ಜಿಲ್ಲೆಯಲ್ಲಿ 7,81,662 ಮತದಾರರಿದ್ದಾರೆ.
ಹಾವೇರಿ ಲೋಕಸಭೆ ಕ್ಷೇತ್ರದ ಶಿರಹಟ್ಟಿ ವಿಧಾನಸಭೆ ಕ್ಷೇತ್ರದಲ್ಲಿ 1,93,682, ಗದಗ ಕ್ಷೇತ್ರದಲ್ಲಿ 2,01,020 ಹಾಗೂ ರೋಣ ಕ್ಷೇತ್ರದಲ್ಲಿ 2,09,577 ಮತ್ತು ಬಾಗಲಕೋಟೆ ಲೋಕಸಭೆ ವ್ಯಾಪ್ತಿಗೆ ಬರುವ ನರಗುಂದ ವಿಧಾನಸಭೆ ಕ್ಷೇತ್ರದಲ್ಲಿ 1,77,383 ಮತದಾರರು ಇದ್ದಾರೆ. ಶಿರಹಟ್ಟಿಯಲ್ಲಿ 58, ಗದಗನಲ್ಲಿ 75, ರೋಣದಲ್ಲಿ 406 ಹಾಗೂ ನರಗುಂದ ವಿಧಾನಸಭೆ ಕ್ಷೇತ್ರಗಳಲ್ಲಿ 557 ಹೀಗೆ 1096 ಸೇವಾ ಮತದಾರರಿದ್ದಾರೆ.  
ಮತ ಪ್ರಮಾಣ: ಹಿಂದಿನ 2009ರ ಲೋಕಸಭೆ ಚುನಾವಣೆಯಲ್ಲಿ ಶಿರಹಟ್ಟಿ ವಿಧಾನಸಭೆ ಕ್ಷೇತ್ರದಲ್ಲಿ ಶೇ. 59.51, ಗದಗ ಶೇ. 57.26, ರೋಣ ಶೇ.58.99, ನರಗುಂದ ಶೇ.61.71 ಹೀಗೆ ಜಿಲ್ಲೆಯ ಒಟ್ಟು ಮತದಾನ ಶೇ. 59.29 ರಷ್ಟಾಗಿತ್ತು. ಜಿಲ್ಲೆಯಲ್ಲಿ 2013ರ ವಿಧಾನಸಭೆ ಚುನಾವಣೆಯಲ್ಲಿ ಶೇ. 72.90 ರಷ್ಟು ಮತದಾನವಾಗಿತ್ತು. ಶಿರಹಟ್ಟಿ ಕ್ಷೇತ್ರದಲ್ಲಿ ಶೇ. 71.55, ಗದಗದಲ್ಲಿ ಶೇ. 70.83, ರೋಣದಲ್ಲಿ ಶೇ. 74.35 ಹಾಗೂ ನರಗುಂದದಲ್ಲಿ ಅತಿ ಹೆಚ್ಚು ಶೇ. 74.98ರಷ್ಟು ಮತದಾನವಾಗಿತ್ತು.  
ಮತದಾನ ಕೇಂದ್ರಗಳು: ಜಿಲ್ಲೆಯಲ್ಲಿ 35 ಹೊಸದಾಗಿ ಸ್ಥಾಪಿತವಾದವು ಸೇರಿದಂತೆ ಒಟ್ಟು 910 ಮತದಾನ ಕೇಂದ್ರಗಳಿವೆ. ಶಿರಹಟ್ಟಿ ವಿಧಾನಸಭೆ ಕ್ಷೇತ್ರದಲ್ಲಿ 238, ಗದಗ 205, ರೋಣ 258 ಹಾಗೂ ನರಗುಂದದಲ್ಲಿ 209 ಮತದಾನ ಕೇಂದ್ರಗಳಿವೆ.  ಜಿಲ್ಲೆಯ 910 ಮತದಾನ ಕೆಂದ್ರಗಳ ನಿರ್ವಹಣೆ 4004 ಚುನಾವಣೆ ಸಿಬ್ಬಂದಿ ನಿಯುಕ್ತರಾಗಿದ್ದಾರೆ. ಶಿರಹಟ್ಟಿಯಲ್ಲಿ 1047, ಗದಗ-902, ರೋಣ-1135 ಹಾಗೂ ನರಗುಂದ ವಿಧಾನಸಭೆ ಕ್ಷೇತ್ರಗಳಲ್ಲಿ 920 ಅಧಿಕಾರಿ ಸಿಬ್ಬಂದಿ ನಿಯುಕ್ತಿಗೊಳಿಸಲಾಗಿದೆ.
ಎಸ್‌ಎಂಎಸ್, ಇಂಟರ್‌ನೆಟ್: ಮತಗಟ್ಟೆ ಅಧಿಕಾರಿಗಳು ಸುರಕ್ಷಿತವಾಗಿ ಮತಗಟ್ಟೆಗಳಿಗೆ ತಲುಪಿದ ಬಗ್ಗೆ, ಮತದಾನ ಪ್ರಾರಂಭವಾದ ಬಗ್ಗೆ ಅಲ್ಲದೇ ಪ್ರತಿ 2 ಗಂಟೆಗೆ ಮತದಾನದ ಶೇಕಡಾವಾರು ಪ್ರಗತಿಯನ್ನು ಮತಗಟ್ಟೆ ಅಧಿಕಾರಿಗಳು ಮೇಲಧಿಕಾರಿಗಳಿಗೆ ಮಾಹಿತಿ ನೀಡುವುದಕ್ಕಾಗಿ ಹಾಗೂ ಮತದಾನವು ಸುರಕ್ಷಿತವಾಗಿ ನಡೆಯುತ್ತಿರುವ ಬಗ್ಗೆ ಎಸ್‌ಎಂಎಸ್ ಮೂಲಕ ಮಾಹಿತಿ ರವಾನೆಗೆ ವ್ಯವಸ್ಥೆ ಮಾಡಲಾಗಿದೆ. ಮತದಾನದ ವಿವರವನ್ನು www.dc-gadag.in«Ú General Elections to Lok Sabha -2014 ಲಿಂಕಿನಲ್ಲಿ ಕ್ಟಿಟಟ Poll day reports 17-04-2014 ಮೂಲಕ ಪಡೆಯಬಹುದಾಗಿದೆ. ಇದು ಸಾರ್ವಜನಿಕರಿಗೂ ಲಭ್ಯವಿರುತ್ತದೆ. ಮತದಾರರ ಅನುಕೂಲಕ್ಕಾಗಿ www.ceokarnataka.kar.nic.inಇದರಲ್ಲಿ ಮತಗಟ್ಟೆಗಳ ಸ್ಥಳ ಕಂಡುಹಿಡಿಯುವುದಕ್ಕಾಗಿ see the polling station location on google mapನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಮತದಾರರ ಪಟ್ಟಿಯ ವಿವರವನ್ನು ಅಂತರ್ಜಾಲದಲ್ಲಿ ಪ್ರಕಟಿಸಲಾಗಿದ್ದು, www.ceokarnataka.kar.nic.in ÁÚLoksabha Elections-2014 Electoral roll  ನಲ್ಲಿ ವೀಕ್ಷಿಸಬಹುದಾಗಿದೆ.  
ಚುನಾವಣೆ ಸಿಬ್ಬಂದಿ ಮತದಾನ ವಿವರ
ಸಾರ್ವತ್ರಿಕ ಚುನಾವಣೆಯ ಮತದಾನ ಕಾರ್ಯದಲ್ಲಿ ನಿಯುಕ್ತಿಗೊಂಡವರಿಗೆ ಮತದಾನ ಸೌಲಭ್ಯ ಒದಗಿಸಲು ಗದಗ ಜಿಲ್ಲಾಡಳಿತ ಎಲ್ಲ ರೀತಿ ಸೌಲಭ್ಯ ಮುಂಚಿತವಾಗಿ ಕಲ್ಪಿಸಿತ್ತು. ಪ್ರತಿ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸೌಲಭ್ಯ ಕೇಂದ್ರ ತೆರೆಯಲಾಗಿತ್ತು. ಏ. 15ರ ಅಂತ್ಯಕ್ಕೆ ಅವರು ಕರ್ತವ್ಯ ನಿರ್ವಹಿಸುವ ಮತಗಟ್ಟೆಗಳಲ್ಲೇ ಮತ ಹಾಕುವ, ಅಧಿಕಾರ ಪತ್ರಗಳನ್ನು ಒಟ್ಟು 1320 ಸಿಬ್ಬಂದಿಗೆ ನೀಡಲಾಗಿದೆ. 764 ಅಂಚೆ ಮತಪತ್ರ ನೀಡಲಾಗಿತ್ತು. ಅದರಲ್ಲಿ 632 (ಶೇ.83ರಷ್ಟು) ಮತಗಳು ಚಲಾವಣೆ ಆಗಿವೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement